ಡಾಬಸ್ ಪೇಟೆ:
ಇತಿಹಾಸ ಪ್ರಸಿದ್ದ ದೇವರಹೊಸಹಳ್ಳಿ ಭದ್ರಕಾಳಮ್ಮ ಸಮೇತ ವೀರಭದ್ರ ಸ್ವಾಮಿಯ ಕಲ್ಯಾ ಣೋತ್ಸವವನ್ನು ಮಾ.20ರಂದು ಸಂಜೆ 5.30 ಗಂಟೆಗೆ ದೇವರಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಸುಮಾರು 60 ಸಾವಿ ರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ದೇವಾಲಯದ ಆರ್ಚಕರಾದ ಜಗಜ್ಯೋತಿ ಬಸವೇಶ್ವರ ತಿಳಿಸಿದರು.
ದೇವರಹೊಸಹಳ್ಳಿ ಗ್ರಾಮದಲ್ಲಿ ಕಲ್ಯಾಣೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಸಿದ್ದತೆ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾ.20ರಂದು ಮಧ್ಯಾಹ್ನ 1 ಗಂಟೆಯಿಂದ 1.30 ಗಂಟೆಯೊಳಗೆ ರಥೋತ್ಸವ ನಡೆಯಲಿದ್ದು, ಸುಮಾರು 1.50 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಯಿದೆ.ಕಳೆದ ಮೂರು ವರ್ಷಗಳ ಹಿಂದೆ ಕಲ್ಯಾಣೋತ್ಸವ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದ್ದೆವು.
ಭಕ್ತರ ಆಶಯದಂತೆ ಈ ವರ್ಷ ಬಹಳ ವಿಜೃಂಭಣೆಯಿಂದ ಭದ್ರಕಾಳಮ್ಮ ಸಮೇತ ವೀರಭದ್ರ ಸ್ವಾಮಿಯ ಕಲ್ಯಾಣೋತ್ಸವವನ್ನು ನಡೆಸಲು ತೀಮಾ೯ನಿಸಿದ್ದು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್.ಶ್ರೀನಿವಾಸ್ ರವರ ಅಧ್ಯಕ್ಷತೆ ವಹಿಸಲಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಪ್ರಧಾನ ಅರ್ಚಕ ಫಣಿಭೂಷಣ್ ಮಾತನಾಡಿ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ದೇವರಾಗಿದ್ದು, ಗ್ರಾಮಸ್ಥರು, ಭಕ್ತರ ಸಹಕಾರದಿಂದ ಕಲ್ಯಾಣೋತ್ಸ ವ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವೂ ಇತಿಹಾಸದಲ್ಲಿ ಉಳಿಯಲಿದೆ.
ವಿವಾಹ ವಾರ್ಷಿಕೋತ್ಸ ವ ರೀತಿಯೇ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯಲಿದ್ದು, ಭಕ್ತರು ಆಗಮಿಸಿ ಕಲ್ಯಾಣೋತ್ಸವ ನೋಡಿ ದೇವರ ಕೃಪೆಗೆ ಪಾತ್ರರಾಗಿ ಎಂದರು.ಈ ಸಂದರ್ಭದಲ್ಲಿ ಅರ್ಚಕರಾದ ಫಣಿಭೂಷಣ್, ಚನ್ನಬಸವರಾಧ್ಯ, ಡಿ.ಜೆ ಸತೀಶ್, ಸತೀಶ್, ಅಭಿಲಾಷ್, ಮುಖಂಡ ವೆಂಕಟೇಶ್, ಲೋಕೇಶ್, ದೇವರಾಜು, ಆರಾಧ್ಯ, ಮಲ್ಲೇಶಪ್ಪ ಮತ್ತಿತರರಿದ್ದರು.
