ಹಾನಗಲ್ಲ :
ಹಿಂದು ಕುರುಹಿನಶೆಟ್ಟಿ ಸಮಾಜವನ್ನು 2.ಎ.ಪ್ರವರ್ಗಕ್ಕೆ ಸೇರಿಸುವುದಾಗಿ ಹಾಗೆಯೇ ನಮಗೆ (ಪ್ರವರ್ಗ2ಎ) ಪ್ರಮಾಣಪತ್ರವನ್ನು ನೀಡಬೇಕೆಂದು ಒತ್ತಾಯಿಸಿ ಹಾನಗಲ್ಲಿನಲ್ಲಿ ಹಿಂದೂ ಕುರುಹಿನಶೆಟ್ಟಿ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಎಮ್.ಗಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ಗುರುವಾರ ಪ್ರತಿಭಟನಾ ಮೇರವಣಿಗೆ ಹಾನಗಲ್ಲ ವಿರಕ್ತಮಠದಿಂದ ಪ್ರಾರಂಭಗೊಂಡು ನಂತರ ಪ್ರಮುಖ ಬಿದಿಗಳ ಮುಖಾಂತರ ಕನಕದಾಸ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ಮೂಲಕ ಪ್ರತಿಭಟಿಸಿ ನಂತರ ತಹಶೀಲ್ದಾರ ಕಛೇರಿ ತಲುಪಿತು.
ಹಾನಗಲ್ಲ ತಾಲೂಕಿನಲ್ಲಿ 5000 ಕ್ಕೂ ಹೆಚ್ಚು ಕುರುಹಿನಶೆಟ್ಟಿ ಸಮಾಜವಿದ್ದು, ಈ ಸಮಾಜ ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ .ಕುರುಹಿನಶೆಟ್ಟಿ ಸಮಾಜವನ್ನು ಸರಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷೀಸುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಅಹೋರಾತ್ರಿ ಪ್ರತಿಭಟಸಲಾಗುವುದರೊಂದಿಗೆ ಸರಕಾರವನ್ನು ಎಚ್ಚರಿಸಲಾಗುವುದು.
ಈ ಕೂಡಲೆ ಸರಕಾರ ಸಮಾಜಕ್ಕೆ ಸಿಗಬೇಕಾದ ಎಲ್ಲ ಸೌಲಬ್ಯಗಳನ್ನು ಒದಗಿಸುವಂತೆ ಕುರುಹಿನಶೆಟ್ಟಿ ಸಮಾಜದವರು ಪ್ರತಿಭಟನೆ ಮೂಲಕ ತಹಶೀಲ್ದಾರ ಮುಖೇನ ಮನವಿ ಸಲ್ಲಿಸಿ ಸರಕಾರದ ಗಮನ ಸೇಳೆದರು. ವಂಚಿತವಾಗಿದೆ.
ಈ ಸಂರ್ಧರ್ಭದಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಬಸೆ, ರಾಜ್ಯ ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ರವೀಂದ್ರ ಹರ್ತಿ, ಅಖಿಲ ಭಾರತ ಕುರುಹಿನಶೆಟ್ಟಿ ಕೇಂದ್ರ ಸಂಘದ ನಿರ್ದೆಶಕ ಪ್ರಭುದೇವ ಹಿಪ್ಪರಗಿ, ಸಮಾಜದ ಧಾರವಾಡ ಜಿಲ್ಲಾದ್ಯಕ್ಷ ಎಮ್.ಶಿವಕುಮಾರ, ಗೌರವಾಧ್ಯಕ್ಷ ಎಮ್.ಬಿ.ರೋಣದ, ರಾಜು ನೂಲ್ವಿ, ವಿರೇಶ ನಿಲನೂರ, ಪ್ರಮೋದ ಬೆಟಗೇರಿ, ಶ್ರೀಕಾಂತ ಹಿಪ್ಪರಗಿ, ಶಿವಾನಂದ ಹಿಪ್ಪರಗಿ ,ಬಸವರಾಜ ಕಡೆಮನಿ, ಹಿಂದುಳಿದ ವರ್ಗದ ಉಪಾಧ್ಯಕ್ಷೇ ಎಮ್.ಪ್ರಭಾವತಿ, ಸಮಾಜ ಸೇವಕಿ ವನೀತಾ ಗುತ್ತಲ, ಎಚ್.ವಿಶ್ವನಾಥ (ವಕೀಲರು),ಯುವ ಹೋರಾಟಗಾರ ಎಸ್.ಕೆ.ಗಣೇಶ, ಐ.ಕೆ.ವಿರಭದ್ರಪ್ಪ, ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ