ತಾಲ್ಲೂಕಿನಲ್ಲಿ ಸತತ ಮಳೆ : ರೈತರ ಮುಖದಲ್ಲಿ ಮಂದಹಾಸ

ಚಿಕ್ಕನಾಯಕನಹಳ್ಳಿ
 
    ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಳ್ಳಕೊಳ್ಳಗಳಲ್ಲಿ ನೀರು ಶೇಖರಣೆಯಾಗಿದೆ, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ ತೋಟಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಬೀರುತ್ತಿದ್ದಾರೆ.
    ತಾಲ್ಲೂಕಿನ ಸಾಸಲು ಕೆರೆಯಿಂದ ಅಜ್ಜನಕೆರೆ, ಪೆಮ್ಮಲದೇವರ ಕೆರೆ, ಪಟ್ಟದ ದೆವರ ಕೆರೆ ಕಡೆಗೆ ಹಳ್ಳದ ನೀರು ಹರಿಯುತ್ತಿದೆ, ತೀರ್ಥಪುರದ ವಜ್ರದಲ್ಲಿ ನೀರು ಶೇಖರಣೆಯಾಗುತ್ತಿದೆ, ಪಟ್ಟಣದ ಕೇದಿಗೆಹಳ್ಳಿ, ಕೊಡಲಾಗರ, ಕಲ್ಲೇನಹಳ್ಳಿ, ಹೊಸೂರು ಭಾಗದಲ್ಲಿ ನೀರು ತೋಟಗಳಲ್ಲಿ ನಿಂತಿದೆ, ಕೋಡುಗಲ್ ಬಸವೇಶ್ವರ ದೇವಾಲಯದ ಬಳಿ ಮಳೆಯ ನೀರು ಶೇಖರಣೆಯಾಗಿ ಅಲ್ಲಿನ ಕಟ್ಟೆಗಳು ತುಂಬಿವೆ.  ಕೋಡುಗಲ್ ಬಳಿ ನೀರು ದಾಖಲಾಗಿರುವುದಕ್ಕೆ ಸಂಭ್ರಮಿಸಿ ಹಲವು ಹುಡುಗರು ನೀರಿನಲ್ಲಿ ಈಜಾಡುತ್ತಿರುವ ಸಾಮಾನ್ಯವಾಗಿದೆ.
     ಮಂಗಳವಾರ ಬೆಳಗಿನ ಜಾವ ಎರಡು ಗಂಟೆಯಿಂದ ಆರುವರೆ ಗಂಟೆ ಒಳಗೆ ಬಿದ್ದ ಮಳೆಯ ವಿವರ: ಚಿಕ್ಕನಾಯಕನ ಹಳ್ಳಿ ಪಟ್ಟಣ-33 ಮಿ.ಮೀ, ಮತ್ತಿಘಟ್ಟ-10 ಮಿ.ಮೀ, ಸಿಂಗದಹಳ್ಳಿ-12.2 ಮಿ.ಮೀ, ಹುಳಿಯಾರು-31.2 ಮಿ.ಮೀ, ಬೋರನಕಣಿವೆ-26.4 ಮಿ.ಮೀ, ದೊಡ್ಡಎಣ್ಣೆಗೆರೆ-10.2 ಮಿ.ಮೀ,  ಶೆಟ್ಟೀಕೆರೆ-4.3 ಮಿ.ಮೀ,ಮಳೆಯಾಗಿದೆ ಎಂದು ಮಳೆ ಮಾಪನ ಕೇಂದ್ರಗಳಿಂದ ವರದಿಯಾಗಿದೆ.  
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ