ತಿಪಟೂರು :
ನಿನ್ನಸಂಜೆ ತಾಲ್ಲೂಕಿಗೆ ಆಗಮಿಸಿದ ಹೇಮೆಯನ್ನು ಜನರು ಕಣ್ತುಂಬಿಕೊಂಡಿದ್ದರು ಆದರೆ ಅದೇ ನೀರು ಇಂದು ನಗರದ ಅಮಾನಿಕೆರೆಗೆ ಆಗಮಿಸಿದ್ದನ್ನು ಕಂಡು ನಗರದ ಜನರು ಸಂತಸಗೊಂಡರೆ ಗ್ರಾಮೀಣ ಭಾಗದ ಅದರಲ್ಲೂ ಹೊನವಳ್ಳಿ ಭಾಗದ ರೈತರು ಮಾತ್ರ ಹುಸಿಮುನಿಸನ್ನು ತೋರಿದ್ದಾರೆ.
ಸರಿಯಾಗಿ ಒಂದು ವರ್ಷದ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹೊನ್ನವಳ್ಳಿ ಭಾಗದ ಮತವನ್ನು ಗಮನದಲ್ಲಿಟ್ಟುಕೊಂಡು ನಾವು ಗೆದ್ದರೆ ಸಂಪೂರ್ಣವಾಗಿ ಹೇಮಾವತಿ ನೀರನ್ನು ನಿಮ್ಮ ಭಾಗಕ್ಕೆ ಅಂದರೆ ಹೊನ್ನವಳ್ಳಿ ಭಾಗಕ್ಕೆ ನೀರುಕೊಟ್ಟು ಎಲ್ಲಾ ಕೆರೆಗಳನ್ನು ತುಂಬಿಸುತ್ತೇವೆಂದು ಮತಪಡೆದಿದ್ದರು.
ಆದರೆ ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರು ನಮಗೂ ಈ ಭಾಗಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಈ ಭಾಗದ ಕಡೆ ತಿರುಗಿಯೂ ನೋಡಿರಲಿಲ್ಲ. ಇನ್ನು ಹೇಮಾವತಿ ನಾಲೆಯಿಂದ ನೀರು ಬಿಟ್ಟರು ಕೆರೆಗಳು ಬಾಯ್ತೆರೆದು ಒಂದೇ ಬಾರಿಗೆ ಆಶೋಪನ ಪಡೆದಿದ್ದರಿಂದ ಯಾವುದೇ ಕೆರೆಗಳಲ್ಲಿ ನೀರು ನಿಲ್ಲದೇ ಮತ್ತದೇ ಬರದ ಛಾಯೆಯನ್ನು ಕಂಡವು. ಇದರಿಂದ ಹುಸಿಮುನಿಸನ್ನು ತೋರಿಸುತ್ತಿರುವ ಜನರು ಕೇವಲ ತಿಪಟೂರು ನಗರದ ಕೆರೆಯನ್ನು ತುಂಬಿಸಿದರೆ ಸಾಲದು ತಾಲ್ಲೂಕಿನ ಇತರ ಕೆರೆಗಳನ್ನು ತುಂಬಿಸುವ ಕೆಲಸವಾಗಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ