ಹಾನಗಲ್ಲ :
ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಅಬ್ಬರ, ಪಾಶ್ಚಿಮಾತ್ಯ ಸಂಸ್ಕತಿ ಪ್ರಭಾವದಿಂದ ನಮ್ಮ ಮಣ್ಣಿನ ಸತ್ವ ಹಾಗೂ ನೈಜತೆ ಹೊಂದಿದ ಜಾನಪದ ಸಂಸ್ಕತಿ ಹೊಳಪು ದೂರವಾಗುತ್ತಿದ್ದು, ಪ್ರಸ್ತುತ ತಾಂತ್ರಿಕ ಯುಗದಲ್ಲಿ ಜಾನಪದ ಅಳಿವಿನ ಅಂಚು ತಲುಪುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಖೇದ ವ್ಯಕ್ತಪಡಿಸಿದರು.
ತಾಲೂಕಿನ ಶಂಕರಿಕೊಪ್ಪ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಭಾರಿ ದನ ಬೆದರಿಸುವ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ವರ್ಷದ ತುಂಬೆಲ್ಲಾ ಕೃಷಿ ಜಮೀನಿನಲ್ಲಿ ಬೆವರಿಳಿಸಿ ಶ್ರಮಿಸುವ ರೈತ ಸಮೂಹಕ್ಕೆ ಈಗಷ್ಟೆ ಬಿಡುವಿನ ಅವಧಿ. ಈ ಸಂದರ್ಭದಲ್ಲಿ ತನ್ನ ನೆಚ್ಚಿನ ಸಂಗಾತಿ ಎನಿಸಿರುವ ಜಾನುವಾರುಗಳನ್ನು ಬೆದರಿಸಿ ಸಂಭ್ರಮಿಸುತ್ತಾನೆ. ಜಾನುವಾರುಗಳ ಹಿಂಸೆಗೆ ಅವಕಾಶ ನೀಡದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಯಾರಿಗೂ ತೊಂದರೆಯಾಗದಂತೆ ನಡೆಸುವಂತೆ ಕಿವಿಮಾತು ಹೇಳಿದ ಅವರು ಸ್ವಸ್ಥ ಸಮಾಜದ ಉಸಿರಾಗಿರುವ ಜಾನಪದ ಸಂಸ್ಕತಿ ನಿರ್ಲಕ್ಷ್ಯಿಸಿರುವ ಪರಿಣಾಮ ಸಾಂಸ್ಕತಿಕ ನೆಲೆಗಟ್ಟು ಹಾಳಾಗುತ್ತಿದೆ. ಯುವ ಸಮೂಹ ಎಚ್ಚೆತ್ತುಕೊಂಡು ಈ ನೆಲದ ಸಂಸ್ಕತಿ ಉಳಿಸಲು ಮುಂದಾಗುವ ಅಗತ್ಯವಿದೆ ಎಂದರು.
ತಾಪಂ ಸದಸ್ಯ ಶಿವಬಸಪ್ಪ ಪೂಜಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಭರಮಣ್ಣ ಶಿವೂರ, ಸಂಗಪ್ಪ ಬಿದರಗಡ್ಡಿ, ಮಲ್ಲಣ್ಣ ಶಿವೂರ, ಬಾನಪ್ಪ ಕೆರಿಮತ್ತಿಹಳ್ಳಿ, ಸಿದ್ದಪ್ಪ ಕಾಳಂಗಿ, ಎ.ಸಿ.ಕಾಳಂಗಿ, ಚನ್ನಬಸಪ್ಪ ಬೆನಕಣ್ಣನವಮೀ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ