ಎಚ್.ಐ.ವಿ.ಸೋಂಕಿತರು  ಕೀಳರಿಮೆ ತೊರೆದು ಆತ್ಮಸ್ಥೈರ್ಯದಿಂದ ಬದುಕಬೇಕು : ನ್ಯಾ. ಶ್ರೀಮತಿ ಎಸ್.ಎಚ್.ರೇಣುಕಾದೇವಿ

ಹಾವೇರಿ
    ಭೂಮಿ ಮೇಲೆ ಎಲ್ಲರಿಗೂ ಸಮಾನವಾಗಿ ಜೀವಿಸುವ  ಅವಕಾಶವಿದೆ. ಎಚ್.ವಿ.ಐ.ಸೋಂಕಿತರು ಮೊದಲು ತಮ್ಮಲ್ಲಿರುವ ಕೀಳರಿಮೆ ತೊರೆದು ಆತ್ಮಸ್ಥೈರ್ಯದಿಂದ ಬದುಕಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಹೇಳಿದರು.
     ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯ ವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ರಕ್ಷಿತಾ ನೆಟ್‍ವರ್ಕ್ ಆಶ್ರಯದಲ್ಲಿ  ಜರುಗಿದ ಎಚ್.ಐ.ವಿ. ಮತ್ತು ಏಡ್ಸ್ ಕಾಯ್ದೆ 2017ರ ರಾಜ್ಯ ನಿಯಮಗಳ ಕುರಿತು ಎಚ್.ಐ.ವಿ.ಸೋಂಕಿತರಿಗೆ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
     ಎಚ್.ಐ.ವಿ ಆರಂಭ, ಏಡ್ಸ್ ಅದರ ಮುಂದಿನ ಭಾಗವಾಗಿದೆ. ರೋಗ ನಿರೋಧ ಶಕ್ತಿ ಕಡಿಮೆಯಾದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನಾವು ಅಲ್ಪಾಯುಷಿಗಳು ಎಂಬ ನಿರಾಶಾಭಾವನೆ ಇಟ್ಟುಕೊಳ್ಳದೇ ಆಶಾ ಭಾವನೆಯಿಂದ ಸಕಾರಾತ್ಮಕ ಯೋಚನೆಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಉತ್ಸಾಹದಿಂದ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಕೊಳ್ಳಬೇಕು. ಎಲ್ಲರೊಳಗೆ ಒಂದಾಗಿ ಜೀವನ ಸಾಗಿಸಿ ಎಂದು ಸೊಂಕಿತರಿಗೆ ಸಲಹೆ ನೀಡಿದರು.
     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ಎಮ್ ದೊಡ್ಮನಿ ಅವರು ಮಾತನಾಡಿ,  ಎಚ್.ಐ.ವಿ. ಸೋಂಕಿತರು ಎಂಬ ಭಾವನೆ ದೂರ ಮಾಡುವ ಉದ್ದೇಶದಿಂದ ಸರಕಾರ ಎನ್.ಜಿ.ಓಗಳ ಮೂಲಕ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂದು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು  ಸಾಗಿಸಬೇಕು ಎಂದು ಹೇಳಿದರು.
    ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿಪಾವಲಿ  ಅವರು ಮಾತನಾಡಿ, ಎಚ್.ಐ.ವಿ.ಸೊಂಕಿತರ ಸಂಖ್ಯೆ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಇದೊಂದು ಮಾರಿಯಂತೆ ಹಬ್ಬಿಕೊಳ್ಳುತ್ತಿದೆ. ಸಮಾಜ  ಎಚ್.ಐ.ವಿ. ಸೋಂಕಿತರನ್ನು  ಸಾಮಾನ್ಯರಂತೆ ಕಾಣಬೇಕು. ಸೊಂಕಿತರು ತಮಗೆ ತಾವೇ ಹಿಂಜರಿಕೆ ಮಾಡಿಕೊಳ್ಳದೇ ಮುಖ್ಯ ವಾಹಿನಿಗೆ ಬರಬೇಕು.  ಕೀಳಾಗಿ ಕಾಣುವವರ ವಿರುದ್ಧ ಧ್ವನಿ ಎತ್ತಬೇಕು ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು  ಧೈರ್ಯದಿಂದ ಬಾಳಬೇಕು ಎಂದು ಹೇಳಿದರು.
     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲರಾದ ಕೆ.ಎಲ್ ಅಂಗರಗಟ್ಟಿ  ಅವರು ಎಚ್.ಐ.ವಿ ಮತ್ತು ಏಡ್ಸ್ ಕಾಯ್ದೆ 2017ರ ರಾಜ್ಯ ನಿಯಮಗಳ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಶ್ರೀವಿದ್ಯಾ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಪಿ.ಎಮ್ ಬೆನ್ನೂರ, ಜಿಲ್ಲಾ ಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ನೀಲೇಶ ಎಮ್.ಎನ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link