2 ತಿಂಗಳಲ್ಲಿ ಹಾಗಲವಾಡಿ ಕೆರೆಗೆ ನೀರು

ಎಂ ಎನ್ ಕೋಟೆ

     ಹಾಗಲವಾಡಿ ಕೆರೆಗೆ ಇನ್ನು ಎರಡು ತಿಂಗಳಲ್ಲಿ ಹೇಮಾವತಿ ನೀರನ್ನು ಹರಿಸಲಾಗುತ್ತದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.

    ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಯಕ್ಕಲ್ಲಕಲಟ್ಟೆ ಮರೆಹಳ್ಳ ಕಾವಲ್ ಸೇತುವೆ ನಿರ್ಮಾಣಕ್ಕೆ ಸುಮಾರು 60 ಲಕ್ಷ ರೂ. ವೆಚ್ಚದ ಕಾಮಾಗಾರಿಗೆ ಮಂಗಳವಾರ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈಗಾಗಲೇ ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸಲು ಕಾಮಗಾರಿ ಆರಂಭವಾಗಿದೆ. ಈ ಬಾರಿ ಹೇಮಾವತಿ ನೀರು ನಿಲ್ಲಿಸುವಷ್ಟರಲ್ಲಿ ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಯಲಿದೆ, ಸ್ವಲ್ಪ ತಡೆಯಾಗಿದೆ ಅಷ್ಟೆ. ಈ ವಿಷಯದಲ್ಲಿ ಯಾವುದೇ ರಾಜೀಕಿಯ ಇಲ್ಲ, ಸ್ವಲ್ಪ ತಡೆಯಾಗಿತ್ತು. ಈ ಬಾರಿ ಹಾಗಲವಾಡಿಗೆ ಹರಿಯಲಿದೆ ಹೇಮೆ ಎಂದರು.

   ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಲ್ಲಿ ಇರಬೇಕು ಎಂದು ಈಗಗಾಲೇ ನಾನು ಎಲ್ಲ ಪಿಡಿಓ ಹಾಗೂ ಆಡಳಿತಾಧಿಕಾರಿಗಳ ಸಭೆ ಕರೆದು ಈಗಾಗಲೇ ಮಾಹಿತಿ ಕೊಟ್ಟಿದ್ದೇನೆ. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

   ತಾಲ್ಲೂಕಿನಲ್ಲಿ ಅಲೆಮಾರಿ ಜನಾಂಗವಾದ ಗೊಲ್ಲ ಸಮುದಾಯಕ್ಕೆ ವಿಶೇಷವಾಗಿ ವಸತಿ ಇಲ್ಲದವರನ್ನು ಪಟ್ಟಿಮಾಡಲು ಈಗಾಗಲೇ ಪಿಡಿಓ ಹಾಗೂ ಆಡಳಿತಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಆದಷ್ಟು ಬೇಗ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪಟ್ಟಿ ಮಾಡಿಕೊಡಿ ಎಂದ ಅವರು, ದೇವರಾಜು ಅರಸು ವಸತಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಗೊಲ್ಲ, ದೊಂಬಿದಾಸರು, ಹಂದಿಜೋಗರು, ಅನೇಕ ಜನಾಂಗವನ್ನು ಗುರುತಿಸಬೇಕು. ಎಲ್ಲೂ ಕೂಡ ತಪ್ಪು ನಡೆಯದಂತೆ ಸರ್ವೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಅದಷ್ಟು ಬೇಗ ತಾಲ್ಲೂಕಿನಲ್ಲಿ ವಸತಿ ಇಲ್ಲದವರಿಗೆ ವಸತಿ ಕಲ್ಪಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು.

    ಹಾಗಲವಾಡಿ ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಅತ್ಯವಶ್ಯಕವಾಗಿದೆ. ಈಗಾಗಲೆ ಹಲವು ಚೆಕ್ ಡ್ಯಾಂ ನಿರ್ಮಾಣವಾಗಿವೆ. ಇನ್ನು ಸಾಕಷ್ಟು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಭಾಗದಲ್ಲಿ ಮಳೆಯಿಲ್ಲ, ಚೆಕ್ ಡ್ಯಾಂ ಅವಶ್ಯಕವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗುರುರೇಣುಕಾರಾಧ್ಯ, ಮುಖಂಡರಾದ ಚಿತ್ರಲಿಂಗಯ್ಯ, ಕರಿಬಸವಯ್ಯ, ಕೊಟ್ಟಪ್ಪ, ಸೋಮಶೇಖರ್, ಗಿರಿಯಪ್ಪ, ಎಇ ಎಂಜಿನಿಯರ್ ಸುರೇಶ್, ಸಂತೋಷ್, ಪಿಡಿಓ ಕವಿತ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link