ಚುನಾವಣಾ ವೀಕ್ಷಕರಿಗೆ ಸನ್ಮಾನ ಸಮಾರಂಭ

ಬಳ್ಳಾರಿ

       ಬಳ್ಳಾರಿ ಲೋಕಸಭಾ ಚುನಾವಣೆ ಅತ್ಯಂತ ಪಾರದರ್ಶಕ ಹಾಗೂ ಸುಸೂತ್ರವಾಗಿ ಯಾವುದೇ ರೀತಿಯ ಗೊಂದಲಗಳಿಗೆ ಅಸ್ಪದವಿಲ್ಲದಂತೆ ನಡೆಯುವ ನಿಟ್ಟಿನಲ್ಲಿ ಚುನಾವಣಾ ಸಿಬ್ಬಂದಿಯ ಕರ್ತವ್ಯನಿಷ್ಠೆ ಜತೆಗೆ ಜಿಲ್ಲೆಯ ಜನರ ಸಹನಶೀಲತೆ ಹಾಗೂ ಪ್ರತಿಯೊಂದಕ್ಕೂ ಸ್ಪಂದಿಸುವ ರೀತಿ ಅನನ್ಯ ಎಂದು ಚುನಾವಣಾ ಆಯೋಗದಿಂದ ನಿಯೋಜಿತರಾದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

      ಬಳ್ಳಾರಿ ಲೋಕಸಭಾ ಚುನಾವಣೆಯ ಮತಎಣಿಕೆ ನಡೆಯುವ ಆರ್‍ವೈಎಂಇಸಿ ಎಂಜನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

         ಚುನಾವಣೆ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಇಲ್ಲಿನ ಜನರ ಸಹಕರಿಸುವ ಗುಣ ಮೆಚ್ಚತಕ್ಕದ್ದು ಮತ್ತು ಯಾವುದೇ ರೀತಿಯ ಗದ್ದಲ-ಗಲಾಟೆಗಳು ನಡೆಯದೇ ಅತ್ಯಂತ ಶಾಂತ ರೀತಿಯಿಂದ ಚುನಾವಣೆ ನಡೆಯಲು ಚುನಾವಣಾ ಆಯೋಗದೊಂದಿಗೆ ಸ್ಪಂದಿಸಿದರು ಎಂದು ಚುನಾವಣಾ ಆಯೋಗದ ಸಾಮನ್ಯ ವೀಕ್ಷಕರಾದ ಡಾ.ಎನ್.ಸುಬ್ಬಯ್ಯನ್, ಮನ್ವೀಶಕುಮಾರ್, ಶರತ್ ನರ್ವಾಣೆ ಹಾಗೂ ಅನಿತಾ ಮಹಾದಾಸ್ ಹೇಳಿದರು.

       ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿಗಳು ತಮ್ಮ ಚುನಾವಣಾ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದರು; ಯಾವುದೇ ರೀತಿಯ ತೊಂದರೆಗಳು ಈ ಕ್ಷೇತ್ರದಲ್ಲಿ ಆಗಲಿಲ್ಲ ಎಂದು ಹೇಳಿದ ಅವರು, ಚುನಾವಣಾ ಕಾರ್ಯದ ಜೊತೆಗೆ ಇಲ್ಲಿನ ಜನರ ಜೀವನ,ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿದುಕೊಂಡೆವು ಎಂದರು.

         ಜಿಲ್ಲಾ ಚುನಾವಣಾಧಿಕಾರಿಗಳಾದ ರಾಮ್ ಪ್ರಸಾತ್ ಮನೋಹರ್ ಅವರು ಚುನಾವಣಾ ವೀಕ್ಷಕರನ್ನು ಸನ್ಮಾನಿಸಿ ಮಾತನಾಡಿ, ಬಳ್ಳಾರಿ ಲೋಕಸಭಾ ಚುನಾವಣೆ ಅತ್ಯಂತ ಶಾಂತವಾಗಿ ಮತ್ತು ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಅನೇಕ ಸಲಹೆ ಮತ್ತು ಮಾರ್ಗದರ್ಶನಗಳನ್ನು ವೀಕ್ಷಕರನ್ನು ಮಾಡಿದ್ದಾರೆ ಎಂದರು.

        ಈ ಸಂದರ್ಭದಲ್ಲಿ ಐಜಿಪಿ ನಂಜುಂಡಸ್ವಾಮಿ ಮತ್ತು ಎಸ್ಪಿ ಲಕ್ಷ್ಮಣ ನಿಂಬರ್ಗಿ ಮಾತನಾಡಿದರು.ಪ್ರೊಬೆಷನರಿ ಐಎಎಸ್ ನಂದಿನಿ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಮತ್ತಿತರರು ಇದ್ದರು.ಇದಕ್ಕೂ ಮುಂಚೆ ಚುನಾವಣಾ ಕರ್ತವ್ಯದಲ್ಲಿದ್ದಾಗಲೇ 4 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡುವುದರ ಮೂಲಕ ಗೌರವನಮನ ಸಲ್ಲಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link