ಗುಬ್ಬಿ:
ರಾಜಕೀಯಕ್ಕೆ ಪ್ರವೇಶ ಮಾಡಿದಂದಿನಿಂದಲೂ ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು ಸಮುದಾಯಗಳ ಸರ್ವಾಂಗೀಣ ಅಭಿವೃಧ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಎಸ್.ಎಂ.ಪ್ಯಾಲೇಸ್‍ನಲ್ಲಿ ತಾಲೂಕು ವೀರಶೈವ ಸಮಾಜದವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಾಲೂಕಿನ ಎಲ್ಲಾ ಸಮುದಾಯದವರು ನನಗೆ ಪೂರ್ಣ ಪ್ರಮಾಣದ ಸಹಕಾರ ಮಾಡಿದ್ದಾರೆ ವೀರಶೈವ ಸಮುದಾಯವು ಸಹಕಾರ ಮಾಡಿದ್ದು ಆ ಸಮುದಾಯದ ಪ್ರಗತಿಗೆ ಮತ್ತು ಸರ್ಕಾರಗಳಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಮಾನವಾಗಿಯೆ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು
ಬಗರ್ ಹುಕ್ಕುಂ ಸಾಗುವಳಿಯಲ್ಲಿಯೂ ವೀರಶೈವ ಸಮುದಾಯದ ಫಲಾನುಭವಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲ ಕಲ್ಪಿಸಲಾಗಿದೆ ಅಲ್ಲದೆ ಎಲ್ಲಾ ಸಮುದಾಯದಂತೆ ವೀರಶೈವ ಸಮುದಾಯಕ್ಕೂ ಸಾಮಾಜಿಕ ಸಮಾನತೆ ದೊರಕಿಸಿಕೊಡುವಲ್ಲಿ ಮಹತ್ವದ ಸಾಧನೆ ಮಾಡಿರುವುದಾಗಿ ತಿಳಿಸಿದ ಅವರು ವೀರಶೈವ ಸಮುದಾಯಕ್ಕೆ ತೊಂದರೆಯಾಗಿದ್ದರೆ ಅದಕ್ಕೆ ಆ ಸಮುದಾಯದ ಮುಖಂಡರೆ ಕಾರಣ ಎಂದರು.
ನಾನು ಸಚಿವನಾಗುವುದಕ್ಕೆ ವೀರಶೈವ ಸಮುದಾಯದ ಸಹಕಾರವು ಇದೆ ನಾನು ಯಾವತ್ತೂ ಜಾತಿ ಮತ್ತು ಸಮುದಾಂಯಗಳ ಮಾತನಾಡಿಲ್ಲ ಆದರೆ ಕೆಲವು ಮುಖಂಡರು ಅನಗತ್ಯವಾಗಿ ಏನೇನೂ ಮಾತನಾಡುತ್ತಾರೆ ನನ್ನ ಜೊತೆಯಲ್ಲಿರುವ ವೀರಶ್ಥವ ಮುಖಂಡರಿಗೆ ಗೊತ್ತು ನಾನು ವೀರಶೈವ ಸಮುದಾಯಕ್ಕೆ ನೀಡಿರುವ ಕೊಡುಗೆಗಳೇನು ಎಂದು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರು.
ನಾನು ಯಾವುತ್ತು ಜಾತಿವಾದ ಮಾಡಿಲ್ಲ ತಾಲೂಕಿನ ಅಭಿವೃದ್ದಿ ದೃಷ್ಟಿಯಿಂದ ಕೆಲಸ ಮಾಡಿದ್ದೇನೆ ಮುಂದಿನ ದಿನಗಳಲ್ಲಿಯೂ ಸಮಾಜದ ಅಭಿವೃಧ್ದಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುವುದಾಗಿ ತಿಳಿಸಿದರು.
ಮುಂದಿನ ತಿಂಗಳ 15 ರಿಂದ ಹೇಮಾವತಿ ನೀರನ್ನು ತಾಲ್ಲೂಕಿಗೆ ಹರಿಸಲಾಗುತ್ತಿದ್ದು ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು ಈ ಬಗ್ಗೆ ರೈತರು ಚಿಂತಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ ಅವರು ಮೊದಲ ಹಂತದಲ್ಲಿ ಜಿಲ್ಲೆಯ ಕುಡಿಯುವ ನೀರಿನ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿತ್ತು ಮುಂದಿನ ತಿಂಗಳಿನಿಂದ ತಾಲ್ಲೂಕಿನ ಕೆರೆಗಳಿಗೂ ಪೂರ್ಣ ಪ್ರಮಾಣದಲ್ಲಿ ಹೇಮಾವತಿ ನೀರನ್ನು ಹರಿಸಲಾಗುವುದೆಂದು ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಆರ್.ಗುರುರೇಣುಕರಾಧ್ಯ ಮಾತನಾಡಿ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಮಹತ್ವದ ಕೊಡುಗೆ ನೀಡಿರುವ ಸಚಿವರು ಕ್ಷೇತ್ರದ ಎಲ್ಲಾ ಸಮುದಾಯಕ್ಕೆ ನೀಡಿರುವಂತೆ ವೀರಶೈವ ಸಮುದಾಯಕ್ಕೂ ಸಾಮಾಜಿಕ ಮತ್ತು ರಾಜಕೀಯ ಸ್ಥಾನ ಮಾನ ನೀಡುವ ಮೂಲಕ ಸಮಾನ ಸೌಲಭ್ಯಗಳನ್ನು ನೀಡಿದ್ದಾರೆ. ಸಚಿವರಾಗಿರುವುದರಿಂದ ಮುಂದಿನ ದಿನಗಳಲ್ಲಿ ವೀರಶೈವ ಸಮುದಾಯಕ್ಕೆ ಇನ್ನ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಿದ್ದಾರೆ ಅವರ ಸಾಧನೆ ಮಹತ್ವ ಪೂರ್ಣವಾದುದಾಗಿದೆ ಎಂದು ತಿಳಿಸಿದರು.
ಎಪಿಎಂಸಿ ನಿರ್ದೆಶಕ ಹಾರನಹಳ್ಳಿ ಪ್ರಭಾಕರ್ ಮಾತನಾಡಿ ಯಾವುದೇ ರೀತಿಯ ಜಾತಿಯತೆಯನ್ನು ನಮ್ಮ ಸಚಿವರು ಮಾಡಿಲ್ಲ ಎಲ್ಲರ ಜೊತೆಯಲ್ಲಿ ಉತ್ತಮ ಭಾಂದವ್ಯ ಹೊಂದಿದ್ದಾರೆ ಎಲ್ಲಾ ಸಮುದಾಯಕ್ಕೆ ನೀಡಿರುವಂತೆ ವೀರಶೈವ ಸಮುದಾಯಕ್ಕೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಅದರೆ ಬೇರೆ ಪಕ್ಷದ ಕೆಲ ಮುಖಂಡರುಗಳು ಅವರನ್ನು ಬೇರೆ ರೀತಿಯಲ್ಲಿ ಬಿಂಬಿಸಲು ಹೋಗುತ್ತಾರೆ ಅವರು ಒಂದು ಜಾತಿಗೆ ಸಿಮಿವಾಗಿದ್ದರೆ 4 ಭಾರಿ ಗೆಲುವುದಕ್ಕೆ ಸಾದ್ಯವಾಗುತ್ತಿರಲಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವೀರಶೈವ ಸಮುದಾಯದವತಿಯಿಂದ ಸಚಿವ ಎಸ್.ಆರ್.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಟಿ.ಎಸ್.ಕಿಡಿಗಣ್ಣಪ್ಪ, ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ತಾ.ಪಂ ಸದಸ್ಯ ದೇವರಾಜು, ಮುಖಂಡರಾದ ಹೊದಲೂರು ವಿಜಯ್‍ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ರೇಣುಕಪ್ರಸಾದ್, ಹೇರೂರು ಪರಮಶಿವಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ಜಿ.ಡಿ.ಸುರೇಶ್‍ಗೌಡ, ಅಡಗೂರು ಬಸವರಾಜು, ಮಾಜಿ ಅಧ್ಯಕ್ಷೆ ತ್ರಿವೇಣಿ, ವಿಶ್ವಣ್ಣ, ಜಿ.ಎಸ್.ಸಿದ್ದಲಿಂಗಪ್ಪ, ಶಂಕರ್, ಸಿದ್ದರಾಮಣ್ಣ, ಗುರುಲಿಂಗಪ್ಪ, ಪ್ರಕಾಶ್, ಜಗದೀಶ್, ಚಂದ್ರಶೇಖರ್, ಹೆಚ್,ಡಿ.ಯಲ್ಲಪ್ಪ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ವೀರಶೈವ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ