ಬೆಂಗಳೂರು
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ಈ ಬಾರಿಯ ಅತಿಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಪ್ರಧಾನಮಂತ್ರಿ ಸ್ಥಾನಕ್ಕೇರಿದ ಏಕೈಕ ಕನ್ನಡಿಗರಾದ ದೇವೇಗೌಡ ಅವರು ಇದೇ ಮೊದಲ ಬಾರಿಗೆ ತಮ್ಮ ಜೀವನ ಹಾಗೂ ಸಾಧನೆ ಕುರಿತು ಸಾರ್ವಜನಿಕರೊಂದಿಗೆ ಇದೇ ಶನಿವಾರ ನೇರ ಸಂವಾದ ನಡೆಸಲಿದ್ದಾರೆ.
ದೇವೇಗೌಡರು ತಮ್ಮ ಜೀವನ ಮತ್ತು ಸಾಧನೆ ಕುರಿತು ಖುದ್ದಾಗಿ ಮಾತನಾಡಲಿದ್ದು ಬಳಿಕ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
