ಗೃಹರಕ್ಷಕದಳ ದಿನ ಆಚರಣೆ

ಬಳ್ಳಾರಿ

         ಗೃಹರಕ್ಷಕದಳದವರರು ಪೊಲೀಸ್ ಇಲಾಖೆಯೊಂದಿಗೆ ಸಹಾಯಕ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ಅವರ ಮೇಲಿರುವ ಶ್ರದ್ಧೆ ಅನನ್ಯವಾದುದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿ.ಎನ್.ಲಾವಣ್ಯ ಹೇಳಿದರು.

         ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಗರದ ಜಿಲ್ಲಾ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಗೃಹರಕ್ಷಕ ದಳದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

          ಗೃಹರಕ್ಷಕರು ಸೇವೆ ಸಾರ್ವಜನಿಕರಿಗೆ ಅತಿ ಅವಶ್ಯಕವಾಗಿದ್ದು, ಅವರು ಚುನಾವಣೆ ಮತ್ತು ಇನ್ನೀತರ ತುರ್ತು ಬಂದೋಬಸ್ತ್ ಹಾಗೂ ತುರ್ತು ಸಂದರ್ಭಗಳಲ್ಲಿ ನಮ್ಮ ಸಿಬ್ಬಂದಿಗಿಂತಲೂ ಹೆಚ್ಚಿನ ಪ್ರಮಾಣದ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾರೆ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಎಎಸ್ಪಿ ಲಾವಣ್ಯ ಅವರು, ತಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಕಾಳಜಿ ವಹಿಸಿ ಮತ್ತು ಆರೋಗ್ಯ ಕಾಪಾಡಿಕೊಳ್ಳಿ ಎಂದರು.

           ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಎಂ.ಎ.ಷಕೀಬ್ ಅವರು ಮಾತನಾಡಿ, ಶಿಸ್ತು ಮತ್ತು ನಿಯೋಜನೆ ವಿಷಯದಲ್ಲಿ ಬಳ್ಳಾರಿಯ ಗೃಹರಕ್ಷಕದಳದ ಘಟಕ ಇಡೀ ರಾಜ್ಯದಲ್ಲಿಯೆ ಮಾದರಿಯಾಗಿದೆ. ಕಳೆದ 6 ವರ್ಷಗಳಿಂದ ನಮ್ಮ ಜಿಲ್ಲೆ ಕ್ರೀಡೆಗಳಲ್ಲಿ ಚಾಂಪಿಯನ್‍ಶಿಫ್ ತೆಗೆದುಕೊಂಡು ಬರುತ್ತಿದೆ ಎಂದರು.

           ನಮ್ಮ ಗೃಹರಕ್ಷಕರು ಸಲ್ಲಿಸುತ್ತಿರುವ ಸೇವೆ ಅತ್ಯಂತ ಅಮೋಘವಾಗಿದ್ದು, ಅವರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಎಸ್.ರವಿಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು. 

          ಇದಕ್ಕೂ ಮುಂಚೆ ಸ್ಮಾರಕಕ್ಕೆ ಅತಿಥಿಗಳು ಪುಷ್ಪನಮನ ಸಲ್ಲಿಸಿ ನಮಿಸಿದರು. ಸೇವೆಯಲ್ಲಿರುವಾಗಲೇ ಸಾವನ್ನಪ್ಪಿದ 6ಜನ ಗೃಹರಕ್ಷಕರಿಗೆ ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಘಟಕಾಧಿಕಾರಿಗಳು, ಗೃಹರಕ್ಷಕರು, ನಿವೃತ್ತ ಘಟಕಾಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು. ಎಚ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಎಸ್.ಎಂ.ಗಿರೀಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿ.ಕೆ.ಬಸವಲಿಂಗ ಗೌರವ ವಂದನೆ ಸಲ್ಲಿಸಿದರು.ಬಿ.ಎನ್.ಗೋಪಿನಾಥ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link