ಬೆಂಗಳೂರು
ರಾಜ್ಯದಲ್ಲಿಯೇ ಮೊದಲ ಬಾರಿಗೆ ಯಕೃತ್ (ಲಿವರ್) ಪೀಡಿತರಾಗಿದ್ದ 200 ಮಂದಿಗೆ ಅಂಗಾಗ ಕಸಿ ಮಾಡುವ ಮೂಲಕ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆ ಹೊಸ ದಾಖಲೆ ಮಾಡಿದೆ.
ಆಸ್ಪತ್ರೆಯ ತಜ್ಞ ವೈದ್ಯರು 8 ಲಿವರ್-ಕಿಡ್ನಿ, 8 ಕಿಡ್ನಿ-ಮೇದೋಜೀರಕ ಗ್ರಂಥಿ ಕಸಿ ಸೇರಿದಂತೆ ಬಹು ಅಂಗಾಂಗ ಕಸಿ ಮಾಡಿದ್ದು, ಹೆಚ್ಚು ಬಹು ಅಂಗಾಂಗ ಕಸಿ ಮಾಡುತ್ತಿರುವ ಆಸ್ಪತ್ರೆ ಎಂದೂ ಖ್ಯಾತಿ ಗಳಿಸಿದೆ ಆಸ್ಪತ್ರೆಯ ಸಿಇಒ ಶೈಲಜಾ ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 2-3 ಕಸಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದುಯಕೃತ್ ಕಸಿ ಮಾಡುವ ಮೂಲಕ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕಳೆದ ವರ್ಷ ತಜ್ಞ ವೈದ್ಯರ ತಂಡ 29 ಅಂಗಾಂಗಗಳನ್ನು ಕಸಿ ಮಾಡಿದ್ದು, ಇದರಲ್ಲಿ 14 ಲಿವರ್ ಕಸಿ ಮಾಡಿದ್ದು, ಶೇ.93 ರಷ್ಟು ಯಶಸ್ವಿ ಸಾಧಿಸಿದೆ ಎಂದ ಅವರು, ಅತಿ ದೀರ್ಘವಾದ ಲಿವರ್ ಕಸಿ ಕಾರ್ಯಕ್ರಮವನ್ನು ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ನಡೆಸುತ್ತಿದೆ. ಆಸ್ಪತ್ರೆ ಸಮೂಹದ ಪ್ರಮುಖ ಆದ್ಯತೆ ಕಸಿ ಪ್ರಕ್ರಿಯೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿರುವುದಕ್ಕೆ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಲಿವರ್ ಕಸಿಗೆ ಸುಮಾರು 18ರಿಂದ 24 ಲಕ್ಷ ರೂ. ಖರ್ಚಾಗುತ್ತದೆ. ಬಡ ಜನರಿಗೆ ಅನುಕೂಲವಾಗಲೆಂದು ಆರೋಗ್ಯ ವಿಮಾ ಸೌಲಭ್ಯದ ಮೂಲಕ ಚಿಕಿತ್ಸಾ ವೆಚ್ಚ ಪಡೆಯಲಾಗುತ್ತದೆ. ನುರಿತ ವೈದ್ಯರ ತಂಡ ನಮ್ಮ ಆಸ್ಪತ್ರೆ ಹೊಂದಿದೆ ಎಂದರು.
ಅಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜೀವ ಸಾರ್ಥಕತೆ ಸಂಸ್ಥೆಯೊಂದಿಗೆ ಸಹಯೋಗ ಮಾಡಿಕೊಳ್ಳಲಾಗಿದೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಜಾಗೃತಿ ಮೂಡಿಸಬೇಕು. ಅಂಗಾಂಗ ಕಸಿಗೆ ತಗಲುವ ವೆಚ್ಚವನ್ನು ಭರಿಸಲು ಆರ್ಥಿಕ ನೆರವಿಗೆ ಸಾರ್ವಜನಿಕರ ಸಹಾಯಕ್ಕೆ ಮುಂದಾಗಿದ್ದೇವೆ ಎಂದು ನುಡಿದರು.ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ.ಸಂಜೀವ್ ಗೊವಿಲ್ ಸೇರಿದಂತೆ ಪ್ರಮುಖರಿದ್ದರು.