ಹೊಸಪೇಟೆ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೊಸಪೇಟೆ ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಕಾಕುಬಾಳು ನೇಮಕಗೊಂಡಿದ್ದಾರೆ.
ಏ. 29ರಂದು ಪತ್ರಕರ್ತರ ಸಂಘಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಒಟ್ಟು 27 ಸದಸ್ಯರ ಪೈಕಿ 18 ಸದಸ್ಯರು ಜಿಲ್ಲಾ ಘಟಕಕ್ಕೆ ಪತ್ರ ಬರೆದು, ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂಘದ ಚಟುವಟಿಕೆಗಳು ನಡೆಯಲು ಪದಾಧಿಕಾರಿಗಳನ್ನು ನೇಮಿಸುವಂತೆ ಪತ್ರ ಬರೆದಿದ್ದರು. ಅದರಂತೆ ಜಿಲ್ಲಾ ಘಟಕವು ಮೇ 1ರಂದು ತುರ್ತು ಸಭೆ ನಡೆಸಿ ತಾತ್ಕಾಲಿಕವಾಗಿ ನೂತನ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡಿತು.
ಜಿಲ್ಲಾ ಘಟಕದ ಅಧ್ಯಕ್ಷ ವಿ. ಜಗನ್ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ. ಮಲ್ಲಯ್ಯ ಮೋಕಾ, ಜಿಲ್ಲಾ ಉಪಾಧ್ಯಕ್ಷರಾದ ಸಿ.ವೆಂಕಟೇಶ್, ವಿ. ಗಾಳೆಪ್ಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಂಗ್ಲೆ ಮಲ್ಲಿಕಾರ್ಜುನ ಅವರು ನೂತನ ಪದಾಧಿಕಾರಿಗಳನ್ನು ನೇಮಿಸಿ ಗುರುವಾರ ಆದೇಶ ಪತ್ರ ನೀಡಿದರು.
ನೂತನ ಪದಾಧಿಕಾರಿಗಳು : ಟೈಗರ್ ಪಂಪಣ್ಣ (ಗೌರವ ಅಧ್ಯಕ್ಷ), ಪಿ. ಶ್ರೀನಿವಾಸಲು (ಖಜಾಂಚಿ), ಬಸಾಪುರ ಬಸವರಾಜ (ಹಿರಿಯ ಉಪಾಧ್ಯಕ್ಷ), ಅನಂತ ಪದ್ಮನಾಭ, ಭೀಮಾ ನಾಯ್ಕ, ಬಿ. ಬಾಬುಕುಮಾರ್ (ಉಪಾಧ್ಯಕ್ಷರು), ಡಿ.ಎಸ್. ಪ್ರಭಾಕರ್, ಕೆ.ಬಿ. ಖವಾಸ್, ಕೆ. ಇಂದಿರಾ, ರಾಮಜೀ ನಾಯ್ಕ (ಸಂಘಟನಾ ಕಾರ್ಯದರ್ಶಿಗಳು), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನಿಲ್ ಜೋಷಿ, ಪಿಂಜಾರ ಸುಭಾನಿ, ವಿ. ಗಾಳೆಪ್ಪ, ಶರಣಪ್ಪ, ಪ್ರವೀಣ ದಲಬಂಜನ್, ಶಶಿಕಾತ ಎಸ್. ಶೆಂಬೆಳ್ಳಿ ನೇಮಕಗೊಂಡಿದ್ದಾರೆ.