ಗುಬ್ಬಿ
ತಾಲ್ಲೂಕಿನ ಅಳಿಲಘಟ್ಟ, ಹೂವಿನಕಟ್ಟೆ , ಮಾರುತಿ ನಗರ , ಶಿವರಾಂಪುರ ಹಾಗೂ ಚೇಳೂರು ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಗುದ್ದಲಿ ಸಲ್ಲಿಸಿ ಮಾತನಾಡಿದ ಅವರು ಗುತ್ತಿದಾರರು ಕಳೆಪೆ ಕಾಮಾಗಾರಿ ಮಾಡದೇ ಗುಣ ಮಟ್ಟದ ರಸ್ತೆಗಳನ್ನು ಮಾಡಬೇಕು.ಸಮಿಶ್ರ ಸರ್ಕಾರ ಉತ್ತಮ ಆಡಳಿತ ನಿರ್ವಹಿಸುತ್ತಿದೆ.ಸಾರ್ವಜನಿಕ ಸಹಕಾರ ಅಗತ್ಯ ಗುತ್ತಿಗೆದಾರರು ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಪ್ರಾಮಾಣಿಕವಾಗಿ ಸರ್ಕಾರದ ಹಣವನ್ನು ಸದುಪಯೋಗವನ್ನು ಪಡೆದುಕೋಳ್ಳಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಸಮಿಶ್ರ ಸರ್ಕಾರ ಸುಭದ್ರ :
ಸಮ್ಮೀಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲ್ಲವಿಲ್ಲ ಸಿ ಎಂ ಕುಮಾರಸ್ವಾಮಿ ಹಾಗೂ ಸಮಿಶ್ರ ಸರ್ಕಾರದವರು ಉತ್ತಮ ಆಡಳಿತವನ್ನು ಕೊಡುತ್ತಿದ್ದಾರೆ. ಯಾವ ಶಾಸಕರು ಕೂಡ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ ಎಲ್ಲವೂ ಚನ್ನಾಗಿ ನಡೆಯುತ್ತಿದೆ. ನಾವು 5ವರ್ಷ ಆಡಳಿತವನ್ನು ಮಾಡುತ್ತೇವೆ ಎಂದರು. ರೇವಣ್ಣನವರು ಯೂಡಿವರಪ್ಪನವರನ್ನು ಭೇಟಿ ಮಾಡಿಲ್ಲ ಮಾಧ್ಯಮದವರು ಸುಮ್ಮನೆ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನಾಗರಾಜು , ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧಮ್ಮ ಶಿವಣ್ಣ , ತಾಲ್ಲೂಕ್ ಪಂಚಾಯಿತಿ ಸದಸ್ಯ ಅ,ನ, ಲಿಂಗಪ್ಪ , ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ್ , ಮಂಜುನಾಥ್ , ಗುತ್ತಿಗೆದಾರರಾದ ಸುಧಾಕರ್ ರೆಡ್ಡಿ , ಅಳಿಲಘಟ್ಟ ರಮೇಶ್ , ಸುರೇಶ್ , ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.