ವಲಸೆ ಕಾರ್ಮಿಕರನ್ನು ನಿರ್ಲಕ್ಷಿಸಿದ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ..!

ಬೆಂಗಳೂರು

       ವಲಸೆ ಕಾರ್ಮಿಕರು ಮತ್ತು ನಿರ್ವಸತಿಗರ ಹಿತ ರಕ್ಷಣೆಗಾಗಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳುವಂತೆ  ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

       ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ನ್ಯಾಯಮೂರ್ತಿ ಓಕಾ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠಬೀದಿಗಳಲ್ಲಿ ಮತ್ತು ಫ್ಲೈಓವರ್‌ಗಳ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಮತ್ತು ಆಶ್ರಯವಿಲ್ಲದ ಜನರನ್ನು ರಕ್ಷಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದೆ.

     ಭಾನುವಾರ ಮತ್ತು ಸೋಮವಾರ ಸುಮಾರು 100 ವಲಸೆ ಕಾರ್ಮಿಕರು ಮತ್ತು ಮನೆಯಿಲ್ಲದ ಜನರನ್ನು ಗುರುತಿಸಿ ಮೂರು ವಸತಿ ನಿಲಯಗಳಲ್ಲಿ ಆಶ್ರಯ ನೀಡಿದ್ದೇವೆ ಎಂದು ಬಿಬಿಎಂಪಿ ನ್ಯಾಯಾಲಯಕ್ಕೆ ತಿಳಿಸಿತು.

    ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ವಲಸಿಗರು ಮತ್ತು ಮನೆಯಿಲ್ಲದವರನ್ನು ಪತ್ತೆ ಹಚ್ಚಿ ಆಶ್ರಯ ಮನೆಗಳಲ್ಲಿ ವಸತಿ ಕಲ್ಪಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.ಸಾಕಷ್ಟು ಆಹಾರ ಮತ್ತು ಔಷಧಿಗಳನ್ನು ಒದಗಿಸಬೇಕಾದ ಆಶ್ರಯ ಮನೆಗಳ ಲಭ್ಯತೆ ಮತ್ತು ಸ್ಥಳಗಳ ಬಗ್ಗೆ ಪ್ರಚಾರ ಮಾಡಲು ಬಿಬಿಎಂಪಿಗೆ ನಿರ್ದೇಶನ ನೀಡಲಾಯಿತು. ಪ್ರಸ್ತುತ ತನ್ನ ಮಿತಿಯಲ್ಲಿ ನಡೆಯುತ್ತಿರುವ ಎಲ್ಲಾ ಸಾರ್ವಜನಿಕ ಯೋಜನೆಗಳನ್ನು ಗಮನಿಸಲು ಬಿಬಿಎಂಪಿಗೆ ಸೂಚಿಸಿರುವ ಕೋರ್ಟ್ ವಲಸೆ ಕಾರ್ಮಿಕರಿಗೆ ಉಚಿತವಾಗಿ ಪಡಿತರ ಮತ್ತು ಆಹಾರ ಕಿಟ್ ನೀಡುವಂತ ಆದೇಶಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap