ಹಾನಗಲ್ಲ :
ಪಟ್ಟಣದ ಹಳೆಬಸ್ ನಿಲ್ದಾಣ ಸಮೀಪದ ನೂರಾನಿಗಲ್ಲಿಯ ಮನೆಯೊಂದಕ್ಕೆ ವಿದ್ಯುತ್ ಶಾರ್ಟ ಸಕ್ರ್ಯೂಟ್‍ನಿಂದಾಗಿ ಬೆಂಕಿ ತಗುಲಿದ ಪರಿಣಾಮವಾಗಿ ಮನೆಯಲ್ಲಿನ ಲಕ್ಷಾಂತರ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಮಖಬೂಲ್‍ಅಹ್ಮದ್ ಪಟವೇಗಾರ್ ಅವರ ಮನೆಯಲ್ಲಿ ಶಾರ್ಟ ಸಕ್ರ್ಯೂಟ್ ಸಂಭವಿಸಿದ್ದು, ಮನೆಯಲ್ಲಿನ ಟಿವಿ, ಬಟ್ಟೆ, ಪ್ರಾತ್ರೆ, ಪೀಠೋಪಕರಣಗಳು, ಮೂರು ಕಬ್ಬಿಣದ ಕಪಾಟುಗಳಲ್ಲಿದ್ದ ಸಾವಿರಾರು ಬೆಲೆಯ ಸೀರೆ, ಬಂಗಾರದ ಆಭರಣಗಳು ಮತ್ತು ನಗದು ಹಣ ಎಲ್ಲವೂ ಸುಟ್ಟು ಕರಕಲಾಗಿವೆ. ಮನೆಯವರೆಲ್ಲ ಸವಣೂರಿನ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಶಾಸಕ ಸಿ.ಎಂ.ಉದಾಸಿ, ತಹಸೀಲ್ದಾರ್ ಎಂ.ಗಂಗಪ್ಪ, ಪ್ರಮುಖರಾದ ರಾಜು ಗೌಳಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ