ಬೆಂಗಳೂರು:
ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಐದು ದಿನಗಳು ಕಳೆದಿವೆ.ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಅಂಬಿ ಕುಟುಂಬದಿಂದ ಹಾಲು-ತುಪ್ಪ ಕಾರ್ಯ ನಡೆಯಿತು.
ಬೆಳಗ್ಗೆ 9.30ರಿಂದ ಅಂಬಿ ಸಮಾಧಿಗೆ ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನಡೆಸುವ ಮೂಲಕ ಹಾಲು ತುಪ್ಪ ಕಾರ್ಯ ನಡೆಸಲಾಯಿತು.ಈ ವೇಳೆ ದರ್ಶನ್,ನಿಮಾರ್ಪಕ ರಾಕಲೈನ್ ವೆಂಕಟೇಶ್ ಸೇರಿದಂತೆ ಸ್ಯಾಂಡಲïವುಡ್ ಗಣ್ಯರು ಹಾಜರಿದ್ದರು.
ಇಂದಿನ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.ಕಾರ್ಯ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರ ವಹಿಸಲು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ 200ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಹಾಲು ತುಪ್ಪ ಕಾರ್ಯದಲ್ಲಿ ಕುಟುಂಬಸ್ಥರು ಹಾಗೂ ಸಿನಿಮಾರಂಗದವರಿಗಷ್ಟೆ ಅವಕಾಶವಿದ್ದು, ಪೂಜೆ ಆದ ನಂತರ ಅಭಿಮಾನಿಗಳಿಗೆ ಸಮಾಧಿ ವೀಕ್ಷಿಸಲು ಅವಕಾಶ ನೀಡಲಾಯಿತು.
ಇನ್ನು ಸ್ಮಾರಕ ನಿರ್ಮಿಸಲು ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಇಂದು ಸರ್ವೆ ಕಾರ್ಯ ನಡೆಯುತ್ತಿದೆ.ಡಾ. ರಾಜ್ಕುಮಾರ್ ಸ್ಮಾರಕದಂತೆಯೇ ಅಂಬಿ ಸ್ಮಾರಕ ಕೂಡಾ ನಿರ್ಮಾಣವಾಗಲಿದೆ.ಈ ಮೂಲಕ ತೆರೆ ಮೇಲೆ ಒಡಹುಟ್ಟಿದವರು ಆಗಿದ್ದ ಸ್ಯಾಂಡಲïವುಡ್ನ ಇಬ್ಬರು ಮೇರು ನಟರು ಸಾವಿನ ನಂತರವೂ ಒಂದಾದಂತಾಗುತ್ತದೆ.
ಹಾಲು ತುಪ್ಪ ಕಾರ್ಯದ ಬಳಿಕ ಅಂಬರೀಶ್ ಪತ್ನಿ ಸುಮಲತಾ,ಪುತ್ರ ಅಭಿಷೇಕ್ ಹಾಗೂ ಸಂಬಂಧಿಕರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ತೆರಳಿ ಅಸ್ಥಿ ವಿಸರ್ಜಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








