ಹಣ ಅದಿಕಾರದ ಹಿಂದೆ ಬಿಳದೇ ಜನಸೇವೆ ಮಾಡಿ ಬಿ.ಎನ್.ಚಂದ್ರಪ್ಪ

ಮೊಳಕಾಲ್ಮುರು

        ಸಾಮಾನ್ಯ ಜನರಲ್ಲಿ ಸಾಮಾನ್ಯನಾಗಿ ನಿತ್ಯನಿರಂತರ ಜನಸೇವೆಯಲ್ಲಿ ಮುಳುಗಿ ನನ್ನ ಆದಾಯದಲ್ಲಿ ಕಡಿಮೆ ಮಾಡಿಕೊಂಡಿದ್ದೇನೆ, ನಾನು ಹಳ್ಳಿಯಿಂದ ಡಿಲ್ಲಿಗೆ, ಡಿಲ್ಲಿಯಿಂದ ಹಳ್ಳಿಗೆ ತಿರುಗಾಡಿ ಜನರ ಸೇವೆ ಮಾಡಿದ್ದೇನೆ, ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು.ತಾಲ್ಲೂಕಿನ ರಾಂಪುರ ಮತ್ತು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಂಗ್ರೇಸ್ ಪಕ್ಷದ ಬಹಿರಂಗ ಪ್ರಚಾರಸಭೆಯನ್ನು ಕುರಿತು ಇವರು ಮಾತನಾಡಿದರು.

       ನಾನು ಚಿತ್ರದುರ್ಗದ ಸಂಸದನಾಗಿ ಕಳೆದ ಐದು ವರ್ಷಗಳಲ್ಲಿ ಅನೇಕ ಜನ ಮೆಚ್ಚಿದ ಅಳಿಲು ಸೇವೆ ಮಾಡಿದ್ದು, ನನಗೆ ತೃಪ್ತಿ ತಂದಿದೆ. ಹಿಂದಿನ ಚುನಾವಣೆಯಲ್ಲಿ ನನ್ನನ್ನು ನೋಡದೇ ಒಂದು ಲಕ್ಷ ಓಟುಗಳ ಅಂತರದಿಂದ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಕೊಟ್ಟಿದ್ದಿರಾ, ಕ್ಷೇತ್ರದ 18ಲಕ್ಷ ಜನರ ಕಣ್ಣು ನನ್ನನ್ನೇ ನೋಡುತ್ತಿರುತ್ತಾರೆ, ಅಂತಹ ಜನರ ಸೇವೆಗೆ ನಾನು ಸದಾ ಸಿದ್ದನಿದ್ದೇನೆ.

       ಸಂವಿಧಾನವನ್ನೇ ತಿರುಚಲು ಹೊರಟ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಓಟು ಕೊಡುವುದು ಸಮ್ಮತವಲ್ಲ, ಮೋದಿಯವರು ಪ್ರಧಾನ ಮಂತ್ರಿಯಾದ ಸಂದರ್ಭದಲ್ಲಿ 15ಲಕ್ಷ ಮತದಾರರ ಖಾತೆಗೆ ಹಾಕುತ್ತೇನೆ ಎಂದು ಹೇಳಿ 5ವರ್ಷ ಕಳೆದರೂ ಒಂದು ನಯಾ ಪೈಸೆನು ಬಂದಿಲ್ಲ, ಭಾರತದ ನಿರುದ್ಯೋಗ ಯುವಕರಿಗೆ ಉದ್ಯೋಗ ಕೊಡುತ್ತೇನೆ ಎಂದು ಹೇಳಿ ಭಾರತ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ, ಇದನ್ನು ಯುವಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಜಾತಿ ಮದ್ಯ ವಿಷ ಬೀಜ ಬತ್ತಿ, ಕೋಮುಗಲಭೆ ಮಾಡುವ ಬಿಜೆಪಿ ಪಕ್ಷವನ್ನು ಯಾವುದೇ

ಕಾರಣಕ್ಕೂ ಅದಿಕಾರಕ್ಕೆ ತರಬಾರದು,

      ರಾಷ್ಟ್ರೀಯ ದುರೀಣ ಅನಂತಕುಮಾರ್ ಬಿಜೆಪಿ ಪಕ್ಷದ ಆರ್.ಎಸ್.ಎಸ್ ಸಿದ್ದಾಂತದಂತೆ ಸೇವೆ ಸಲ್ಲಿಸಿ ಸಮಾಜದ ಅನೇಕ ನಾಗರೀಕರಿಗೆ ಮಾದರಿಯಾಗಿದ್ದಾರೆ ಅಂತಹ ವ್ಯಕ್ತಿಯ ಸೇವೆಯನ್ನು ಮರೆತು ಇಂದು ಒಬ್ಬ ಯುವಕ ತೇಜಸ್ವಿ ಸೂರ್ಯಗೆ ಟಿಕೇಟ್ ನೀಡಿದ್ದು ಬಿಜೆಪಿ ಪಕ್ಷದ ನಾಯಕರು ಪ್ರಶ್ನಿಸಕೊಳ್ಳಬೇಕಾಗಿದೆ.

      ಕಾಂಗ್ರೇಸ್ ಪಕ್ಷವು ಬಡಜನರ ಸೇವೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಸಾಮಾಜೀಕ, ಶೈಕ್ಷಣೀಕ ಆರ್ಥಿಕತೆಯಲ್ಲಿ ಸದಾ ಸೇವೆ ಸಲ್ಲಿಸುತ್ತಿರುವ ಕಾಂಗ್ರೇಸ್ ಪಕ್ಷದ ಪ್ರತೀ ಅಭ್ಯರ್ಥಿಗಳನ್ನು ಗೆಲ್ಲಿಸಿ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿ ಮಾಡಬೇಕಾಗಿದೆ ಎಂದು ಹೇಳಿದರು.

     ಮಾಜೀ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿ ಸುಳ್ಳು ಬರವಸೆ ಬಿಜೆಪಿ ಪಕ್ಷ, ಎಸ್.ಸಿ. ಎಸ್.ಟಿ ಜನಾಂಗದ ಮೀಸಲಾತಿಯನ್ನು ಕಿತ್ತುಕೊಳ್ಳವ ಜನರ ಕಷ್ಟ ನಷ್ಟಕ್ಕೆ ಸ್ಪಂದಿಸದ, ಸಂವಿಧಾನವನ್ನು ತಿದ್ದುಪಡಿ ಮಾಡ ಹೊರಟ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಓಟು ಕೊಡಬೇಡಿ. ಹಿಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರವು ಅನೇಕ ಜನಪರ 165 ಯೋಜನೆಗಳನ್ನು ನೀಡಿದ್ದು ಜನರಿಗೆ ಸಹಕಾರಿಯಾಗಿದೆ ಎಂದು ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದರು.

     ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಚಳ್ಳಕೆರೆ ಶಾಸಕ ಟಿ. ರುಘುಮೂರ್ತಿ, ವಿಧಾನ ಪರಿಷತ್ ಸದಸ್ಯರು ಜಯಮ್ಮಬಾಲರಾಜ್, ಭದ್ರ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅದ್ಯಕ್ಷ ಎಮ್. ಜಯಣ್ಣ ಜಿ.ಪ. ಸದಸ್ಯ ಮುಂಡ್ರಗಿನಾಗರಾಜ್, ಡಾ ಯೋಗೇಶ್ ಬಾಬು, ಜಿಲ್ಲಾ ಘಟಕ ಅದ್ಯಕ್ಷರು ಪಾತ್ಯರಾಜನ್, ತಾಲ್ಲುಕು ಘಟಕ ಅದ್ಯಕ್ಷರು ಪಟೇಲ್ ಪಾಪನಾಯಕ, ಮುಖಂಡರುಗಳಾದ ಅಬ್ದುಲ್ ಸುಭಾನ್ ಸಾಭ್, ಮಹಮದ್ ಕಲೀಮ್ ಸಾಭ್, ಎತ್ನಟ್ಟಿ ಗೌಡರು, ಜಿ. ಪ್ರಕಾಶ್, ವಸಿಉಲ್ಲಾ, ಮೈಲಾರಪ್ಪ, ಸಂಪತ್ ಕುಮಾರ್, ಜಗಲೂರಯ್ಯ, ವೀರೇಶ್, ಮೊಗಲಹಳ್ಳಿ ಜಯಣ್ಣ, ಯೆರ್ಜೇನಹಳ್ಳಿ ನಾಗರಾಜ್ ಗಂಗಾಧರ್, ಪರಮೇಶ್ವರ, ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap