ತಿಪಟೂರು
ತಾಲ್ಲೂಕಿನ ಹಲವಾರು ಗ್ರಾಮಗಳಿಗೆ ಈಗಾಗಲೇ ಕೊರೊನಾ ಕಾಲಿಟ್ಟಿದೆ. ಆದರೆ ಇಂದು ತಾಲ್ಲೂಕಿನ ದೊಡ್ಡ ಹೋಬಳಿಯಾದ ಹೊನ್ನವಳ್ಳಿಗೆ ಕೊರೊನಾ ಕಾಲಿಟ್ಟಿರುವುದು ಜತೆಗೆ ಆತಂಕವನ್ನುಂಟು ಮಾಡಿದೆ.ಹೊನ್ನವಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯ ಕೂಗಳತೆ ದೂರದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕು ದೃಢ ಪಟ್ಟಿರುವ ವ್ಯಕ್ತಿಯು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಒಂದು ವಾರ ಗ್ರಾಮಕ್ಕೆ ಆಗಮಿಸಿದ್ದನೆಂದು ತಿಳಿದು ಬಂದಿದೆ. ಸೋಂಕಿತನು ವಾಸವಿದ್ದ ಪ್ರದೇಶವನ್ನು ಸೋಮವಾರ ಸಂಜೆ ತಾ.ಪಂ ಇ.ಇ.ಓ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕ್ರಿಮಿ ನಾಶಕವನ್ನು ಸಿಂಪಡಿಸಿ, ಸೀಲ್‍ಡೌನ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
