ಹುಳಿಯಾರು ದುರ್ಗಮ್ಮನ ಜಾತ್ರೆಗೆ ತೆರೆ

ಹುಳಿಯಾರು:

      ಬರೋಬ್ಬರಿ 9 ದಿನಗಳ ಕಾಲ ನಡೆದ ಹುಳಿಯಾರು ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯವರ 49 ನೇ ವರ್ಷದ ಜಾತ್ರಾಮಹೋತ್ಸವವು ಗ್ರಾಮಸ್ಥರ ಮಡಲಕ್ಕಿ ಸೇವೆಯೊಂದಿಗೆ ತೆರೆ ಎಳೆಯಲಾಯಿತು.

     ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ ಗ್ರಾಮಸ್ಥರಿಂದ ಮಡ್ಲಕ್ಕಿ ಸೇವೆ, ಎಡೆ ಸೇವೆ, ಧ್ವಜಾರೋಹಣ, ಅಂಕುರಾರ್ಪಣೆ, ಆರತಿ ಬಾನ, ಎಡೆ ಸೇವೆ, ಶ್ರೀಹುಳಿಯಾರಮ್ಮನವರು, ಶ್ರೀಕೆಂಚಮ್ಮನವರು, ಹೊಸಹಳ್ಳಿ ಮತ್ತು ತಿರುಮಲಾಪುರದ ಶ್ರೀಕೊಲ್ಲಾಪುರದಮ್ಮನವರು ಹಾಗೂ ಗೌಡಗೆರೆ ಶ್ರೀದುರ್ಗಮ್ಮನವರ ಭೇಟಿ ಮುಂತಾದ ಧಾರ್ಮಿಕ ಕೈಂಕರ್ಯಗಳು ಜರುಗಿದವು.

  ಕಳಸೋತ್ಸವ:

      ಬೆಳಗಿನಜಾವ ಕಳಸ ಸ್ಥಾಪನೆ, ಫಲಹಾರಸೇವೆ, ನಂತರ ಶ್ರೀ ಅಮ್ಮನವರು ಕಳಸೋತ್ಸವಕ್ಕೆ ಚಾಲನೆ ನೀಡಲಾಯಿತು. ಕೋಡಿಹಳ್ಳಿ, ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಹುಳಿಯಾರು, ಕೇಶವಾಪುರ ಹಾಗೂ ಸೋಮಜ್ಜನಪಾಳ್ಯ ಗ್ರಾಮಗಳ ಸರಿಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಭಕ್ತಿ ಪೂರಕವಾಗಿ ಶ್ರೀಅಮ್ಮನವರ ಕಳಸವನ್ನು ತಲೆ ಮೇಲೆ ಹೊತ್ತು ನಡೆಮುಡಿಯೊಂದಿಗೆ ರಾಜ ಬೀದಿ ಉತ್ಸವದೊಂದಿಗೆ ಮೂಲ ಸ್ಥಾನಕ್ಕೆ ಆಗಮಿಸುವ ವಿಶೇಷ ಆಚರಣೆ ನಡೆಯಿತು.

ಬ್ರಹ್ಮ ರಥೋತ್ಸವ:

      ಶ್ರೀಅಮ್ಮನವರ ಉಯ್ಯಾಲೆ ಉತ್ಸವದ ಮರುದಿನ ಮಧ್ಯಾಹ್ನ ವೈಭವದಿಂದ ಬ್ರಹ್ಮ ರಥೋತ್ಸವ ನಡೆಯಿತು. ರಂಗು ರಂಗಿನ ಬಾವುಟಗಳು, ಹೂವಿನ ಹಾರಗಳಿಂದ ಶೃಂಗಾರಗೊಂಡು, ಮಂಗಳವಾದ್ಯದೊಂದಿಗೆ ಸಾಗಿ ಬಂದ ರಥಕ್ಕೆ ಭಕ್ತಾಧಿಗಳು ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿಬಾವ ಸಮರ್ಪಿಸಿದರು.

ವಿಶೇಷ ಸಿಡಿ:

      ದುರ್ಗಮ್ಮನ ಜಾತ್ರೆಯ ಮತ್ತೊಂದು ವಿಭಿನ್ನ ಧಾರ್ಮಿಕ ಆಚರಣೆ ಸಿಡಿ ಆಡುವುದು. ದೋಣು ಬಡಿಯುವ ವಂಶಸ್ಥರ ಕಡೆಯವರು ಒಂದು ಕಡೆ ದೇವಸ್ಥಾನ ಕಮಿಟಿ ಹಾಗೂ ತಳವಾರು, ಕೊಳವಾರು ಮತ್ತೊಂದು ಕಡೆ ಮೂರು ಸುತ್ತು ಮಂಗಳವಾಧ್ಯದೊಂದಿಗೆ ಸಿಡಿ ಆಡಿದ ದೃಶ್ಯವನ್ನು ವೀಕ್ಷಿಸಿದ ಭಕ್ತಸಾಗರ ಕರತಾಡನದ ಮೂಲಕ ನಂಬಿಕೆ ಸಮರ್ಪಿಸಿದರು.

      ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆದವು ಭಕ್ತಾಧಿಗಳು ಜಾತ್ರೆಯ ಅಂಗವಾಗಿ ಜರುಗಿದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap