ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮರ 587ನೇ ಜಯಂತಿ.

ಹೊಸಪೇಟೆ :

    ಇಲ್ಲಿನ ತಾಲೂಕು ಕಚೇರಿಯಲ್ಲಿ ಶುಕ್ರವಾರ ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ 587ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

     ಕಾರ್ಯಕ್ರಮವನ್ನು ಉದ್ದೇಶಿಸಿ ಸಮಾಜದ ಬಿಜೆಪಿ ಮುಖಂಡ ಶ್ರೀನಿವಾಸರೆಡ್ಡಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ಮಹಾನ್ ಸಾದ್ವಿ ಹಾಗು ತಪಸ್ವಿಯಾಗಿದ್ದರು. ಅವರ ತಪಸ್ಸಿಗೆ ಮೆಚ್ಚಿ ಶ್ರೀ ಚೆನ್ನಮಲ್ಲಿಕಾರ್ಜುನ ಪ್ರತ್ಯಕ್ಷನಾಗಿ ಬಂದು ‘ನಿನಗೆ ಏನು ವರ ಬೇಕು’ ಎಂದು ಕೇಳಿದಾಗ ‘ನನಗಾಗಿ ಏನು ಬೇಡ, ಇಡೀ ರೆಡ್ಡಿ ಸಮಾಜಕ್ಕೆ ಬಡತನ ಬರದಂತೆ ಕಾಪಾಡಬೇಕು.

    ಶ್ರೀಮಂತಿಕೆಯಿಂದ ಸಮಾಜವು ಎತ್ತರಕ್ಕೆ ಬೆಳೆಯಬೇಕು ಜೊತೆಗೆ ಲೋಕ ಕಲ್ಯಾಣವಾಗಬೇಕು ಎಂದಾಗ ಶ್ರೀ ಚೆನ್ನಮಲ್ಲಿಕಾರ್ಜುನ ತಥಾಸ್ತು ಎಂದು ವರ ನೀಡುತ್ತಾನೆ’. ಇಂಥ ನಿಸ್ವಾರ್ಥ ಮನಸ್ಸುಳ್ಳ ಮಹಾನ್ ಸಾದ್ವಿಯ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

     ಉಪವಿಭಾಗಾಧಿಕಾರಿ ಕೆ.ಎಸ್.ಲೋಕೇಶ್, ತಹಶೀಲ್ದಾರ್ ನಾಗರಾಜ, ಇಒ ವೆಂಕೋಬಪ್ಪ, ಸಮಾಜದ ಮುಖಂಡರಾದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ವೀರಶೈವ ಲಿಂಗಾಯಿತ ಸಮಾಜದ ತಾಲೂಕು ಅಧ್ಯಕ್ಷ ವಿ.ಶರಣುಸ್ವಾಮಿ, ನೌಕರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ತಾ.ಪಂ.ಅಧ್ಯಕ್ಷೆ ಜೋಗದ ನೀಲಮ್ಮ, ಬಸವ ಬಳಗದ ಅಧ್ಯಕ್ಷ ಬಸವಕಿರಣಸ್ವಾಮಿ, ಉಪಾಧ್ಯಕ್ಷ ಮಧುರ ಚೆನ್ನಶಾಸ್ತ್ರಿ, ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಅನ್ನದಾನರೆಡ್ಡಿ, ಮಾವಿನಹಳ್ಳಿ ಬಸವರಾಜ, ಶಂಕರಮೇಟಿ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link