ಜಿಲ್ಲೆ ಪ್ರವೇಶಿಸಿದ ಹೇಮಾವತಿ ನೀರು

ತುರುವೇಕೆರೆ

    ತುಮಕೂರು ಜಿಲ್ಲೆಯ ಪಾಲಿನ ಹೇಮವತಿ ನೀರನ್ನು ಹರಿಸುವಲ್ಲಿ ಜಿಲ್ಲೆಯ ಸಂಸದರು ಹಾಗೂ ಬಿಜೆಪಿ ಶಾಸಕರ ಭಗೀರಥ ಪ್ರಯತ್ನ ಕೊನೆಗೂ ಸಾಥರ್ಕತೆ ಕಾಣುವಲ್ಲಿ ಯಶಸ್ವಿಯಾಗಿದೆ.

    ಶನಿವಾರ ರಾತ್ರಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಪ್ರವೇಶಿಸುವ ಮೂಲಕ ಜಿಲ್ಲೆಯಲ್ಲಿ ಮೂಡಿದ್ದ ಆತಂಕ ತುಸು ನಿರಾಳವಾದಂತಾಗಿದೆ. ಕಾವೇರಿ ನದಿ ನೀರು ಪ್ರಾಧಿಕಾರದ ನಿಯಮಾನುಸಾರದಂತೆ ಜಿಲ್ಲೆಗೆ 25.3 ಟಿ.ಎಂ.ಸಿ ಹೇಮಾವತಿ ನೀರು ನಿಗದಿಗೊಂಡಿತ್ತು. ಆ ಪೈಕಿ 18.3 ಟಿ.ಎಂ.ಸಿ ನೀರಷ್ಟೆ ಜಿಲ್ಲೆಗೆ ಹರಿದಿತ್ತು. ಉಳಿದ 7 ಟಿ.ಎಂ.ಸಿ. ನೀರನ್ನು ಏಪ್ರಿಲ್ ತಿಂಗಳಲ್ಲಿ ಪಡೆಯುವಲ್ಲಿ ಸಂಸದರು ಹಾಗೂ ಶಾಸಕರ ಪ್ರಯತ್ನ ಯಶಸ್ವಿಯಾಗಿರಲಿಲ್ಲ.

    ಜಿಲ್ಲೆಯಲ್ಲಿ ಮಳೆ ಅಭಾವದಿಂದ ಅಂತರ್ಜಲ ಕುಸಿಯುವುದರ ಜೊತೆಗೆ ಕುಡಿಯುವ ನೀರಿಗೆ ತೊಂದರೆಯಾಯಿತು. ಆದ್ದರಿಂದ ಸಂಸದ ಜಿ.ಎಸ್.ಬಸವರಾಜು, ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ತುರುವೇಕೆರೆ ಶಾಸಕ ಮಸಾಲ ಜಯರಾಂ ಹಾಗೂ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಇವರುಗಳು ಮುಖ್ಯಮಂತ್ರಿ ಹಾಗೂ ಸಚಿವರಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಹಾಗೂ ಕೆರೆಕಟ್ಟೆಗಳು ಖಾಲಿಯಾಗಿರುವ ಪರಿಸ್ಥಿತಿ ಬಗ್ಗೆ ವಿವರಿಸಿದ್ದಲ್ಲದೆ, ತಮಗೆ ಬರಬೇಕಾದ ನೀರನ್ನು ಹರಿಸುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹೇಮಾವತಿ ನೀರು ನಮ್ಮ ಜಿಲ್ಲೆಗೆ ಪದಾರ್ಪಣೆ ಮಾಡಿದೆ.

     ತಾಲ್ಲೂಕಿಗೆ ಮತ್ತೆ ಹೇಮಾವತಿ ನೀರು ಹರಿಯುತ್ತದೆ, ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಶಾಸಕ ತಾಲ್ಲೂಕಿನ ಜನತೆಗೆ ಭರವಸೆ ನೀಡಿದ್ದರು. ಎರಡನೆ ಬಾರಿ ಹೇಮಾವತಿ ನೀರು ಹರಿಸುತ್ತಿರುವುದು ಇದೇ ಮೊದಲು. ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕರಿಗೆ ತಾಲ್ಲೂಕಿನ ಜನತೆ ಆಭಾರಿಯಾಗಿದ್ದಾರೆ. ಎರಡನೆ ಬಾರಿ ಹೇಮಾವತಿ ನೀರು ಹರಿಯಲು ಸಹಕರಿಸಿದ ಮುಖ್ಯಮಂತ್ರಿ, ಸಚಿವರು ಹಾಗೂ ಸಂಸದರಿಗೆ ತಾಲ್ಲೂಕಿನ ಜನತೆಯ ಪರವಾಗಿ ಶಾಸಕ ಮಸಾಲ ಜಯರಾಂ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap