ಚಿತ್ರದುರ್ಗ:
ಬಟ್ಟೆ ಹಾಕುವ ಬದಲು ಪ್ಲಾಸ್ಟಿಕ್ ಶೀಟ್ ಹಾಕಿ ಇಡ್ಲಿ ಬೇಯಿಸುತ್ತಿದ್ದ ಎರಡು ಹೋಟೆಲ್‍ಗಳ ಮೇಲೆ ನಗರಸಭೆ ಪರಿಸರ ಇಂಜಿನಿಯರ್ ಹೆಲ್ತ್ ಇನ್ಸ್‍ಪೆಕ್ಟರ್‍ಗಳ ಜೊತೆಗೂಡಿ ಗುರುವಾರ ದಾಳಿ ನಡೆಸಿ ಬೀಗ ಹಾಕಿದರು.
ಖಾಸಗಿ ಬಸ್‍ನಿಲ್ದಾಣದಲ್ಲಿ ಇಡ್ಲಿ ಸ್ಟಾಂಡ್‍ಗೆ ಪ್ಲಾಸ್ಟಿಕ್ ಶೀಟ್‍ಗಳನ್ನು ಹಾಕಿ ಇಡ್ಲಿ ಬೇಯಿಸುತ್ತಿದ್ದ ದೀಪ ಹಾಗೂ ವೈಷ್ಣವಿ ಹೋಟೆಲ್‍ಗಳ ಮೇಲೆ ದಾಳಿ ನಡೆಸಿದ ಪರಿಸರ ಇಂಜಿನಿಯರ್ ಬೇಯಿಸಿದ ಇಡ್ಲಿಗಳನ್ನು ವಶಪಡಿಸಿಕೊಂಡು ಇನ್ನು ಮುಂದೆ ಇದೇ ರೀತಿ ಪ್ಲಾಸ್ಟಿಕ್ ಶೀಟ್‍ಗಳನ್ನು ಹಾಕಿ ಇಡ್ಲಿ ಬೇಯಿಸಿದರೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆಂದು ಎಚ್ಚರಿಸಿ ಎರಡು ಹೋಟೆಲ್‍ಗಳನ್ನು ಸದ್ಯಕ್ಕೆ ಬಂದ್ ಮಾಡಿಸಿದರು.
ಪ್ಲಾಸ್ಟಿಕ್ ಶೀಟ್ ಹಾಕಿ ಇಡ್ಲಿ ಬೇಯಿಸಿದರೆ ಬಿಸಿಗೆ ಪ್ಲಾಸ್ಟಿಕ್ ಶೀಟ್‍ನಲ್ಲಿರುವ ರಸಾಯನಿಕ ಅಂಶ ಕರಗಿ ಅದನ್ನು ಸೇವಿಸುವವರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆನ್ನುವುದನ್ನು ಅನೇಕ ಬಾರಿ ತಿಳಿಸಿ ಜಾಗೃತಿ ಮೂಡಿಸಿದ್ದರು ತಲೆಕೆಡಿಸಿಕೊಳ್ಳದೆ ಪ್ಲಾಸ್ಟಿಕ್ ಶೀಟ್ ಹಾಕಿ ಇಡ್ಲಿ ಬೇಯಿಸುತ್ತಾರೆಂಬ ದೂರಿನನ್ವಯ ಪರಿಸರ ಇಂಜಿನಿಯರ್ ದಾಳಿ ನಡೆಸಿ ಎಲ್ಲೆಲ್ಲಿ ಈ ರೀತಿ ಇಡ್ಲಿ ಬೇಯಿಸುತ್ತಾರೋ ಅಲ್ಲೆಲ್ಲಾ ದಾಳಿ ನಡೆಸಲಾಗುವುದೆಂದು ತಿಳಿಸಿದರು.ನಗರಸಭೆ ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಭಾರತಿ, ಮಂಜುನಾಥ್, ಅಶೋಕ್, ಸೂಪರ್‍ವೈಸರ್ ಲಿಂಗರಾಜು ದಾಳಿಯಲ್ಲಿ ಭಾಗವಹಿಸಿದ್ದರು.