ಯೋಧ ದಂಪತಿಗಳಿಗೆ ಆತ್ಮೀಯ ಸನ್ಮಾನ

ತುರುವೇಕೆರೆ

        ವಿಶ್ವಮಾನವ ಈಜು ಬಳಗದ ವತಿಯಿಂದ ತಾಲ್ಲೂಕಿನ ಸಾರಿಗೆಹಳ್ಳಿ ಕೆರೆಯ ಮುಂದೆ ಜಮ್ಮುಕಾಶ್ಮೀರದಲ್ಲಿ ಯೋಧನಾಗಿ ಕೆಲಸ ನಿರ್ವಹಿಸುತ್ತಿರುವ ದಂಡಿನಶಿವರದ ಎಂ.ಸಾದಿಕ್ ಪಾಷಾ ದಂಪತಿಗಳನ್ನು ಈಜು ಬಳಗ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

      ಎಂ.ಸಾದಿಕ್ ಪಾಷಾ ಸನ್ಮಾನ ಸ್ವೀಕರಿಸಿ ಮಾತನಾಡಿ ದಂಡಿನಶಿವರದಲ್ಲಿ ಹುಟ್ಟಿ ಬೆಳೆದು ಇಲ್ಲಿ ಕಲಿತ ಜ್ಞಾನ ಮತ್ತು ಜನರ ಪ್ರೀತಿ ಆದರಗಳು ಇಂದು ಸೈನ್ಯದಲ್ಲಿ ಕೆಲಸ ಮಾಡಲು ಸಹಾಯವಾಗಿದೆ. ನನಗೆ ದೇಶದ ಋಣವಿದ್ದು ಅದನ್ನು ತೀರಿಸಲು ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ದೇಶಾಭಿಮಾನದ ಮಾತುಗಳನ್ನಾಡಿ ಎಲ್ಲರನ್ನೂ ಮೈ ರೋಮಾಂಚನಗೊಳಿಸಿದರು.

       ಮಾಯಸಂದ್ರದ ಬೆಸ್ಕಾಂ ಶಾಖಾಧಿಕಾರಿ ಎನ್.ನಾರಾಯಣಪ್ಪ ಮಾತನಾಡಿ, ನಮ್ಮೂರಿನ ಹುಡುಗ ಯೋಧ ಸಾದಿಕ್ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವಾಗ ಏಳು ಜನ ಉಗ್ರಗಾಮಿಗಳನ್ನು ಹತ್ಯೆ ಮಾಡಿ, ಶೌರ್ಯತನವನ್ನು ಪ್ರದರ್ಶಿಸಿದ್ದಾರೆ. ಇವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸಿಕ್ಕಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಸೈನಿಕ ಸಾದಿಕ್‍ಪಾಷನಿಗೆ ಈಜು ತಂಡದ ಸದಸ್ಯರೆಲ್ಲ ಒಕ್ಕೊರಲಿನಿಂದ ಆತ್ಮಸ್ಥೈರ್ಯ ತುಂಬಿ ನಿಮ್ಮೊಂದಿಗೆ ನಾವಿದ್ದೇವೆ. ದೇಶಕ್ಕೆ ನಿಮ್ಮಂತಹ ಕಲಿಗಳ ಸೇವೆ ಮುಖ್ಯ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಈಜು ತರಬೇತುದಾರ ದಂಡಿನಶಿವರ ತಿಮ್ಮೇಗೌಡ, ಮತ್ತ ತಂಡ ಸದಸ್ಯರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link