ಮಧುಗಿರಿ:
ನಾನು ಜವಾಬ್ದಾರಿಯನ್ನು ಯಾರಿಂದಲೂ ಕಲಿಯ ಬೇಕಾಗಿಲ್ಲ ನಾನು ಸರಕಾರಿ ಅಧಿಕಾರಿಯಾಗಿ 30 ವರ್ಷ ಕೆಲಸ ಮಾಡಿದ ಅನುಭವವಿದೆ ಎಂದು ಪರೋಕ್ಷ ವಾಗಿ ಸಂಸದ ಜಿ.ಎಸ್.ಬಸವರಾಜುರವರಿಗೆ ಶಾಸಕ ಎಂ.ವಿ ವೀರಭದ್ರಯ್ಯ ಕುಟುಕಿದರು.
ಸಿದ್ಧಾಪುರದ ಕೆರೆಗೆ ಹೇಮಾವತಿ ನಾಲೆಯಿಂದ ನೀರು ಸರಬರಾಜು ಮಾಡುವ ತುಮಕೂರಿನ ಬಳ್ಳಾಪುರದ ಪಂಪ್‍ಹೌಸ್‍ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು. ನನಗೆ ಜವಾಬ್ದಾರಿ ಇಲ್ಲ ಎಂದು ಟೀಕಿಸುವ ರಾಜಕೀಯ ವಿರೋಧಿಗಳಿಂದ ನಾನು ಪಾಠ ಕಲಿಯಬೇಕಿಲ್ಲ.
ಪಂಪ್‍ಹೌಸ್‍ನಲ್ಲಿನ ಪರಿಕರಗಳು ಕಳ್ಳತನವಾಗಿವೆ ಎಂಬುದು ಮೇಲುನೋಟಕ್ಕೆ ಕಂಡುಬರುತ್ತಿಲ್ಲ. ಪರಿಕರಗಳು ಕಾಣೆಯಾದ ಹಿಂದೆ ಕಾಣದ ಕೈಗಳ ಕೈವಾಡವಿದೆ, ಕಳುವಾಗಿರುವ ಉಪಕರಣಗಳು ಲಕ್ಷಾಂತರ ರೂಗಳ ಮೌಲ್ಯ ಬೆಲೆ ಬಾಳುವುದಿಲ್ಲ ಯಾರೊ ದುಷ್ಟರು ಕೆರೆಗೆ ನೀರು ಹರಿಸಲು ತೊಂದರೆಯನ್ನುಂಟು ಮಾಡಿ ನನ್ನ ಹೆಸರಿಗೆ ಕಳಂಕ ತರುವ ಉದ್ಧೇಶವಾಗಿದೆ.
ಘಟನೆ ಬಗ್ಗೆ ಸತ್ಯ ಹೊರಬೀಳುತ್ತದೆ ನನ್ನ ಗಮನವೇನಿದ್ದರು ಅಭಿವೃದ್ಧಿಯ ಕಡೆ ಹಾಗೂ ಕೆರೆಗೆ ನೀರು ಹರಿಸುವುದಾಗಿದೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿಯು ಇಲ್ಲಾ ನೀರು ಹರಿಯುವ ಮಾರ್ಗ ಹಾಗೂ ಪಂಪ್ ಹೌಸ್‍ಗೆ ಹೊರ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಬೇಕು.
ಭದ್ರತೆಯ ದೃಷ್ಟಿಯಿಂದ ಸಿ.ಸಿ.ಕ್ಯಾಮರ ಆಳವಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಾನು ಖಂಡಿಸುತ್ತೇನೆ ಬುಧವಾರ ಮಧ್ಯಾಹ್ನ ದೊಳಗೆ ಹೇಮಾವತಿ ನೀರು ಸಿದ್ದಾಪುರದ ಕೆರೆಗೆ ಹರಿಯಲಿದೆ ಎಂದರು.
ಪುರಸಭಾ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರಬಾಬು, ಮುಖ್ಯಾಧಿಕಾರಿ ಡಿ.ಲೋಹಿತ್, ಮುಖಂಡರಾದ ಟಿ.ಮಂಜುನಾಥ್, ಕಂಬಣ್ಣ, ಎಂ.ಕೆ.ಮಂಜುನಾಥ್, ಟಿ.ರಾಮಣ್ಣ, ಟಿ.ಗೋವಿಂದರಾಜು, ಸಂಜೀವಪ್ಪ, ಶಿವಪ್ಪ, ಶೈಲಿರವಿ ಹಾಜರಿದ್ದರು.