ಹಗರಿಬೊಮ್ಮನಹಳ್ಳಿ:
ಮೇ.15ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ಆಚರಿಸಲು ಹೇಮರೆಡ್ಡಿ ಸಮುದಾಯದ ತಾಲೂಕು ಪದಾಧಿಕಾರಿಗಳು ತೀರ್ಮಾನ ತೆಗೆದುಕೊಂಡರು.
ಪಟ್ಟಣದ ಶ್ರೀಹಾಲಸ್ವಾಮಿ ಮಠದಲ್ಲಿ ರೆಡ್ಡಿ ಸಮುದಾಯದ ಮುಖಂಡರು ಮತ್ತು ಪದಾಧಿಕಾರಿಗಳು ಶನಿವಾರ ಸಂಜೆ ಸಭೆ ಸೇರುವ ಮೂಲಕ, ಕಾರ್ಯಕ್ರಮ ಇರುವುದು ಮೇ 10ರಂದು ಆಚರಿಸಲು. ಆದರೆ ಸಮುದಾಯದವರು ಒಂದುಕಡೆ ಸೇರಿ ಆಚರಿಸಲು, ಅಂದು ನಾನಾ ರೀತಿಯ ಕಾರ್ಯಕ್ರಮಗಳು ಜರುಗುವುದರಿಂದ ಸಮುದಾಯದವರು ಒಂದುಕಡೆ ಸೇರಿ ಕಾರ್ಯಕ್ರಮ ಆಚರಿಸಕಲು ಆಗುತ್ತಿಲ್ಲ. ಆದ್ದರಿಂದ ಈ ವರ್ಷ ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ಆಚರಿಸಬೇಕು ಎಂದು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮುದಾಯದ ತಾಲೂಕು ಅಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ಎಂದಿನಂತೆ ಮೇ.10ರಂದು ಆಯಾ ಗ್ರಾಮಗಳಲ್ಲಿ ಕಾರ್ಯಕ್ರಮ ಮಾಡಿಕೊಂಡು ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ನಡೆಯುವ ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಶ್ರೀಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಣ, ನಂತರ ಎಲ್ಲರ ತೀರ್ಮಾನದಂತೆ ಪಟ್ಟಣದಲ್ಲಿ ಮೇ.15ರಂದು ಸಮಾಜದ ಎಲ್ಲಾ ಧರ್ಮಗಳ ಮತ್ತು ಸಮುದಾಯಗಳ ಮುಖಂಡರನ್ನೊಳಗೊಂಡು ಜಯಂತ್ಯುತ್ಸವವನ್ನು ಆಚರಿಸೋಣವೆಂದರು.
ನಂತರ ರೈತ ಮುಖಂಡ ಮೈನಳ್ಳಿ ಕೊಟ್ರೇಶಪ್ಪ ಮಾತನಾಡಿ, ಮೇ. 15ರಂದು ಜರುಗುವ ಕಾರ್ಯಕ್ರಮವು, ಮೆರವಣಿಗೆಯನ್ನು ಏರ್ಪಡಿಸಿದ್ದು, ಪಟ್ಟಣದ ಹಗರಿ ಆಂಜನೇಯಸ್ವಾಮಿ ದೇಗುಲದಿಂದ ಆರಂಭವಾಗಿ ಪ್ರಮುಖ ರಸ್ತೆಯಲ್ಲಿ ಸಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಕೂಡ್ಲಿಗಿ ರಸ್ತೆಯಲ್ಲಿ ನಮ್ಮ ಸಮುದಾಯದ ಭವನ ನಿರ್ಮಾಣ ಮಾಡಲು ಕಾಯ್ದಿರಿಸಿದ ನಿವೇಶನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಉಪಾಧ್ಯಕ್ಷ ಎಚ್.ಆನಂದರೆಡ್ಡಿ, ಕಾರ್ಯದರ್ಶಿ ಬಸವರೆಡ್ಡಿ, ಮುಖಂಡರಾದ ಹನುಮರೆಡ್ಡಿ, ಕರಿಬಸಪ್ಪ, ಚನ್ನಪ್ಪ, ಮಂಜುರೆಡ್ಡಿ, ಡಂಬ್ರಹಳ್ಳಿ ಮಹೇಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.