ಪ್ರತಿಪಕ್ಷಗಳ ಹೇಳಿಕೆಗೆ ಉತ್ತರ ಕೊಡಲು ಇಷ್ಟವಿಲ್ಲ

ದಾವಣಗೆರೆ

  ಯಾವುದೇ ಪ್ರತಿಪಕ್ಷಗಳ ನಾಯಕರ ಹೇಳಿಕೆಗೆಲ್ಲಾ ಉತ್ತರ ಕೊಡಲು ನನಗೆ ಇಷ್ಟವಿಲ್ಲ, ಜನರೇ ಉತ್ತರ ಕೊಡುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

   ಹೊಸಪೇಟೆ ಬಿಜೆಪಿ ಅಭ್ಯರ್ಥಿ ಆನಂದ್‍ಸಿಂಗ್ ಅವರ ಪರ ಪ್ರಚಾರ ನಡೆಸಲು ಹೊಸಪೇಟೆಗೆ ತೆರಳುವ ಮುನ್ನ ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ 8 ಕ್ಷೇತ್ರಕ್ಕಿಂತ ಕಡಿಮೆ ಸ್ಥಾನ ಬಂದರೆ ಮಧ್ಯಂತರ ಚುನಾವಣೆ ಬರುತ್ತದೆ ಎಂಬ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಯಿಸಿ, ಯಾವುದೇ ಪ್ರತಿಪಕ್ಷಗಳ ನಾಯಕರ ಹೇಳಿಕೆಗೆ ಉತ್ತರ ಕೊಡಲು ನನಗೆ ಇಷ್ಟವಿಲ್ಲ, ಜನರೇ ಉತ್ತರ ಕೊಡುತ್ತಾರೆ ಎಂದು ಕುಟುಕಿದರು.

   ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇನ್ನೂ ಮೂರುವರೆ ವರ್ಷ ಆಡಳಿತ ನಡೆಸಬೇಕೆಂಬುದಾಗಿ ನಾಡಿನ ಆರೂವರೆ ಕೋಟಿ ಜನರು ಸಂಕಲ್ಪ ಮಾಡಿದ್ದಾರೆ. 15 ಕ್ಷೇತ್ರಗಳಲ್ಲಿ ಇದೇ ವಾತಾವಣವಿದ್ದು, ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ 15 ಕ್ಷೇತ್ರಗಳಲ್ಲಿ ಗೆದ್ದು, ಸ್ವಂತ ಶಕ್ತಿಯ ಮೇಲೆ ಇನ್ನೂ ಮೂರೂವರೆ ವರ್ಷ ಜನಪರ ಆಡಳಿತ ನೀಡುತ್ತೇವೆ. ನಮಗೆ ಯಾವುದೇ ಪಕ್ಷಗಳ ಬೆಂಬಲ ಬೇಕಾಗಿಲ್ಲ ಎಂದು ಹೇಳಿದರು.

   ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ವೀರಶೈವ ಸಮಾಜದ ಒಂದು ವೋಟು ಬಿಜೆಪಿಗೆ ತಪ್ಪಬಾರದು ಎಂಬುದಾಗಿ ಕರೆ ಕೊಟ್ಟ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಪ್ರತಿಪಕ್ಷಗಳಿಗೆ ಮಾಡಲು ಬೇರೆ ಕೆಲಸ ಏನೂ ಇಲ್ಲ. ಅದನ್ನಾದರೂ ಮಾಡಲಿ ಬಿಡಿ ಎಂದರು.

   ಉಪ ಚುನಾವಣೆಯಲ್ಲಿ ಯಾರೂ ಜಾತಿ, ಧರ್ಮ ಇಲ್ಲದೇ, ಬಿಜೆಪಿಗೆ ಮತ ನೀಡಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಂಸದ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಶಿವಕುಮಾರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ, ಗೌತಮ್ ಜೈನ್, ಧನುಷ ರೆಡ್ಡಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link