ಗುತ್ತಲ :
ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ಸಂಸ್ಥೆಗಳು ಆರಂಭವಾಗುವುದರಿಂದ ಇಲ್ಲಿನ ಜನರಿಗೆ ಉದ್ಯೋಗ ಅವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತವೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಸಮೀಪದ ತಿಮ್ಮಾಪುರ ಗ್ರಾಮದ ಹೊರವಲಯದಲ್ಲಿ ಹುಲಿಗೆಮ್ಮದೇವಿ ಗಾರ್ಮೆಂಟ್ಸ್‍ನ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇತ್ತಿಚೀನ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶದ ಜನರು ಉದ್ಯೋಗವನ್ನು ಅರಸಿ ದೂರದ ನಗರ ಪ್ರದೇಶಗಳಿಗೆ ತೆರಳುವ ಪರಿಸ್ಥಿತಿಯನ್ನು ತಡೆಯಲು ಇಂತಹ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗುವುದು ಅವಶ್ಯವಾಗಿವೆ.
ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗವನ್ನು ನೀಡುವಂತ ಇಂತಹ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಜಾರಿಯಾಗಲಿ ಎಂದರು. ನಾನು ಜವಳಿ ಸಚಿವನಾಗಿದ್ದಾಗ ಸಹಾಯ ಧನವನ್ನು ಹೆಚ್ಚು ಮಾಡಿ ಅನುಕೂಲವಾಗುವಂತೆ ಮಾಡಲಾಗಿದೆ. ಗುತ್ತಲ ಪಟ್ಟಣದ ಪಕ್ಕದಲ್ಲಿ ಗಾರ್ಮೆಂಟ್ಸ್ ಆರಂಭದಿಂದ ಸುತ್ತಮುತ್ತಲ ಪುರುಷರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ದೊರೆಯುವಂತಾಗಿದ್ದು ಇದರಿಂದ ಕೆಲ ಕುಟುಂಬಗಳು ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದರು.
ಗಾರ್ಮೆಂಟ್ಸ್ ಮಾಲೀಕ ಐ.ಡಿ ಲಮಾಣಿ ಮಾತನಾಡಿ, ನಾನು ಗ್ರಾಮೀಣ ಭಾಗದ ಯುವಕನಾಗಿದ್ದು ಇಲ್ಲಿನ ಜನರ ಪರಿಸ್ಥಿತಿಯನ್ನು ಅರಿತಿದ್ದು, ಜನರು ಉದ್ಯೋಗಕ್ಕಾಗಿ ಅನೇಕ ದೂರದ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ನೀರಿಕ್ಷೇಯಲ್ಲಿ ಈ ಗಾರ್ಮೆಂಟ್ಸ್ ತೆರೆಯಲು ಮುಂದಾಗಿದ್ದು, ಇದರಲ್ಲಿ ಸುಮಾರು 500 ಜನಕ್ಕೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಗುರಿಯನ್ನು ಇರಿಸಲಾಗಿದೆ. ಇದರಿಂದ ಸುತ್ತಮುತ್ತಲ ಯುವಕ ಯುವತಿಯರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ: ನೆಗಳೂರು ಹಿರೇಮಠದ ಗುರುಶಾಂತ ಸ್ವಾಮಿಜಿ, ಯಲ್ಲಾಪುರ ಬೀರಪ್ಪಜ್ಜ, ಯಲ್ಲಾಪುರ ಶಿವಪ್ಪಜ್ಜ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಜಿ.ಪಂ ಅಧ್ಯಕ್ಷ ವಸಂತ ಕಳಸಣ್ಣನವರ, ನ್ಯಾಯವಾದಿ ಜಿ.ಆರ್ ಗಿರಿಯಪ್ಪನವರ, ಮುಖಂಡ ಈರಪ್ಪ ಲಮಾಣಿ, ಗ್ರಾ.ಪಂ ಸದಸ್ಯ ಗುಡ್ಡಪ್ಪ ಡೋಣ್ಣಿ, ದೊಡ್ಡಲೆಕ್ಕಪ್ಪ ಗೋಣ್ಣಿ, ಹನಮಂತ ಬಾರ್ಕಿ, ಕರ್ನಾಟನ ಬ್ಯಾಂಕ ವ್ಯವಸ್ಥಾಪಕ ಪ್ರಸನ್ನಕುಮಾರ, ಸಣ್ಣಗುಡ್ಡಪ್ಪ ಕತ್ತಿ, ಮಲ್ಲಪ್ಪ ಕಂಬಳಿ, ಬೀರೇಶ ಕಂಬಳಿ, ಇಕ್ಬಾಲಸಾಬ ರಾಣೇಬೆನ್ನೂರು, ಖಾದರ್ ಸುಬೇದಾರ, ರಮೇಶ ಲಮಾಣಿ, ವಿಜಯ ಲಮಾಣಿ, ಸಂಜಯಗಾಂದಿ ಸಂಜಿವಣ್ಣನವರ, ದತ್ತಾತ್ರಯ ಭಂಗಿ, ಜಿಲ್ಲಾ ಜವಳಿ ಇಲಾಖೆ ಅಧಿಕಾರಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರಿದ್ದರು.