ಹಾನಗಲ್ಲ ;
ರೈತರು ಬೆಳೆದಂತ ಬೆಳೆಗೆ ವೈಜ್ಞಾನಿಕ ಬೆಂಬಲ ಸಿಗದೆ ರೈತ ಕಂಗಾಲಾಗುವ ಪರಿಸ್ಥಿತಿ ತಲೆದೋರಿದೆ ಸಾಲಮೂಲ ಮಾಡಿ ಬೆಳೆದಂತಹ ಬೆಳೆಗೆ ಬೆಂಬಲ ಬೆಲೆ ಸಿಗದೆ ಮಧ್ಯವರ್ತಿಗಳ, ಬಂಡವಾಳಶಾಹಿ ಪಾಲಾಗುತ್ತಿರುವುದನ್ನು ಸರಕಾರ ನೊಡುತ್ತ ಕಣ್ಮುಚ್ಚಿ ಕುಳಿತಿರುವುದು ಖೇದದ ಸಂಗತಿ ಎಂದು ರೈತ ಸಂಘ ಹಾಗೂ ಹಸೀರು ಸೇನೆ ರಾಜ್ಯಾಧ್ಯಕ್ಷ ರಾಮಣ್ಣ ಕೇಂಚಳ್ಳೇರ ಹರಿಹಾಯ್ದರು.
ಮಂಗಳವಾರ ಅರಷಿಣಿಗುಪ್ಪಿ ಹಾಗೂ ಬ್ಯಾಗವಾದಿ ಗ್ರಾಮಗಲ್ಲಿ ಕರ್ನಾಟಕ ರಾಜ್ಯ ಹಸೀರು ಸೇನೆ ಗ್ರಾಮ ಘಟಕ ಉದಘಾಟಿಸಿ ಮಾತನಾಡಿದ ಅವರು, ಸತತ ಬರಗಾಲದಿಂದ ಬೆಳೆಗೆ ಮಾಡಿದ್ದ ಸಾಲ ತಿರಿಸಲಾಗದೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಷ್ಟೋ ರೈತರ ಪರಿವಾರದವರು ಬಿದಿಗೆ ಬಂದಿದ್ದಾರೆ ಅವರ ಕೂಗು ಕೇಳಿಸುತ್ತಿಲ್ಲವೆ ರೈತರ ಸಾಲವನ್ನು ತಿರಿಸಲಾಗದ ಕೇಂದ್ರ ಮತ್ತು ರಾಜ್ಯ ಸರಕಾರದ ರಾಜಕೀಯ ನಾಯಕರು ಒಂದು ಮಾತು ಆಡುತ್ತಿಲ್ಲ. ದೇಶದ ಸಾಲ ಮನ್ನಾ ಮಾಡಿದರೆ ಆರ್ಥಿಕ ಸಂಕಷ್ಟ ತಲೆದೊರುತ್ತದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದದ ಸಂಗತಿ. ರೈತರು ನಿರಂತರ ಮೊಸಕ್ಕೆ ಒಳಗಾಗುತ್ತಿದ್ದಾನೆ ಬೆಳೆಗೆ ವೈಜ್ಞಾನಿಕ ಬೆಂಬಲ ನೀಡದೆ ವಿನಾ ಕಾರಣ ತೊಂದರೆ ಕುಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ದಿವ್ಯ ಸಾನಿದ್ಯ ವಹಿಸಿ ಹೇರೂರಿನ ಗುಬ್ಬಿ ನಂಜುಂಡೇಶ್ವ ಮಠದ ನಂಜುಂಡ ಪಂಡಿತಾರಾದ್ಯ ಸ್ವಾಮಿಗಳು ಮಾತನಾಡಿ, ದೇಶದ ಬೆನ್ನೆಲಬು ರೈತನಾಗಿದ್ದಾನೆ. ರೈತರು ಸೋಮಾರಿಗಳು, ಮೈಗಳ್ಳರಲ್ಲ ದೇಶ ಆಳುವವರು ಮೈಗಳ್ಳರು, ರಾಜಕಾರಣಿಗಳ ಸುಳ್ಳು ಬರವಸೆಗಳನ್ನು ರೈತರು ಅರಿತಿದ್ದಾರೆ. ರೈತರ ಸಂಗಟನೆಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕಿಡಿಕಾರಿದರು.
ತಾಲೂಕ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಸರಕಾರದ ಯೋಜನೆಗಳು ಸಿಗಬೇಕಾದರೆ ರೈತ ಸಂಘಟನೆಯಿಂದ ಮಾತ್ರ ಸಾದ್ಯ. ಎಲ್ಲ ಭಾಗಗಳಳ್ಲಿ ರೈತರ ಹೆಚ್ಚು ಹೆಚ್ಚು ಸಂಘಟಿತರಾಗಬೇಕು ಅಂದಾಗ ಮಾತ್ರ ರೈತ ಸಂಘಕ್ಕೆ ಶಕ್ತಿ ತುಂಬಿದಂತಾಗುತ್ತದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಅಡಿವೇಪ್ಪಾ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಮಾಲಿಂಗಪ್ಪ ಅಕ್ಕವಳ್ಳಿ, ವಾಸುದೇವ ಕಮಾಟಿ,ಮಂಜುಳಾ ಅಕ್ಕಿ, ನಾಗರಾಜ ಜಡೇದ, ನಾಗಪ್ಪ ಅಂಗಡಿ, ರುದ್ರಗೌಡ್ರ ಗೀರಿಗೌಡ್ರ, ಮಹಮ್ಮದ್ ಗೌಸ್ ಪಾಟೀಲ, ಕೃಷ್ಣಪ್ಪ ಜಡೇದ, ಚಂದ್ರಪ್ಪ ಮೂಡೂರ, ಶಂಬು ಪೂಜಾರ, ಶಿಕ್ಷ ಶ್ರೀಕಾಮತ ಹುಲ್ಮನಿ, ಮುಂತಾವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ