ಬಳ್ಳಾರಿ
ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಎರಡು ಬಸ್‍ಗಳ ನಡುವೆ ನಡೆದ ಮುಖಾ ಮುಖಿ ಡಿಕ್ಕಿಯಿಂದಾಗಿ ಕರ್ನಾಟಕ ಸರ್ಕಾರದ ಸಾರಿಗೆ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.
ಬೆಳಗಿನ ಜಾವದಲ್ಲಿ ನಡೆದ ಈ ಘಟನೆಯಲ್ಲಿ 18 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರೆ ಖಾಸಗಿ ಬಸ್ ಚಾಲಕನ ಎರಡೂ ಕಾಲುಗಳು ತುಂಡಾಗಿವೆ. ಮೃತ ಚಾಲಕ ಮಲ್ಲಿಕಾರ್ಜುನ್ ಪಾಟೀಲ್(45) ಎಂದು ಗುರುತಿಸಲಾಗಿದೆ. ಕೆಎಸ್‍ಆರ್‍ಟಿಸಿ ಕರೋನ ಸ್ಲೀಪರ್ ಮತ್ತು ಎಸ್‍ಆರ್‍ಎಸ್ ಬಸ್‍ಗಳ ನಡುವೆ ಈ ಘಟನೆ ಸಂಭವಿಸಿದೆ. ಕೆಎಸ್‍ಆರ್‍ಟಿಸಿ ಬಸ್ ಬೆಂಗಳೂರಿನಿಂದ ಜಮಖಂಡಿಯತ್ತ ತೆರಳುತ್ತಿತ್ತು.
ಕೂಡ್ಲಿಗಿ ತಾಲೂಕಿನ ಮೊರಬ ಸರ್ಕಲ್ ಬಳಿ ಸಂಭವಿಸಿದ ಈ ಘಟನೆಯಿಂದಾಗಿ ಗಾಯಗೊಂಡವರನ್ನು ಕೂಡ್ಲಿಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರ ಪೈಕಿ ಕೆಲವರು ಚಿಕಿತ್ಸೆ ಪಡೆದು ಮರಳಿದ್ದಾರೆ. ಉಳಿದಂತೆ ಬೆಂಗಳೂರಿನ ದತ್ತಮೂರ್ತಿ ತಂದೆ ಕೆ.ವಾಸಪ್ಪ, ಆನಂದಪ್ಪ ತಂದೆ ಸಿದ್ಧಪ್ಪ ಇಂಡಿ, ಭಗವಂತ ತಂದೆ ಮಲ್ಲಪ್ಪ ಕಣ್ಣೂರು, ಶ್ರೀಶೈಲ ಈಶ್ವರಪ್ಪ ಇಂಡಿ ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ವಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
