ಗೃಹ ಸಚಿವರಿಂದ ಕೋವಿಡ್ ಕೇಂದ್ರ ಉದ್ಘಾಟನೆ..!

ಶಿಗ್ಗಾವಿ :

     ತಾಲೂಕಿನ ಕೋವಿಡ್ ಆರೈಕೆ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಸೋಂಕಿತರಿಗೆ ಯಾವುದೇ ಉಸಿರಾಟದ ತೊಂದರೆ ಆಗದ ಹಾಗೆ ಹೈ ಪ್ಲೋ ಮತ್ತು ಹೈ ಪ್ರೇಶರ ಆಕ್ಸಿಜನ ವ್ಯವಸ್ಥೆಯನ್ನು ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಗುವ ವ್ಯವಸ್ಥೆಯನ್ನ ತಾಲೂಕ ಮಟ್ಟದ ಆಸ್ಪತ್ರೆಯಲ್ಲಿ ಸಿಗುವಂತೆ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ತಾಲೂಕ ಆಸ್ಪತ್ರೆಯ ಹಿಂಭಾಗದಲ್ಲಿ 50 ಹಾಸಿಗೆಯ ವಿಶೇಷ ಡೆಡಿಕೇಟಡ್ ಕೋವಿಡ್ ಆರೈಕೆ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸದ್ಯ ಮೂರು ವೆಂಟಿಲೇಟರ ವ್ಯವಸ್ಥೆಯಿದ್ದು ಬರುವ ದಿನಗಳಲ್ಲಿ ಇನ್ನೂ ಏಳು ವೆಂಟಿಲೇಟರ ವ್ಯವಸ್ಥೆಯನ್ನು ಮಾಡವುದರ ಜೊತೆಗೆ ಬಂಕಾಪೂರದಲ್ಲಿ 30 ಹಾಸಿಗೆ ವಿಶೇಷ ಕೋವಿಡ್ ಕೇಂದ್ರವನ್ನು ಬರುವ ದಿನಗಳಲ್ಲಿ ನಿರ್ಮಾಣ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಅಲ್ಲದೇ ಸವಣೂರರಲ್ಲಿ ಸದ್ಯ ಕೋವಿಡ್ 30 ಹಾಸಿಗೆಯಿಂದ 80 ಹಾಸಿಗೆಯ ಕೋವಿಡ್ ಆಸ್ಪತ್ರೆಯಾಗಿ ಉನ್ನತಿಕರೀಸಲಾಗುವುದು ಇದರ ಮುಖ್ಯ ಉದ್ದೇಶ ಈ ಭಾಗದ ಜನರು ಹೆಚ್ಚು ಹೆಚ್ಚು ಕೊರೋನಾ ಸೋಂಕಿತರಿರುವುದರಿಂದ ಅನುಕೂಲವಾಗುತ್ತದೆ ಎಂದು ಭಾವಿಸಿದ್ದೇನೆ.

     ವೈದ್ಯಕೀಯ ಚಿಕಿತ್ಸೆ ಹಾಗೂ ಉನ್ನತ ಮಟ್ಟದ ಚಿಕಿತ್ಸೆ ಪೌಷ್ಟಿಕ ಆಹಾರ ಮತ್ತು ಪೌಷ್ಟಿಕ ಔಷಧ ವ್ಯವಸ್ಥೆಯನ್ನು ಶಿಗ್ಗಾವಿ, ಸವಣೂರ, ಪಟ್ಟಣದ ಶೀಲಡೌನ ಪ್ರದೇಶಗಳಲ್ಲಿ ವ್ಯವಸ್ಥೆಮಾಡಲಾಗುವುದು. ಕೊರೋನಾ ಸೋಂಕಿಗೆ ಚಿಕಿತ್ಸೆಯನ್ನು ಕಂಡು ಹಿಡಿಯುವ ಸಾಧ್ಯತೆಯಿದ್ದು ಅದರಲ್ಲಿ ಮುಖ್ಯವಾಗಿ ಕೊರೋನಾ ಬರುವ ಪೂರ್ವದಲ್ಲಿ ಮುಂಜಾಗ್ರತೆವಹಿಸಲು ಮೈಸೂರಿನ ಎಮರೈಜರ ಕಂಪನಿ ಹಾಗೂ ಕೊರೋನಾ ಬಂದ ನಂತರ ಚಿಕಿತ್ಸೆಯನ್ನು ಪಡೆಯಲು ಆಕ್ಸಪರ್ಡ ವಿಶ್ವವಿದ್ಯಾಲಯ ಸಂಶೋಧನೆ ನೆಡೆಸಿದೆ ಹಾಗೂ ಭಾರತ ದೇಶದಲ್ಲಿ ಕೋವಾಕ್ಸಿನ ಚಿಕಿತ್ಸೆಯನ್ನು ಯಶಸ್ಸಿನ ಹಾದಿಗೆ ಒಯ್ಯಲು ಸಾವಿರ ಸ್ವಯಂ ಸೇವಕರು ಮುಂದೆ ಬಂದಿದ್ದು ಚಿಕಿತ್ಸೆ ಪಡೆದಿದ್ದು ಕೆಲವು ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗುವ ಚಿಕಿತ್ಸೆಯು ದೊರೆಯಬಹುದಾಗಿದೆ ಎಂದರು.

    ಸಂಸದ ಶಿವಕುಮಾರ ಉದಾಸಿ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜೀವ ಶೆಟ್ಟೆಣ್ಣವರ, ಸಿ.ಇ.ಓ ರಮೇಶ ದೇಸಾಯಿ, ಪೋಲಿಸ ವರಿಷ್ಠಾಧಿಕಾರಿ ಕೆ ದೇವರಾಜ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಡಿ.ವೈ.ಎಸ್.ಪಿ ಓ ಕಲ್ಲೇಶಪ್ಪ, ಸಿ.ಪಿ.ಆಯ್. ಬಸವರಾಜ ಹಳಬಣ್ಣವರ, ಇ.ಓ ಪ್ರಶಾಂತ ತುರಕಾಣಿ, ಪುರಸಭೆ ಮುಖ್ಯಾಧಿಕಾರಿ ಎಂ.ವ್ಹಿ. ಹಿರೇಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಕುಡಚಿ, ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ, ತಜ್ಞ ವೈದ್ಯರಾದ ಡಾ. ವಿವೇಕ ಜೈನಕೇರಿ, ಡಾ. ಸುಭಾಸ ಲೋಖ್ರೆ, ಡಾ. ಮಹೇಶ ಜಗದವರ, ಡಾ. ತಬುಸಮ್, ಶ್ರೀಕಾಂತ ಸರ್ಜಾಪೂರ, ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ದೇವಣ್ಣಾ ಚಾಕಲಬ್ಬಿ, ಪುರಸಭೆ ಸದಸ್ಯರಾದ ಸಿದ್ದಾರ್ಥಗೌಡ ಪಾಟೀಲ, ದಯಾನಂದ ಅಕ್ಕಿ, ಗೌಸಖಾನ ಮುನಸಿ, ಮಂಜುನಾಥ ಬ್ಯಾಹಟ್ಟಿ, ಆನಂದ ಸುಭೇದಾರ, ಪ್ರತೀಕ ಕೊಳೇಕರ, ಮಲ್ಲೇಶಪ್ಪ ಹರಿಜನ, ಕರಿಯಪ್ಪ ಕಟ್ಟಿಮನಿ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link