ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ

 ಹಾವೇರಿ

   ನಗರದಲ್ಲಿರುವ ಸಿದ್ದಪ್ಪ ಸರ್ಕಲ್ ಹತ್ತಿರ ರೈತ ಹುತಾತ್ಮರಾದ ಸಿದ್ಲಿಂಗಪ್ಪ ಚೂರಿ, ಪುಟ್ಟಪ್ಪ ಹೊನ್ನತ್ತಿ ಇವರು ಗೊಬ್ಬರ ಗಲಾಟೆಯಲ್ಲಿ ಪೋಲೀಸರ ಗುಂಡಿಗೆ ಬಲಿಯಾದವರ ವೀರಗಲ್ಲಿಗೆ ಜನತಾದಳ ಜಾತ್ಯಾತೀತ ಪಕ್ಷದ ಜಿಲ್ಲಾ ಅಧ್ಯಕ್ಷ ಅಶೋಕ ಬೇವಿನಮರ ಇವರ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಹುತಾತ್ಮರ ಆತ್ಮಕ್ಕೆ ಚಿರಶಾಂತಿಯನ್ನು ದೇವರಲ್ಲಿ ಪ್ರಾರ್ಥಿಸಿದರು.

   ಭೀಕರ ಬರಗಾಲ ಬಂದ ಸಂದರ್ಭದಲ್ಲಿ ಜಿಲ್ಲೆಯ 70 ಜನ ರೈತರು ಸಾಲ ಬಾದೆಗೆ ಒಳಗಾಗಿ ನೊಂದ ಆತ್ಮ ಹತ್ಯೆ ಮಾಡಿಕೊಂಡಿದ್ದ 70 ಜನ ರೈತ ಕುಟುಂಬದವರಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿರವರು ನಗರದಲ್ಲಿರುವ ಮುನ್ಸಿಪಲ್ ಮೈದಾನದಲ್ಲಿ ಸಭೆ ಏರ್ಪಡಿಸಿ 70 ಜನ ರೈತರು ಆತ್ಮ ಹತ್ಯೆ ಮಾಡಿಕೊಂಡ ನೊಂದ ವಿಧವೆಯರಿಗೆ ತಮ್ಮ ಅಂತ:ಕರಣದಿಂದ ಮಾನವಿಯತೆಯ ಮೇಲೆ ತಲಾ 50,000/-ಗಳನ್ನು ನೀಡಿದ್ದಾರೆ.

      ತದ ನಂತರ ಚುನಾವಣೆಯ ಸಂದರ್ಭದಲ್ಲಿ ಪಕ್ಷ ಬಹುಮತ ಪಡೆದು ಆಡಳಿತಕ್ಕೆ ಬಂದ 24 ಗಂಟೆಯೊಳಗಾಗಿ ರೈತರ ಸಾಲವನ್ನು ಮನ್ನಾ ಮಾಡುತ್ತೇವೆಂದು ಘೋಷಣೆ ಮಾಡಿದ್ದರು. ಆದರೆ ಬಹುಮತ ಬರದೆ ಜೆ.ಡಿ.ಎಸ್ ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ರಚನೆಗೊಂಡು ಮುಖ್ಯಮಂತ್ರಿ ಆದ ನಂತರ ಸುಮಾರು 49ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತಂದು ಹಂತ ಹಂತವಾಗಿ ಸಾಲ ಮನ್ನಾ ಆಗುತ್ತಿದೆ.

     ಈ ನಿಟ್ಟಿನಲ್ಲಿ ರೈತ ಬಾಂಧವರು ತಮ್ಮ ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಸ್ವಾಭೀಮಾನದ ಬದುಕು ನಡೆಸಬೇಕೆಂದು ಜಿಲ್ಲಾಧ್ಯಕ್ಷ ಬೇವಿನಮರ ರೈತರಲ್ಲಿ ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಮುಖಂಡರಾದ ಎಸ್.ಎಸ್. ಕಳ್ಳಿಮನಿ.ಶಿವಕುಮಾರ ಮಠದ ಎಸ್. ಎಲ್.ಕಾಡದೇವರಮಠ, ವೀರೇಶ ಅಂಗಡಿ, ಮಂಜುನಾಥ ಕದಂ, ರುದ್ರಗೌಡ ಕಾಡನಗೌಡ್ರ, ಸುರೇಶ ಚಲವಾದಿ, ಮಹಾಂತೇಶ ಬೇವಿನಹಿಂಡಿ,ರೈತ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link