ಹೊಸಪೇಟೆ :
ಹಸಿರು ಕರ್ನಾಟಕ ಆಂದೋಲನಕ್ಕೆ ಭಾಗವಹಿಸಿ ಹಸಿರು ರಾಜ್ಯವನ್ನಾಗಿಸಲು ನಮ್ಮೊಂದಿಗೆ ಕೈಜೋಡಿಸಿ, ಮನೆಗೊಂದು ಮರ ಊರಿಗೊಂದು ತೋಪು ತಾಲೂಕಿಗೊಂದು ಕಿರು ಅರಣ್ಯ ಜಿಲ್ಲೆಗೊಂದು ಕಾಡು ಹಸಿರು ಕರ್ನಾಟಕ ನಮ್ಮೆಲ್ಲರ ಧ್ಯೇಯವಾಗಲೆಂಬ ಉದ್ದೇಶಗಳನ್ನಿರಿಸಿಕೊಂಡು ಕೆ ಎಸ್ ಕಾಂಪ್ಲೆಕ್ಸ ನಲ್ಲಿ ಗುರುವಾರ ವೃಕ್ಷ ಪೂಜೆ ಮಾಡುವುದರೊಂದಿಗೆ ಕರ್ನಾಟಕ ರಾಜ್ಯ ಗ್ರೀನ್ ಆರ್ಮಿ ಅಸೋಸಿಯೇಶನ್ ಉದ್ಘಾಟನೆಗೊಂಡಿತು,
ನಂತರ ಸಂಸ್ಥೆಯ ರಾಜ್ಯಾಧ್ಯಕ್ಷ ಜೆ.ಮಂಜುನಾಥ ಮಾತನಾಡಿ ಸಂಸ್ತೆಯು ಪರಿಸರ,ರೈತ,ಕಾರ್ಮಿಕ,ಶೈಕ್ಷಣಿಕ ಮತ್ತು ಮಹಿಳಾ ಘಟಕಗಳ ಒಕ್ಕೂಟದಂತೆ ಕಾರ್ಯ ನಿರ್ವಹಿಸಲಿದೆ ಎಂದರು, ಎಲ್ಲ ಕಡೆ ಜಾಗತಿಕ ತಾಪಮಾನದಿಂದ ಪ್ರಕೃತಿ ಮುನಿಸಿಕೊಂಡು ಒಂದೆಡೆ ಅತೀ ಮಳೆ ಮತ್ತೊಂದೆಡೆ ಬಿಸಿಲು ಹೀಗೆ ಮಾನವ ಸಹಿಸಲಾರದ ಪ್ರಕೃತಿ ವಿಕೋಪಗಳು ಜರುಗುತ್ತಿದ್ದು ಮನುಷ್ಯನು ದುರಾಸೆ ಬಿಟ್ಟು ಪ್ರಕೃತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು ನಂತರ ವಡಕರಾಯ ಸ್ವಾಮಿ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಪಾದಗಟ್ಟಿ ಆಂಜನೇಯ ಸ್ವಾಮಿ ದೇವಸ್ಥಾನದ ವರೆಗೂ ನೂರಾರು ಗಿಡಗಳನ್ನು ರಸ್ತೆಯ ಎರಡೂ ಬದಿ ನೆಡಲಾಯಿತು.
ಈಸಂಧರ್ಭದಲ್ಲಿ ಗೌರವಾದ್ಯಕ್ಷ ಎ ಶಾಮತಕುಮಾರ್, ಉಪಾಧ್ಯಕ್ಕ ಜೆ. ಕುಬೇರ, ರೋಹಿತ್ ನಾಯರ್, ಹೆಚ್ ವೆಂಕಟೇಶ್,ಕಾನೂನು ಸಲಹೆಗಾರ ಬಿ.ಸಿ.ಮಹಾಂತೇಶ್. ಪ್ರಧಾನ ಕಾರ್ಯದರ್ಶಿ ಮಾರುತೇಶ್, ಸಿದ್ದಪ್ಪ, ಶ್ರೀನಿವಾಸ್,ಸೂರ್ಯನಾರಾಯಣ, ಚಂದ್ರು, ಅರುಣ್ ಕುಮಾರ್,ಆನಂದ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
