ಹಣದ ಹುಂಡಿಗೆ ಬೆಂಕಿ : 1ಲಕ್ಷ ರೂ.ಗಳಿಗೂ ಹೆಚ್ಚು ಭಸ್ಮ

ಹಗರಿಬೊಮ್ಮನಹಳ್ಳಿ 

      ಪಟ್ಟಣದ ರಾಮನಗರದಲ್ಲಿರುವ ಶ್ರೀಸತ್ಯನಾರಾಯಣ ದೇಗುಲದ ಹಣದ ಹುಂಡಿಯನ್ನು ತೆರೆದು ಎಣಿಕೆಮಾಡಲು ಹೋದ ಟ್ರಸ್ಟಿಗಳಿಗೆ ಹುಂಡಿಯಲ್ಲಿ ಸಿಕಿದ್ದು ಯಾರೋ ಕಿಡಿಗೇಡಿಗಳು ಹಾಕಿದ ಬೆಂಕಿಗೆ ಹುಂಡಿಯಲ್ಲಿ ಸಂಗ್ರಹವಾಗಿದ್ದ 1ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತ ಭಸ್ಮವಾದ ಘಟನೆ ಶನಿವಾರ ಜರುಗಿದೆ.

       ಇಲ್ಲಿಯ ಶ್ರೀವೆಂಕಟೇಶ್ವರ ಸ್ವಾಮಿ ರಥೋತ್ಸವದ ಮೂರು ದಿನದ ಮುಂಚಿತವಾಗಿ ಪ್ರತಿ ವರ್ಷ ಹಣದ ಹುಂಡಿಯನ್ನು ತೆರೆಯಲಾಗುತ್ತಿತ್ತು. ಆದರೆ, ಈ ವರ್ಷ ಎರಡು ವರ್ಷವಾದರೂ ತೆರೆದಿರಲಿಲ್ಲ. ಒಮ್ಮೆಲೆ ಎರಡು ವಷಗಗಳಿಗೆ ಈ ಮೊತ್ವ್ವನು ತೆರೆದರಾಯಿತೆಂದು ಲೆಕ್ಕಚಾರ ಹಾಕಿಕೊಂಡಿರುವಾಗಲೇ ಈ ಅವಘಡ ನಡೆದುಹೋಗಿದೆ. ಈ ಘಟನೆಯನ್ನು ವೀಕ್ಷಸಿದ ಟ್ರಷ್ಠಿಗಳಲ್ಲಿ ಒಬ್ಬರಾದ ಗಂಗಾವತಿ ವಿಜಯಕುಮಾರ್ ಮಾತನಾಡಿ, ಈ ವರ್ಷ 2 ವರ್ಷದ ಹುಂಡಿಯ ಹಣವನ್ನು ಒಂದುದಿನ ತೆರೆದಾರಾಯಿತು ಎಂದು ನಿರ್ಧರಿಸಿದ್ದೆವು, ಅಷ್ಟರಲ್ಲಿ ಇಂತಹ ದುರ್ಘಟನೆ ನಡೆದಿದೆ.

       ಯಾರೋ ಕಿಡಿಗೇಡಿಗಳು ಶನಿವಾರ ಮಧ್ಯಾಹ್ನ 12.45 ರಿಂದ ಸಾಯಂಕಾಲ 4.30ರ ಒಳಗೆ ದೇವಸ್ಥಾನದಲ್ಲಿ ಯಾರು ಇಲ್ಲದ ಈ ಸಂದರ್ಭವನ್ನೇ ಉಪಯೋಗಿಸಿಕೊಂಡು ದೇವಸ್ಥಾನದ ಹುಂಡಿಗೆ ಬೆಂಕಿ ಹಚ್ಚಿದ್ದಾರೆ. ಸುಮಾರು ಅಂದಾಜು 1 ಲಕ್ಷರೂಪಾಯಿಗಳಿಗೂ ಹೆಚ್ಚುಹಣ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿಸಿದರು.

       ಸಂಜೆ 4.30ಕ್ಕೆ ಅರ್ಚಕ ಗಿರಿ ಆಚಾರ್ ದೇವಸ್ಥಾನದ ಬಾಗಿಲು ತೆಗೆದು ನೋಡಿದಮೇಲೆಯೇ ದೇವಸ್ಥಾನದ ತುಂಬ ಹೊಗೆ ಅರಡಿದ್ದು ಕಂಡುಬಂತು. ನಂತರ ದೇವಸ್ಥಾನದ ಹುಂಡಿಗೆ ಅತ್ತಿದ್ದ ಬೆಂಕಿಯನ್ನು ನೀರುಹಾಕಿ ಆರಿಸಲಾಯಿತು. ಆ ನಂತರ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬೇಟಿನೀಡಿ ಪರಿಶೀಲಿಸಿದ್ದಾರೆ. ಬೆಂಕಿ ಹಚ್ಚಿದ ಕಿಡಿಗೇಡಿಗಳಬಗ್ಗೆ ಶೀಘ್ರ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ವಿಜಯಕುಮಾರ್ ತಿಳಿಸಿದರು..

         ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮಕರ್ತ ನಾಣ್ಯಾಪುರ ಕೃಷ್ಣಮೂರ್ತಿ, ವಸಂತ ಮಾಲವಿ, ಚಂದ್ರಲೇಖ ಮಾಲವಿ, ವಿಜೇತ್ ಗಂಗಾವತಿ, ಕಲ್ಪನಾ ವಿಜಯಕುಮಾರ್, ನಾಣಿಕೇರಿ ಮುಖಂಡರಾದ ಬಾರಿಕರ ಬಾಪೂಜಿ, ಹೆಚ್.ಪ್ರಕಾಶ್, ದೇವಸ್ಥಾನದ ಸೇವಾಕರ್ತರಾದ ಬಾರೀಕರ ನಿಂಗಪ್ಪ, ಗಂಗಾಧರ, ಹೆಗ್ಡಾಳ್ ನಾರಾಯಣಪ್ಪ, ಶ್ರೀನಿವಾಸ, ವೆಂಕಟೇಶ, ಬಂಟ್ರ ಹುಲುಗಪ್ಪ ಹಾಗೂ ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link