ಮೂಲಭೂತ ಸೌಕರ್ಯಗಳಿಲ್ಲದೇ ನಲುಗಿದ ಗುತ್ತಲ

ಗುತ್ತಲ:

         ಸ್ಥಳೀಯ ಗ್ರಾ.ಪಂನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿರುವುದು ಇಲ್ಲಿನ ಜನತೆಗೆ ಸಂತಸ ತಂದಿದೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದಿರುವುದು ಬೇಸರ ತಂದಿದೆ. ಪಟ್ಟಣಕ್ಕೆ ಬರುವವರನ್ನು ಸ್ವಾಗತಿಸುವ ಬಸ್ ನಿಲ್ದಾಣವೇ ಇಲ್ಲಿನ ಅವ್ಯವಸ್ಥೆಯನ್ನು ಪರಿಚಯಿಸುತ್ತದೆ. ಸಮಸ್ಯೆಗಳ ಆಗರವಾಗಿರುವ ಗುತ್ತಲ ಬಸ್ ನಿಲ್ದಾಣದಲಿ ್ಲ ಪ್ರಯಾಣಿಕರು ಮತ್ತು ವಾಹನಗಳ ಚಾಲಕರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಅದರಲ್ಲೂ ದೂರ ದೂರಿನಿಂದ ಬಂದ ಬಸ್ ಚಾಲಕರ ಪಾಡಂತೂ ಹೇಳತಿರದು.

         ನಿಲ್ದಾಣದ ಕಟ್ಟಡ ದೊಡ್ಡದೆನಿಸಿದರು ಬಸ್ ನಿಲುಗಡೆಯ ಸ್ಥಳ ಚಿಕ್ಕದಾಗಿದೆ. ದಿನ ಬೆಳಗಾದರೆ ಗುತ್ತಲ ಮಾರ್ಗವಾಗಿ ಬಳ್ಳಾರಿ, ರಾಣೇಬೆನ್ನೂರು, ಹಾವೇರಿ, ಮಣಿಪಾಲ, ಗದಗ, ಡಾವಣಗೇರಿ, ಹುಬ್ಬಳ್ಳಿ, ಶಿರ್ಸಿ, ಬೆಂಗಳೂರು ಸೇರಿದಂತೆ ಇನ್ನೂ ಅನೇಕ ನಗರಗಳಿಗೆ ತೆರಳುವ ಬಸ್‍ಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ.

       ನಿಲಕ್ಷ್ರ್ಯ: ನಿಲ್ದಾಣವನ್ನು 1986ರಲ್ಲಿ ಅಂದಿನ ಸಾರಿಗೆ ಸಚಿವರಾದ ಪಿ.ಜಿ.ಆರ್ ಸಿಂಧ್ಯಾ ಉದ್ಘಾಟಿಸಿದ್ದಾರೆ. ಅಂದಿನಿಂದಲೂ ಅಲ್ಪ ಪ್ರಮಾಣದ ಕೆಲಸವಾಗಿದ್ದನ್ನು ಬಿಟ್ಟರೆ ಇಲ್ಲಯವರೆಗೂ ಬಸ್ ನಿಲ್ದಾಣ ಅಭಿವೃದ್ಧಿಯಿಂದ ವಂಚಿತವಾಗಿದೆ. ಪಟ್ಟಣ ಪಂಚಾಯತಿ ಎಂಬ ಹೆಗ್ಗಳಿಕೆ ಬಂದರೂ ಜನಪ್ರತಿನಿಧಿಗಳು ಅಭಿವೃದ್ಧಿಯತ್ತ ಚಿತ್ತ ಹರಿಸಿಲ್ಲಾ ಎನ್ನುತ್ತಾರೆ ಸಾರ್ವಜನಿಕರು. ನಿಲ್ದಾಣದ ಒಳಗೆ ವಾಹನಗಳು ಬಂದು ಹೋಗಬೇಕಾದರೆ ಹರಸಾಹಸವನ್ನೇ ಮಾಡಬೇಕು.

         ನಿಲ್ದಾಣಕ್ಕೆ ಮೊದಲು ಎರಡು ಮಾರ್ಗಗಳಿದ್ದವು ಆದರೆ ಸುಮಾರು ನಾಲ್ಕೈದು ವರ್ಷಗಳ ಹಿಂದೆ ನೆಗಳೂರು ಮತ್ತು ರಾಣೇಬೆನ್ನೂರು ರಸ್ತೆ ಅಗಲೀಕರಣವಾದ ನಂತರ ಒಂದು ಮಾರ್ಗ ಸ್ಥಗಿತಗೊಂಡಿದೆ. ತಾತ್ಕಾಲಿಕವಾಗಿ ಮತ್ತೊಂದು ಮಾರ್ಗದ ವ್ಯವಸ್ಥೆ ಮಾಡಿರುವುದು ಸೂಕ್ತ ರೀತಿಯಲ್ಲಿಲ್ಲ. ರಸ್ತೆ ಅಭಿವೃದ್ಧಿಯಾಗಿರುವುದು ಉತ್ತಮ ಬೆಳವಣಿಗೆ, ಆದರೆ ಸುಗಮ ಸುಗಮ ಸಂಚಾರಕ್ಕೆ ತೊಂದರೆಯಾಗಿರುವುದು ಸಾರ್ವಜನಿಕರನ್ನು ಕಂಗೆಡಿಸಿದೆ.

          ನಿಲ್ದಾಣದ ಸಮಸ್ಯೆಗಳು: ಬಸ್‍ಗಳು ನಿಲ್ಲುವುದಕ್ಕೆ ಸೂಕ್ತ ರೀತಿಯಲ್ಲಿ ಪ್ಲಾಟ ಫಾರಂಗಳು ಇಲ್ಲ, ನಿಲ್ದಾಣದಲ್ಲಿ ಬಸ್‍ಗಾಗಿ ಕಾದು ಕುಳಿತ ಪ್ರಯಾಣಿಕರಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಶೌಚಾಲಯ ವಿದ್ದರು ಅಷ್ಟಕಷ್ಟೇ ಎಂಬಂತಿದೆ, ಇಂತಹ ಪರಿಸ್ಥಿತಿ ಇದ್ದರು ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ನಿಲ್ಲುವ ದ್ವಿಚಕ್ರ ವಾಹನಗಳು ಮತ್ತು ಆಟೋ ರೀಕ್ಷಾಗಳು ಸಮಸ್ಯೆಯನ್ನು ಉಲ್ಬಣಗೊಳ್ಳುವಂತೆ ಮಾಡಿವೆ.

          ಮಹಿಳೆಯರ ವಿಶ್ರಾಂತಿ ಕೊಠಡಿ ಮೂಲೆಗುಂಪು : ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿಯನ್ನು ನಿರ್ಮಾಣಮಾಡಿ ಮಹಿಳೆಯರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಆದರೆ ಅದು ಗುತ್ತಲ ಪಟ್ಟಣದ ಬಸ್ ನಿಲ್ದಾಣವೊಂದನ್ನು ಹೊರತು ಪಡಿಸಿ ಇನ್ನುಳಿದಂತಹ ಬಸ್ ನಿಲ್ದಾಣಗಳಿಗೆ ಅನ್ವಯಿಸುತ್ತದೆ ಎಂದರೆ ತಪ್ಪಾಗಲಾರದು. ಬಸ್ ನಿಲ್ದಾಣದಲ್ಲಿರುವಂತಹ ಮಹಿಳಾ ಕೊಠಡಿ ಹೆಸರಿಗಷ್ಟೇ ಸೀಮಿತವಾಗಿದೆ ಹೊರತು ಉಪಯೋಗಕ್ಕಲ್ಲಾ ಎನ್ನುವಂತಹ ಮನೋಭಾವನೆ ಪ್ರಯಾಣಿಕರದ್ದಾಗಿದೆ.

         ಏನಾಗಬೇಕಾಗಿದೆ: ಬಸ್ ನಿಲ್ದಾಣದ ವಿಸ್ತರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ. ನಿಲ್ದಾಣದಲ್ಲಿ ರಾತ್ರಿ 10 ಗಂಟೆ ನಂತರ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಹೀಗಾಗಿ ಮಧ್ಯಪಾನ ಮಾಡಿ ರಾತ್ರಿ ಬಸ್ ನಿಲ್ದಾಣದಲ್ಲಿ ನಿದ್ರಿಸುವುದು ಮಾಮುಲಾಗಿದೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬಸ್ ನಿಲ್ದಾಣವನ್ನು ಮಾದರಿ ನಿಲ್ದಾಣವನ್ನಾಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link