ಚಿತ್ರದುರ್ಗ
ರಸ್ತೆ ಸುರಕ್ಷತೆ ಸಂಬಂಧ ಹೆಚ್ಚು ದಂಡ ವಿಧಿಸುವುದನ್ನು ನಾನು ಒಪ್ಪುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಜಿಲ್ಲೆಯ ಚಿತ್ರಹಳ್ಳಿಯಲ್ಲಿ ಸುಮಾರು 64 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಮೋರಾರ್ಜಿ ದೇಸಾಯಿ ವಸತಿ ಶಾಲಿ, ಪಾಲಿಟೆಕ್ನಿಕ್ ಕಾಲೇಜು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಾಮಗಾರಿ ಪರೀಶಿಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು
ವರ್ಷಕ್ಕೆ ಸುಮಾರು 10 ಸಾವಿರಕ್ಕಿಂತ ಹೆಚ್ಚು ಅಪಘಾತಗಳು ಸಂಬವಿಸುತ್ತಿದ್ದವು, ಅವುಗಳನ್ನು ತಪ್ಪಿಸುವ ಉದ್ದೇಶದಿಂದ ಈ ಕಾನೂನು ರೂಪಿಸಲಾಗಿದೆ. ಆದರೂ ಹೆಚ್ವು ದಂಡ ವಿಧಿಸುವುದು ಸರಿ ಅಲ್ಲ. ಅಲ್ಲದೆ ಕೆಲವು ರಾಜ್ಯಗಳು ಇದನ್ನು ಒಪ್ಪಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಸ್ತೆಗಳು ಅಭಿವೃದ್ದಿ ಹೊಂದಿದ ಹಿನ್ನಲೆಯಲ್ಲಿ ಪ್ರತಿನಿತ್ಯ ಅಪಘಾತಗಳು ಹೆಚ್ಚುವುದರಿಂದ ಅಪಘಾತಗಳು ಹೆಚ್ಚುತ್ತಿವೆ ಪ್ರತಿದಿನ 10 ಸಾವಿರ ರಸ್ತೆ ಅಪಘಾತಗಳು ನಡೆಯುತ್ತಿವೆ. ರಸ್ತೆಗಳು ಚನ್ನಾಗಿರೋ ಕಾರಣದಿಂದ ಅಪಘಾತ ಹೆಚ್ಚಾಗುತ್ತಿವೆ. ರಸ್ತೆಗಳು ಅಭಿವೃದ್ಧಿಯಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ ವಾಹನ ಕಾಯ್ದೆ ತಿದ್ದುಪಡಿ ತರಲಾಗಿದೆ. ದುಬಾರಿ ದಂಡ ವಿರೋಧಿಸುತ್ತೇನೆ, ಆದ್ರೆ ರಸ್ತೆ ಸುರಕ್ಷತೆ ಇಲ್ಲ ಅನ್ನೋದು ಒಪೆÇ್ಪೀದಿಲ್ಲ ಎಂದು ಹೇಳಿದರು
ಡಿಕೆ ಶಿವಕುಮಾರ್ ಬಂಧನದಲ್ಲಿ ಬಿಜೆಪಿಯವರ ಪಾತ್ರ ಇದೆ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಡಿ ಹಾಗೂ ಐಟಿ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಆದ್ದರಿಂದ ಈಗ ನಾನು ಮಾತನಾಡುವುದು ಸರಿ ಅಲ್ಲ ಎಂದಷ್ಟೇ ಹೇಳಿದರು
ಚಿತ್ರಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 41 ಎಕರೆ ವಿಶಾಲವಾದ ಪ್ರದೇಶದಲ್ಲಿ ಸುಮಾರು 64 ಲಕ್ಷ ರೂ. ವೆಚ್ಚದಲ್ಲಿ ಮೊರಾರ್ಜಿ ವಸತಿಶಾಲೆ, ಕಿತ್ತೂರು ರಾಣಿ ವಸತಿ ಶಾಲೆ ಪಾಲಿಟೇಕ್ನಕ್ ಕಾಲೇಜು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಟ್ಟಡ ನೂರು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಇರಬೇಕು ಎಂಬ ಉದ್ದೇಶದಿಂದ ಕಾಮಗಾರಿಯಲ್ಲಿ ಕೆಲವೊಂದು ಬದಲಾವಣೆ ಮಾಡಲು ಸೂಚನೆ ನೀಡಿದ್ದೆನೆ. ಅಲ್ಲದೆ ಇಲ್ಲಿ ಕೊಳವೆ ಭಾವಿಯ ಮೂಲಕ ನೀರು ಪೂರೈಕೆ ಕಷ್ಟವಾಗುತ್ತದೆ ಆದ್ದರಿಂದ ಶಾಸ್ವತ ನೀರು ಪೂರೈಕೆ ಯೋಜನೆ ರೂಪಿಸುವಂತೆ ಸೂಚನೆ ನೀಡಿದ್ದೆನೆ ಎಂದರು.
ಕಾಮಗಾರಿ ಕಾರಾರಿನ ಪ್ರಕಾರ ಫ್ರೆಬ್ರವರಿ ತಿಂಗಳಿನಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಅದರೆ ಇನ್ನೂ ಮುಗಿದಿಲ್ಲ. ಇನ್ನೂ 6 ತಿಂಗಳ ಅವಧಿಯನ್ನು ಕೇಳಿದ್ದಾರೆ. ಆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸ ದಿದ್ದರೆ ನಿಯಮಾನುಸುರ ದಂಡ ವಿಧಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಸಂಸದರಾದ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








