ಸುಂದರ ನಗರ ನಿರ್ಮಾಣ ನನ್ನ ಕನಸು :ಸುರೇಶಗೌಡ

ಬ್ಯಾಡಗಿ:

    ಸುಂದರವಾದ ಬ್ಯಾಡಗಿ ಪಟ್ಟಣವನ್ನು ನಿರ್ಮಿಸುವುದು ನನ್ನ ಕನಸಾಗಿತ್ತು, ಅದಕ್ಕಾಗಿ ಶಾಸಕನಾಗಿದ್ದ ಸಂದರ್ಭದಲ್ಲಿ ಪಟ್ಟಣದ ಅಭಿವದ್ಧಿಗೆ ರೂ.150 ಕೋಟಿ ಅನುದಾನ ಮಂಜೂರು ಮಾಡಿಸಿದ್ದೆ, ಆದರೆ ಎಲ್ಲ ಕೆಲಸಗಳನ್ನು ಪೂರ್ಣ ಗೊಳಿಸಲು 5 ವರ್ಷಗಳ ಅವಧಿ ಸಾಕಾಗಲಿಲ್ಲ ಎಂದು ಮಾಜಿ ಶಾಸಕ ಸುರೇಶಗೌಡ ಎಂದು ಹೇಳಿದರು.

     ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ 20ನೇ ವಾರ್ಡನಲ್ಲಿ ಜರುಗಿದ ಪುತ್ರ ಬಾಲಚಂದ್ರಗೌಡ ಪರ ಜನಾಭಿಪ್ರಾಯ ಸಂಗ್ರಹ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು, ಬ್ಯಾಡಗಿ ಪಟ್ಟಣದ ಮೇಲೆ ನಾನು ಹೊಂದಿದ್ದ ವಿಶೇಷ ಕಾಳಜಿಯನ್ನು ನೋಡಿಯೇ ಬಿಜೆಪಿ ಪಕ್ಷವು ಕಳೆದ 2008ರಲ್ಲಿ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ಶಾಸಕನಾಗಿ ಆಯ್ಕೆಯಾಗಲು ಸಹಕರಿಸಿತ್ತು, ಆದರೆ ಬಳಿಕ ರಾಜ್ಯ ರಾಜಕಾರಣದಲ್ಲಿ ನಡೆದ ಬದಲಾ ವ ಣೆಗಳಿಂದ 2013 ಮತ್ತು 2018 ಎರಡನೇ ಬಾರಿ ಶಾಸಕನಾಗುವ ಅವಕಾಶ ದೊರೆಯಲಿಲ್ಲ ಎಂದರು.

     ಬ್ಯಾಡಗಿ ನಗರದ ಜನತೆಗೆ ರೂ.22.92 ಕೋಟಿ ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ ಸೇರಿದಂತೆ, ಪಟ್ಟಣಕ್ಕೆ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಪದವಿ ಮಹಾವಿದ್ಯಾಲಯ ತಾಲೂಕಿಗೆ ಒಟ್ಟು ರೂ.700 ಕೋಟಿ ವೆಚ್ಚದ ಅನುದಾನ ಮಂಜೂರು ಬಿಡುಗೊಳಿಸಿದ್ದಾಗಿ ತಿಳಿಸಿದರು, ಬಸವೇಶ್ವರ ನಗರದ ನಿವಾಸಿಗಳ ಬಹುದಿನ ಸಮಸ್ಯೆ ಪರಿಹಾರಕ್ಕೆ ವಿಧಾನಸಭೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್‍ವೈ ಬಳಿ ಚರ್ಚಿಸಿದ್ದೆ, ಸದರಿ ಪ್ರದೇಶದಲ್ಲಿ ವಾಸವಾಗಿರುವ ಒಟ್ಟು 475 ಕುಟುಂಬಗಳಿಗೆ ಉಚಿತವಾಗಿ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದೆ, ಆದರೆ ಕಾನೂನಿನ ತೊಡಕಿನಿಂದ ಅದು ಸಾಧ್ಯವಾಗದೇ ಹೋಯಿತು, ಇದೀಗ ಪರಿಹಾರ ಕಂಡುಕೊಳ್ಳುವ ಅವಕಾಶ ಮತ್ತೊಮ್ಮೆ ದೊರಕಿದ್ದು ಕಾಯಾ ವಾಚಾ ಮನಸಾ ಸಮಸ್ಯೆಗೆ ಸೂಕ್ತ ಪರಿಹಾರ ಮಾಡಿಕೊಡುವುದಾಗಿ ತಿಳಿಸಿದರು.

    ಸ್ಪರ್ಧಿಸಲು ಚಿಂತನೆ ನಡೆಸಲಾಗುತ್ತಿದೆ: ಸ್ಥಳೀಯ ಮತದಾರರು ಹೆಚ್ಚು ಒಲವು ತೋರಿದ ಹಿನ್ನೆಲೆಯಲ್ಲಿ ಪುತ್ರ ಬಾಲಚಂದ್ರಗೌಡ ಮೊದಲ ಬಾರಿಗೆ 20ನೇ ವಾರ್ಡನಿಂದ ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ, ಯುವಸೇನೆ ಸಂಸ್ಥಾಪಕ ಅಧ್ಯಕ್ಷರಾಗಿ ಜನರ ಸಮಸ್ಯೆಳಿಗೆ ಸ್ಪಂದಿಸಿದ್ದಲ್ಲದೇ ಶಿಕ್ಷಣ, ಆರೋಗ್ಯ, ಕ್ರೀಡೆ ಸೇರಿ ದಂತೆ ಹಲವು ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರಿಗೆ ಅವಕಾಶ ನೀಡುವ ಮೂಲಕ ತಮ್ಮ ಅಮೂಲ್ಯವಾದ ಮತ ಗಳನ್ನು ನೀಡುವಂತೆ ಮನವಿ ಮಾಡಿದರು.

     ಈ ಸಂದರ್ಭದಲ್ಲಿ ಎನ್.ಎಂ.ಕೆಂಬಿ, ರವಿ ಪಟ್ಟಣಶೆಟ್ಟಿ, ಕೃಷ್ಣಪ್ಪ ಅಂಚಟಗೇರಿ, ಶಂಭುಲಿಂಗಯ್ಯ ಲಿಂಗದಹಳ್ಳಿಮಠ, ಸಂಬಾಜಿ ಜಾಧವ, ಈರಣ್ಣ ಬೂದಿಹಾಳಮಠ, ಈರಣ್ಣ ಬಣಕಾರ, ವೀರೇಶ ಮತ್ತಿಹಳ್ಳಿ, ರವಿ ಪೂಜಾರ ನವೀನ ಅಜಗಣ್ಣನವರ, ನಿಂಗಪ್ಪ ಹುಗ್ಗಿ, ಶಿವಣ್ಣ ಬೂದಿಹಾಳ, ವಾಗೀಶ ಹಿರೇಮಠ, ಗಿರೀಶಗೌಡ್ರ ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link