ಹಗರಿಬೊಮ್ಮನಹಳ್ಳಿ:
ಬಿಜೆಪಿ ಆಡಳಿತಾವಧಿಯಲ್ಲಿ ನೀರಾವರಿ ಯೋಜನೆಗಳಾದ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತರುವುದು ಮತ್ತು ನಂದಿದುರ್ಗ ಯೋಜನೆಗಳು ಬಜೆಟ್ ಪುಸ್ತಕದಲ್ಲಿ ದಾಖಲಾಗಿ ಅದನ್ನು ತೋರಿಸಿದರೆ ನಾನು ರಾಜಿನಾಮೆ ನೀಡಲು ಸಿದ್ಧನಿದ್ದೇನೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಬಿಜೆಪಿಯವರಿಗೆ ಚಾಲೇಜ್ ಮಾಡಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟೂರಿನ ಕೆರೆ ಸೇರಿ 11ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ 85ಕೋಟಿ ರು.ಗಳನ್ನು ಮೀಸಲಿರಿಸಿದ ಯೋಜನೆಯನ್ನು ದಾಖಲಾಗಿಸಿರುವ ಬಜೆಟ್ ಪುಸ್ತಕ ತೋರಿಸುತ್ತ ಅವರು ಮಾತನಾಡಿದರು. ಬಜೆಪಿಯ ಆಡಳಿತ ಅವಧಿಯಲ್ಲಿ ಜಿಲ್ಲೆಯ ಮೂರು ಜನ ಸಚಿವರು ನನ್ನ ಕಿಸೆಯೊಳಗೆ ಇದ್ದಾರೆ ಎಂದು ಬೀಗುತ್ತಿದವರು ಈ ಕ್ಷೇತ್ರಕ್ಕೆ ಒಂದೇ ಒಂದು ನೀರಾವರಿ ಯೋಜನೆಯನ್ನು ಜಾರಿಗೊಳಿಸುವಲ್ಲಿ ಮತ್ತು ಅದನ್ನು ಯಶಸ್ವಿಮಾಡುವಲ್ಲಿ ಒಂಚೂರು ಪ್ರಯತ್ನವಾದರೂ ಇದೆಯೇ ಎಂದು ಮಾಜಿ ಶಾಸಕ ನೇಮಿರಾಜ್ ಮತ್ತು ಸಿರಾಜ್‍ಶೇಕ್ ಹೆಸರೇಳದೆ ಪ್ರಶ್ನಿಯನ್ನೆಸೆದರು.
ಅದರಂತೆ ಈ ಕ್ಷೇತ್ರಕ್ಕೆ ಆಯ್ಕೆಯಾದ ಯಾವೂಬ್ಬ ನಾಯಕರು ನೀರಾವರಿ ಯೋಜನೆಗಳಬಗ್ಗೆ ಕಾಳಜಿ ತೋರಲಿಲ್ಲ. ನಾನು ಆಯ್ಕೆಯಾದ ಬಳಿಕ ಚಿಲವಾರು ಬಂಡಿ ಏತ ನೀರಾವರಿ ಯೋಜನೆ, ಮಾಲವಿ ಜಲಾಶಯ ಶಾಶ್ವತ ನೀರು ತುಂಬಿಸುವ ಯೋಜನೆ ಹಾಗೂ ಸ್ವಾತಂತ್ರ ಬಂದಾಗಿನಿಂದ ಇದ್ದ ಕೊಟ್ಟೂರು ಕೆರೆಗೆ ಶಾಶ್ವತ ನೀರು ತುಂಬಿಸುವ ಯೋಜನೆ ಇಂದು ಬಜೆಟ್ ಸೇರ್ಪಡೆಯಲ್ಲಿ ಸೇರಿ ರೈತರ ಪರವಾದ ಬಜೆಟ್ ಇದಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಈ ಎಲ್ಲಾ ಬೃಹತ್ ನೀರಾವರಿ ಯೋಜನೆಗಳಿಂದಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ 40ಸಾವಿರ ಎಕರೆಗೂ ಹೆಚ್ಚು ಭೂಮಿಗೆ ನೀರುಣಿಸಲಾಗುವುದು. ಇದರಿಂದ ಈ ಭಾಗದಲ್ಲಿ ಭತ್ತದ ಪ್ರದೇಶವಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಕೆರೆ ಯೋಜನೆಗಳಿಗೆ ಈಗಾಗಲೇ ಜಲಸಂಪನ್ಮೂಲ ಇಲಾಖೆಯ ಎಂ.ಡಿಯವರ ಬಳಿ ಚರ್ಚೆಮಾಡಿದ್ದೇನೆ. ಶೀಘ್ರದಲ್ಲೆ ಒತ್ತುವರಿಯಾದ ಕೆರೆಗಳ ಕಾರ್ಯ ಪರಿಶೀಲನೆ ಆರಂಭಗೊಳ್ಳುತ್ತದೆ. ನಂತರ ಡಿ.ಪಿ.ಆರ್ ಮಾಡಲಾಗುವುದು ಇದಕ್ಕೆ ಮುಂದುವರೆದು ಮುಟುಗನಹಳ್ಳಿ ಕೆರೆ ಸೇರಿ ಎಷ್ಟು ಕೆರೆಗಳು ಬರುತ್ತವೆ ಅಷ್ಟೂ ಕೆರೆಗಳನ್ನು ಸಏರ್ಪಡೆಮಾಡಿ ಅನುದಾನ ಹೆಚ್ಚಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಕೊಟ್ಟೂರಿನ ಕೆರೆಯಿಂದ 6ಸಾವಿರ ಎಕರೆಗೂ ಹೆಚ್ಚು ನೀರಾವರಿ ಅನುಕೂಲವಾಗಲಿದೆ. ಜೊತೆಗೆ ಅಂತರ್ಜಲ ಹೆಚ್ಚಾಗಲಿದೆ. 1100 ಎಕರೆ ವಿಸ್ತೀರ್ಣಉಳ್ಳ ಕೊಟ್ಟೂರಿನ ಕೆರೆ ಇದಾಗಿದ್ದು ಈ ಭಾಗದ ಹಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿದೆ.
ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್ ನಂಜುಂಡಪ್ಪ ವರದಿ ಆದರಿಸಿ, ಹಿಂದುಳಿದ ತಾಲೂಕುಗಳಿಗೆ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿಗಳು ಎಲ್ಲರ ಮೆಚ್ಚಿಗೆ ಗಳಿಸಿದ್ದಾರೆ. ಬಿಜೆಪಿಯ ಕೇಂದ್ರದ ಬಜೆಟ್ ಸಂಪೂರ್ಣ ಬೋಗಸ್ ಆಗಿದ್ದು, ಇದು ಕೇವಲ ಚುನಾವಣೆ ಗಿಮಿಕ್ ಅಷ್ಟೆ, ಅವರಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಅವರ ಫಸಲ್ ಭೀಮಾ ಯೋಜನೆ ಏನಾಯಿತು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ ಎಂದರು.
ಜಾಗವನ್ನು ಆದಷ್ಟು ಬೇಗನೆ ನಿರ್ಧರಿಸಿ ಸಧ್ಯದಲ್ಲೆ ಮಿನಿ ವಿಧಾನ ಸೌದಕ್ಕೆ ಚಾಲನೆ ನೀಡುತ್ತೇವೆ. ಕೆರೆಗಳ ಬಗ್ಗೆ ನಮ್ಮದೇ ಆದ ಸ್ಥಳೀಯ ಸಮಿತಿ ರಚಿನೆಮಾಡಲಾಗುವುದು. ಅಂಕಸಮುದ್ರದ ಪಕ್ಷದಾಮಕ್ಕೆ ವೀಕ್ಷಣಾಗೋಪುರ ನಿರ್ಮಾಣಮಾಡಲಾಗುವುದು. ಈ ಕೆರೆಯಲ್ಲಿ ಮೀನು ಸಾಕಣಿಕೆಗೆ ಯಾರಿಗೂ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲೆ ಮೂರನೇ ಸುಂದರ ಪಕ್ಷಿದಾಮ ಇದಾಗಲಿದೆ ಎಂದರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಟೆಂಡರ್ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕರೆದು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಮಾಲವಿ ಜಲಾಶಯ ಯೋಜನೆಯ ಆರಂಭವಾಗಿದ್ದು, ರಾಜ್ವಾಳ್ ಹತ್ತಿರ ನಡೆಯುತ್ತಿರುವ ಕಾಮಗಾರಿಗೆ ಕಾಣದ ಕೈಗಳು ಅಡ್ಡಿ ಪಡಿಸುತ್ತಿವೆ. ಅದಕ್ಕೆ ಯಾರೇ ಅಡ್ಡಿಪಡಿಸಿದರೂ, ಅವರು ಎಂತಹ ದೊಡ್ಡ ವ್ಯಕ್ತಿಗಳಾಗಿದ್ದರೂ, ಅವರ ವಿರುದ್ಧ ನಾನು ರಸ್ತೆಗಿಳಿದು ಹೋರಾಟಮಾಡುವೆ. ಇದು ರೈತರ ಪರವಾದ ಯೋಜನೆಯಾಗಿದ್ದು ಅಡ್ಡಿಪಡಿಸುವವರ ಮನೆಮುಂದೆ ಸಾವಿರಾರು ರೈತರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇನೆ-ಶಾಸಕ ಎಸ್.ಭೀಮಾನಾಯ್ಕ.
ಈ ಸಂದರ್ಭದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿಬಸವರಾಜ್, ಸದಸ್ಯ ಅನಿಲ್ ಜಾಣ, ಪುರಸಭೆ ಸದಸ್ಯರಾದ ಹಂಚಿನಮನಿ ಹನುಮಂತಪ್ಪ, ಹುಡೇದ್ ಗುರುಬಸವರಾಜ್, ಅಲ್ಲಾಭಕ್ಷಿ, ಸಮಾಜ ಸೇವಕ ಕುರಿಶಿವಮೂರ್ತಿ, ಮುಖಂಡರಾದ ಹಾಲ್ದಾಳ್ ವಿಜಯಕುಮಾರ್, ಹೆಗ್ಡಾಳ್ ರಾಮಣ್ಣ, ಇರ್ಫಾನ್, ನವೀನ್, ಕುಲ್ಮಿ ರೆಹಮಾನ್, ಸೋಗಿ ಕೊಟ್ರೇಶ್, ಅರಸಿಕರೆ ಹನುಮಂತಪ್ಪ, ಉಪ್ಪಾರ ಸೋಮಪ್ಪ, ಹತ್ತಿ ಅಡಿವೆಪ್ಪ, ಎಚ್.ಪ್ರಭು, ತುರಾಯಿನಾಯ್ಕ, ಶಬ್ಬೀರ್, ಗುಂಡ್ರು ಹನುಮಂತ, ಎಚ್.ಎಂ.ನೂರಿ, ಜಂದಿಸಾಬ್, ಅಜೀಜ್‍ಉಲ್ಲಾ, ತತ್ತಿ ಕಾಸಿಂ ಮತ್ತಿತರರಿದ್ದರು.