ಗುಜುರಿ ಅಂಗಡಿಗೆ ಬೆಂಕಿ : 15 ಲಕ್ಷ ರೂ. ನಷ್ಟ

ಹುಳಿಯಾರು:

     ವಿದ್ಯುತ್ ಮೀಟರ್ ಬಾಕ್ಸ್ ಬಳಿ ಶಾರ್ಟ್ ಸಕ್ರ್ಯುಟ್ ಆಗಿ ಗುಜುರಿ ಅಂಗಡಿಗೆ ಬೆಂಕಿ ತಗುಲಿ 15 ಲಕ್ಷ ರೂ. ನಷ್ಟ ಸಂಭವಿಸಿದ ಘಟನೆ ಹುಳಿಯಾರಿನ ಬಾಲಾಜಿ ಚಿತ್ರಮಂದಿರದ ಎದುರಿನಲ್ಲಿ ಮಂಗಳವಾರ ಬೆಳಗ್ಗೆ ಜರುಗಿದೆ.ಹುಳಿಯಾರು ವಾಸಿ ಅಫೀಜ್ ಅವರಿಗೆ ಸೇರಿದ ಗುಜುರಿ ಅಂಗಡಿಯಲ್ಲಿ ಈ ದುರ್ಘಟನೆ ಜರುಗಿದೆ. ಮುಂಜಾನೆ 6 ರ ಸುಮಾರಿನಲ್ಲಿ ಗುಜುರಿ ಅಂಗಡಿಯ ಒಳಗೆ ಢಂ ಎನ್ನುವ ಜೋರು ಶಬ್ಧ ಬಂದಿದೆ. ಗಾಭರಿಯಿಂದ ಸಮೀಪದ ಹೋಟೆಲ್‍ನಲ್ಲಿ ಚಹಾ ಕುಡಿಯುತ್ತಿದ್ದವರು ಏನೆಂದು ಹೋಗಿ ನೋಡಿದಾಗ ಒಳಗೆ ಬೆಂಕಿ ಬಿದ್ದಿರುವುದು ಕಂಡುಬಂದಿದೆ.

       ತಕ್ಷಣ ಗುಜುರಿ ಅಂಗಡಿ ಮಾಲೀಕರಿಗೆ ದೂರವಾಗಿ ಮೂಲಕ ವಿಷಯ ಮುಟ್ಟಿಸಲಾಯಿತಾದರೂ ಅವರು ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಅಂಗಡಿ ಒಳಗಿದ ಅಲ್ಯುಮಿನಿಯಂ ಪಾತ್ರೆ ಸೇರಿದಂತೆ ಬೆಲೆಬಾಳುವ ಗುಜುರಿ ಐಟಂಗಳನ್ನು ಸುಟ್ಟು ಭಸ್ಮ ಮಾಡಿ ಹೊರಗಿನ ರೊಟ್ಟಿನ ಬಾಕ್ಸಿಗೆ ಆವರಿಸಿದೆ.

     ನೋಡ ನೋಡುತ್ತಿದ್ದಂತೆಯೇ ಇಡೀ ಅಂಗಡಿ ಆವರಿಸುತ್ತಿರುವುದನ್ನು ಅರಿತ ಸ್ಥಳೀಯರು ಅಕ್ಕಪಕ್ಕದ ಮನೆಯ ಸಂಪಿನಿಂದ ನೀರು ತಂದು ಹುಗ್ಗಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಪರಿಣಾಮ ಪಕ್ಕದ ಅಂಗಡಿಗಳಿಗೆ ಬೆಂಕಿಯ ಆವರಿಸುವುದನ್ನು ತಡೆಯಲು ಸಾಧ್ಯವಾಯಿ ತಷ್ಟೆ ವಿನಹ ಆರಿಸಲಾಗಲಿಲ್ಲ. ಅಷ್ಟರಲ್ಲಿ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.ಗುಜುರಿ ಅಂಗಡಿ ಮಾಲೀಕರ ದೂರಿನ ಮೇರೆಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಎಂದು ಪ್ರಕರಣ ದಾಖಲಾಗಿದ್ದು ಅಂದಾಜು 15 ಲಕ್ಷ ರೂ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap