ಹೆಚ್1,ಎನ್-1 ಜಾಗೃತಿಗೆ ಸೂಚನೆ

ಚಿತ್ರದುರ್ಗ:

       ಹೆಚ್-1, ಎನ್-1 ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ತಾಲೂಕು ಟಾಸ್ಕ್‍ಫೋರ್ಸ್ ಕಮಿಟಿ ಸಭೆ ತಾಲೂಕು ಕಚೇರಿಯಲ್ಲಿ ಗುರುವಾರ ನಡೆಯಿತು.

      ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ ಹೆಚ್-1, ಎನ್-1 ಕುರಿತು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಹಂತಗಳಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಟಾಂ ಟಾಂ ಹೊಡಸಿ ಹೆಚ್-1, ಎನ್-1 ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

        ವಿ.ಹೆಚ್.ಎಸ್.ಎನ್.ಸಿ.ಸಭೆಗಳಲ್ಲಿ ಅರಿವು ಮೂಡಿಸಿ ಹೆಚ್-1, ಎನ್-1 ರೋಗ ವ್ಯಾಪಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆಗೆ ತಿಳಿಸಿದರು.

       ಚಿತ್ರದುರ್ಗ ನಗರದಲ್ಲಿ ಎರಡು, ಅಳಗವಾಡಿಯಲ್ಲಿ ಒಂದು, ಹಿರೇಗುಂಟನೂರಿನಲ್ಲಿ ಒಂದು ಹಾಗೂ ಚೌಲಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಒಂದು ಹೆಚ್-1, ಎನ್-1 ಪ್ರಕರಣ ಪತ್ತೆಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡುತ್ತಿರುವುದರಿಂದ ಗುಣಮುಖರಾಗುತ್ತಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಸಭೆಗೆ ಮಾಹಿತಿ ನೀಡಿದರು.

      ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ, ಸಿ.ಡಿ.ಪಿ.ಓ.ವೆಂಕಟಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮ್ಯಾನೇಜರ್ ಬಾಬುರೆಡ್ಡಿ, ಮಹಿಳಾ ಮೇಲ್ವಚಾರಕಿರಯಾದ ಆರ್.ವಿಜಯ, ಜೈತುನ್, ವಸಂತಕುಮಾರಿ ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap