ಹೊಸದುರ್ಗ:
ಮಾಜಿ ಸಚಿವ ಎಚ್.ಎಂ.ರೇವಣ್ಣ ತಾಲೂಕಿನ ಕನಕ ಗುರುಪೀಠಕ್ಕೆ ಶನಿವಾರ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಸಂಸ್ಥೆ, ವಸತಿ ಶಾಲೆ, ಶ್ರೀಮಠದ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ. ಶ್ರೀಮಠದ ಅಭಿವೃದ್ದಿಗಾಗಿ ಹಾಕಿಕೊಂಡಿರುವ ಯೋಜನೆಗಳು ದೊಡ್ಡ ಮಟ್ಟದಲ್ಲಿವೆ.
ಹೊಸದುರ್ಗ ಕನಕ ಗುರುಪೀಠವು ಬೆಂಗಳೂರು ವಿಭಾಗ ಮಠವಾಗಿದ್ದು, ಇಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ಇದಕ್ಕಾಗಿ ಸಾಕಷ್ಟು ಹಣಕಾಸಿನ ನೆರವು ಬೇಕಾಗುತ್ತದೆ. ಈಶ್ವರಾನಂದಪುರಿ ಶ್ರೀಗಳು ಸಮಾಜದ ಸಂಘಟನೆ ಹಾಗೂ ಏಳಿಗೆಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಶ್ರೀಗಳ ಯೋಜನೆಗಳಿಗೆ ನೆರವು, ಸಹಕಾರ ನೀಡುವುದು ಭಕ್ತರ ಜವಬ್ದಾರಿಯಾಗಿದೆ ಎಂದರು.
ಈ ವೇಳೆ ಎಚ್.ಎಂ.ರೇವಣ್ಣ ಆಪ್ತ ಕಾರ್ಯದರ್ಶಿ ಮಾಗೋದಿ ಮಂಜಣ್ಣ, ಉಪ್ಪಾರ ಸಮಾಜದ ಅಧ್ಯಕ್ಷ ಕೊಂಡಾಪುರ ಮಂಜುನಾಥ್, ಶ್ರೀಮಠದ ಯೋಗೀಶ್, ಹೊಸದುರ್ಗದ ಮನು, ಮಾಯಕೊಂಡ ರಮೇಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
