ಜಾತಿ ಆಧಾರಿತ ಸಾಹಿತ್ಯ ವಿಮರ್ಶೆ ಕೆಟ್ಟ ಬೆಳವಣಿಗೆ

ಚಿತ್ರದುರ್ಗ

     ಇಂದಿನ ದಿನಮಾನದಲ್ಲಿ ಆರೋಗ್ಯಕರವಾದ ವಿಮರ್ಶೆಗಿಂತ ಜಾತಿ, ಜನಾಂಗ ಮತ್ತು ಮತೀಯ ವಿಮರ್ಶೆಗಳು ಹೆಚ್ಚಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭೀಪ್ರಾಯಪಟ್ಟಿದ್ದಾರೆ.

        ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ನಿವೃತ್ತ ಪೋಲಿಸ್ ಅಧಿಕಾರಿಗಳ ಕಲ್ಯಾಣಿ ಸಭಾಂಗಣದಲ್ಲಿ ಇಂದಿನಿಂದ ಮೂರು ದಿನಗಳ ನಡೆಯುವ ಪ್ರಾರಂಭವಾದ ವಿಮರ್ಶಾ ಕಮ್ಮಟವನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

        ವಿಮರ್ಶೆ ಎನ್ನುವುದು ಮೂರು ತಲೆ ಮಾರುಗಳಿಂದ ನಡೆಯುತ್ತಾ ಬಂದಿದ್ದು ಮೂದಲನೆ ತಲೆಮಾರು ವಿಮರ್ಶೆ ಪ್ರಾರಂಭ ಮಾಡಿದರೆ ಎರಡನೇ ತಲೆಮಾರು ಮೊದಲನೆ ಮತ್ತು ಮೂರನೇ ತಲೆ ಮಾರಿನ ಕೂಂಡಿಯಾಗಿ ಕೆಲಸವನ್ನು ಮಾಡಿದ್ದಾರೆ ಈಗ ಮೂರನೇ ತಲೆಮಾರು ವಿಮರ್ಶೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕಿದೆ, ಈ ಹಿಂದೆ ಮೂರು ಕಣ್ಣಿನಿಂದ ವಿಮರ್ಶೆಯನ್ನು ಮಾಡಲಾಗುತ್ತಿತು ಆದರೆ ಈ ಬರೀ ಒಕ್ಕಣಿನಿಂದ ಮಾತ್ರವೇ ವಿಮರ್ಶೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

      ವಿಮರ್ಶೆಗೆ ಬಂದರೆ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದರೆ, ಎರಡನೇ ಸ್ಥಾನವನ್ನು ಮಹಾರಾಷ್ಟ್ರ ರಾಜ್ಯ ಪಡೆದಿದೆ. ವಿಮರ್ಶೆ ಎಂದರೆ ಬರೀ ಕೃತಿಗಳು ಮಾತ್ರವಲ್ಲದೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕತಿಕವಾದ ವಿಮರ್ಶೆಗಳು ಸಹಾ ಇದೆ, ಇಂದಿನ ದಿನಮಾನದಲ್ಲಿ ವಸ್ತು ನಿಷ್ಠವಾದ ವಿಮರ್ಶೆ ಅಗತ್ಯವಾಗಿದೆ, ವಿಮರ್ಶೆ ಎನ್ನುವುದು ನಿರಂತರವಾಗಿ ಇರಬೇಕು ಇಲ್ಲವಾದಲ್ಲಿ ನಿಂತ ನೀರಾಗುತ್ತದೆ ಜಡತ್ವವನ್ನು ವಿಮರ್ಶೆ ಪಡೆಯಬಾರದೆಂದು ತಿಳಿಸಿ, ಈ ಹಿಂದೆ ಕೃತಿಯ ವಿಮರ್ಶೆಗಳೆಂದರೆ ಅದು ನಿಸ್ಪಕ್ಷಪಾತವಾಗಿ ಇರುವುದರ ಮೂಲಕ ಕೃತಿಯ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ ಆದರೆ ಇಂದಿನ ದಿನಮಾನದಲ್ಲಿ ವಿಮರ್ಶೆ ಎಂದರೆ ಜಾತಿ, ಜನಾಂಗಗಳನ್ನು ಆಧರಿಸಿರುತ್ತದೆ ಎಂದು ವಿಷಾಧಿಸಿದರು.

      ಮುಂದಿನ ದಿನದಲ್ಲಿ 300 ವಿಮರ್ಶಕರು ಮತ್ತು ಸಂಶೋಧಕರನ್ನು ಸೇರಿಸಿಕೊಂಡು ಸಮ್ಮೇಳನವನ್ನು ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಧ್ಯಕ್ಷ ಮಾಲಗಿತ್ತು ತಿಳಿಸಿದರು.

       ಕಮ್ಮಟವನ್ನು ಉದ್ಘಾಟಿಸಿದ ಹಿರಿಯ ವಿಮರ್ಶಕರಾದ ಟಿ.ಪಿ.ಅಶೋಕ ಮಾತನಾಡಿ, ವಿಮರ್ಶ ವಲಯ ದೊಡ್ಡದಿದೆ. ಸಾಹಿತ್ಯ ನಿರ್ಮಾಣ ಒಂದು ಭಾಗವಾದರೆ ಅದರ ಬಗ್ಗೆ ವಿಮರ್ಶೆ ಮಾಡುವುದು ಮತ್ತೊಂದು ಭಾಗವಾಗಿದೆ, ಇದು ನಿರಂತರವಾಗಿ ಇದ್ದಾಗ ಮಾತ್ರ ಸಾಹಿತ್ಯಿಗಳಿಗೆ ಮಾರ್ಗದರ್ಶನವಾಗಲು ಸಾಧ್ಯವಿದೆ. ವಿಮರ್ಶೆ ಎನ್ನುವುದು ನಾಗರೀಕ ಸಮಾಜದಲ್ಲಿ ಸೂಕ್ಷ್ಮವಾದ ಸಂವೇದನ ಶೀಲಗಳನ್ನು ನಿರ್ಮಾಣ ಮಾಡುತ್ತದೆ ಎಂದರು.

        ಬಾಹ್ಯ ವಿಮರ್ಶೆ ಲೋಕವನ್ನು ನೋಡಿದರೆ ಆತ್ಮ ವಿಮರ್ಶೆ ಎನ್ನುವುದು ತನನ್ನು ತಾನು ನೋಡಿಕೊಳ್ಳುವುದಾಗಿದೆ, ಬಾಹ್ಯ ವಿಮರ್ಶೆಗಳು ಸಕ್ರಿಯವಾಗಿದ್ದರೆ ರಾಜಕೀಯ ವಿಮರ್ಶೆಗಳು ಕಲವೊಮ್ಮೆ ಬಲವಂತವಾಗಿರುತ್ತದೆ. ಗಾಂಧಿಯವರು ಬಾಹ್ಯ ವಿಮರ್ಶೆಗೆ ಒಳಪಟ್ಟರೆ ಅಂಬೇಡ್ಕರ್‍ರವರು ಆತ್ಮ ವಿಮರ್ಶೆಗೆ ಒಳಪಡುವುದರ ಮೂಲಕ ಅದನ್ನು ಆತ್ಮಗೌರವ ಎಂದು ಕಾಣುತ್ತಿದ್ದರು. ದೇಶದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ಇರುತ್ತದೇಯೇ ಅಲ್ಲಿ ವಿಮರ್ಶೆ ಎನ್ನುವುದು ಅಗತ್ಯವಾಗಿದೆ ವಿಮರ್ಶೆ ಇಲ್ಲದೆ ಪ್ರಜಾಪ್ರಭುತ್ವ ಇಲ್ಲ ಪ್ರಜಾಪ್ರಭುತ್ವ ಇಲ್ಲದೆ ವಿಮರ್ಶೆ ಇಲ್ಲ ಎಂದರು.

        ವಿಮರ್ಶೆಗೆ ಕವಿ, ಕೃತಿ ಮತ್ತು ಓದುಗ ಈ ಮೂರು ಅಂಶಗಳು ನಿರ್ಣಯಕವಾದ ಪಾತ್ರವನ್ನು ವಹಿಸುತ್ತದೆ, ವಿಮರ್ಶಕ ಈ ಮೂರು ಕಡೆಗೆವಾಲದೇ ನಿಸ್ಪಕ್ಷವಾದ ವಿಮರ್ಶೆಯನ್ನು ನೀಡಬೇಕಿರುವುದು ವಿಮರ್ಶಕರಾದವರ ಕೆಲಸವಾಗಿದೆ. ಕೃತಿಯ ಬಗ್ಗೆ ವಿಮರ್ಶಕರು ನೀಡುವ ವಿಮರ್ಶೆಯನ್ನು ಸಾಹಿತಿಗಳು ಒಪ್ಪಬಹುದು ಇಲ್ಲವೆ ಒಪ್ಪದೇ ಇರಬಹುದು ಆದರೆ ವಿಮರ್ಶಕರು ಮಾತ್ರ ಯಾವುದೇ ಮೂಲಾಜಿಗೆ ಒಳಗಾಗದೆ ತಮ್ಮ ಅನಿಸಿಕೆಯನ್ನು ತಿಳಿಸಬೇಕಿದೆ ಎಂದರು.

        ಕಾರ್ಯಕ್ರಮದಲ್ಲಿ ಕಮ್ಮಟ ಸಂಚಾಲಕರಾದ ಡಾ.ಎಚ್.ದಂಡಪ್ಪ, ನಿರ್ದೇಶಕರಾದ ಮಾರುತಿ ಮತ್ತು ಮುತ್ತಯ್ಯ ಭಾಗವಹಿಸಿದ್ದರು. ಚಿತ್ರಲಿಂಗಸ್ವಾಮಿ ಪ್ರಾರ್ಥಿಸಿದರೆ, ಅಕಾಡೆಮಿಯ ರಿಜಿಸ್ಟಾರ್ ಕರಿಯಪ್ಪ ಸ್ವಾಗತಿಸಿದರೆ ಕಮ್ಮಟ ನಿರ್ದೇಶಕರಾದ ಮಾರುತಿ ಅಕಾಡೆಮಿಯ ಉದ್ದೇಶಗಳನ್ನು ವಿವರಿಸಿದರು. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತನ ಅಧ್ಯಕ್ಷ ಡಾ.ಜಿ.ಎಂ.ಗುರುನಾಥ್ ವಂದಿಸಿದರು. ರವಿನಾಯಕ್ ಕಾರ್ಯಕ್ರಮ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link