ಹನಿಟ್ರ್ಯಾಪ್ ಸಂಚುಕೋರರ ಬಂಧನ…!!!

ಬೆಂಗಳೂರು

        ಶ್ರೀಮಂತ ವ್ಯಕ್ತಿಯನ್ನು ಹನಿಟ್ರ್ಯಾಪ್ ಮಾಡಿ ಸುಮಾರು 73 ಲಕ್ಷ ಸುಲಿಗೆ ಮಾಡಿದ್ದ ತಾಯಿ ಮತ್ತು ಮಗಳು ಸೇರಿ ನಾಲ್ವರನ್ನು ಬಂಧಿಸುವಲ್ಲಿ ನಂದಿನಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

         ವಿದ್ಯಾರಣ್ಯಪುರದ ಬೇಬಿ ರಾಣಿ(39) ಆಕೆಯ ಪುತ್ರಿ ಪ್ರೀತಿ ಅಲಿಯಾಸ್ ಶೀಬಾ ನಿವೇದಿತಾ(23) ವಿದ್ಯಾರಣ್ಯಪುರದ ತಿಂಡ್ಲು ವೃತ್ತದ ಮಣಿಕಂದನ್(27)ಕಮ್ಮನಹಳ್ಳಿಯ ಪ್ರಸಾದ್ ಅಲಿಯಾಸ್ ಮೂರ್ತಿ(26) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.

          ಬಂಧಿತರಿಂದ 11 ಲಕ್ಷ 17 ಸಾವಿರ ನಗದು 60 ಗ್ರಾಂ ಚಿನ್ನಾಭರಣ 3 ಮೊಬೈಲ್‍ಗಳು,ಟಯೋಟಾ,ಇಂಡಿಕಾ ಸೇರಿ 2 ಕಾರುಗಳು ನಕಲಿ ಎಫ್‍ಐಆರ್ ಕಾಫಿಗಳು ಇನ್ನಿತರ ಮಾಲುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

          ಆರೋಪಿಗಳು ಹನಿಟ್ರ್ಯಾಪ್ ಬೆದರಿಕೆಗೆ ಹಾಕಿ ಕೃಷ್ಣದಾಸ್ ಎಂಬುವರಿಂದ ಬರೊಬ್ಬರಿ 73 ಲಕ್ಷ 55 ಸಾವಿರ ಹಣ ಸುಲಿಗೆ ಮಾಡಿ ಬಳಿಕ ಜಡ್ಜ್ ಹೆಸರಿನಲ್ಲಿ 65 ಲಕ್ಷಕ್ಕೆ ಬೇಡಿಕೆ ಇಟ್ಟಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಮನೆಗೆ ಕರೆದು ಬಲೆಗೆ

         ಪರಿಚಯಸ್ಥರಾಗಿದ್ದ ಕೃಷ್ಣದಾಸ್ ಅವರಿಂದ ಕುಟುಂಬ ಸಮಸ್ಯೆಯ ನೆಪದಲ್ಲಿ ಹಣವನ್ನು ಸಾಲವಾಗಿ ಪಡೆದಿದ್ದ ಆರೋಪಿ ಬೇಬಿ ರಾಣಿ ಸಾಲದ ಹಣವನ್ನು ವಾಪಸ್ ಕೂಡುವುದಾಗಿ ಕೊಡಿಗೆಹಳ್ಳಿಯ ಮನೆಗೆ ಕರೆಸಿಕೊಂಡಿದ್ದಳು ಈ ವೇಳೆ ನಕಲಿ ಪೆÇಲೀಸ್ ಸೋಗಿನಲ್ಲಿ ಇತರ ಆರೋಪಿಗಳಾದ ಪ್ರಸಾದ್ ಹಾಗೂ ಮೂರ್ತಿ ದಾಳಿ ಮಾಡಿ ಹಣ ಸುಲಿಗೆ ಮಾಡಿ ಕಳುಹಿಸಿದ್ದರು.

          ಕೆಲವು ತಿಂಗಳ ಬಳಿಕ ಮತ್ತೆ ಕೃಷ್ಣದಾಸ್‍ಗೆ ಕರೆ ಮಾಡಿ ಕ್ಷುಲ್ಲಕ ಕಾರಣ ಹೇಳಿ ಬೇಬಿರಾಣಿಯು ಮನೆಗೆ ಕರೆಸಿಕೊಂಡಿದ್ದಾಗ ಮತ್ತೆ ನಕಲಿ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಾ ಎಂದು ಬೆದರಿಸಿ 5 ಲಕ್ಷ ಸುಲಿಗೆ ಮಾಡಿದ್ದರು.ಕಳೆದ ಜುಲೈನಲ್ಲಿ ಕೃಷ್ಣದಾಸ್‍ಗೆ ಫೋನ್ ಮಾಡಿದ್ದ ನಕಲಿ ಪೊಲೀಸರು ಬೇಬಿರಾಣಿ ಕೊಲೆಯಾಗಿದ್ದು ನಿಮ್ಮ ಮೇಲೆ ಅನುಮಾನವಿದೆ ಆಕೆಯ ಸಂಬಂಧಿಕರು ನಿಮ್ಮ ವಿರುದ್ಧ ಠಾಣೆಯಲ್ಲಿ ದೂರು ನೀಡುತ್ತಾರೆ.

ಕೊಲೆ ಹೆಸರಲ್ಲಿ ಬೆದರಿಕೆ

          ದೂರು ದಾಖಲಾದರೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿಪ್ರಕರಣ ಮುಚ್ಚಿ ಹಾಕಲು 10 ಲಕ್ಷ ಇನ್ಸ್‍ಪೆಕ್ಟರ್‍ಗೆ, 7 ಲಕ್ಷ ಕನ್ನಡ ಸಂಘಟನೆ ಅಧ್ಯಕ್ಷರೊಬ್ಬರಿಗೆ ಕೊಡಬೇಕು ಎಂದು 17 ಲಕ್ಷಕ್ಕೆ ಬೇಡಿಕೆಯಿಟ್ಟು ಕೊಲೆಯಾದ ಬೇಬಿರಾಣಿ ಕನ್ನಡ ಸಂಘಟನೆ ಅಧ್ಯಕ್ಷರೊಬ್ಬರ ಕಡೆಯವರು ಎಂದು ಸುಳ್ಳು ಹೇಳಿ ಬೆದರಿಸಿದ್ದರು ಹೆದರಿದ ಕೃಷ್ಣದಾಸ್ 17 ಲಕ್ಷ ರೂಪಾಯಿ ನೀಡಿದ್ದರು.

        ಎಲ್ಲವೂ ಮುಗಿಯಿತು ಎಂದು ಸುಮ್ಮನಾಗಿದ್ದ ಕೃಷ್ಣದಾಸ್ ಅವರಿಗೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಕರೆ ಮಾಡಿ ಕೊಲೆ ಪ್ರಕರಣ ಮತ್ತೆ ತೆರೆಯಲಾಗುತ್ತಿದ್ದು ಎಲ್ಲರಿಗೂ ಬಾಯಿಮುಚ್ಚಿಸಲು ಮತ್ತೆ 20 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು ಆಸ್ತಿಪತ್ರ ಅಡವಿಟ್ಟು 20 ಲಕ್ಷ ರೂಪಾಯಿ ನೀಡಿದ್ದ ಅವರಿಗೆ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಕರೆ ಮಾಡಿ ಆರೋಪಿ ಪ್ರೀತಿ ನನ್ನ ತಾಯಿ ಬೇಬಿರಾಣಿ ಕೊಲೆಯಾಗಿದ್ದಾರೆ ನನ್ನ ತಾಯಿಯನ್ನು ನೀವು ಕೊಲೆ ಮಾಡಿ ಕೇಸ್ ಮುಚ್ಚಿಹಾಕಿದ್ದು ನಾನು ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕಿ 20 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಳು.

         ಭಯದಿಂದ ಪ್ರೀತಿಗೆ 20 ಲಕ್ಷ ರೂಪಾಯಿ ಹಣ ನೀಡಿದ್ದ ಕೃಷ್ಣದಾಸ್‍ಗೆ ಮತ್ತೆ ನವೆಂಬರ್ ತಿಂಗಳಲ್ಲಿ ಮತ್ತೆ ಕರೆ ಮಾಡಿದ ಆರೋಪಿ ಪ್ರಸಾದ್ ಬೇಬಿರಾಣಿ ಕೊಲೆ ಪ್ರಕರಣದ ವಿಚಾರಣೆ ಕೋರ್ಟ್‍ನಲ್ಲಿ ನಡೆಯುತ್ತಿದ್ದು ಪ್ರಕರಣ ಮುಚ್ಚಿ ಹಾಕಲು ನ್ಯಾಯಾಧೀಶರಿಗೆ 65 ಲಕ್ಷ ಕೊಡಬೇಕಾಗಿದ್ದು ಆದಷ್ಟು ಬೇಗ ಬಂದು ಹಣ ಕೊಡುವಂತೆ ಹೇಳಿ ಬೆದರಿಕೆ ಹಾಕಿದ್ದನು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link