ಹೊಸಪೇಟೆ:
ನಾನು ಯಾವುದೇ ಅರ್ಜಿ ಹಾಕಿ, ಬೇಡಿ ಅಧ್ಯಕ್ಷ ಸ್ಥಾನ ಪಡೆದಿಲ್ಲ, ಪಕ್ಷಕ್ಕಾಗಿ ದುಡಿದ್ದನ್ನು ಗುರುತಿಸಿ ವರಿಷ್ಠಾರೇ ನನ್ನ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ ಎಂದು ಜೆಡಿಎಸ್(ಜಾತ್ಯಾತೀತ) ತಾಲೂಕು ಘಟಕದ ಅಧ್ಯಕ್ಷ ಎಂ. ಬಸಪ್ಪ(ಮೇಡ್ಲೇರಿ) ತಿಳಿಸಿದರು.
ನಗರದ ಹಂಪಿ ರಸ್ತೆಯಲ್ಲಿ ನೂತನ ಕಚೇರಿಯಲ್ಲಿ ಅಧಿಕಾರಿವಹಿಸಿಕೊಂಡ ಬಳಿಕ ಮಾತನಾಡಿದರು. ಕಳೆದ ಒಂದು ವರ್ಷದಿಂದ ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಆದರೆ ಇಲ್ಲಿಯೇ ಇದ್ದ ಪಕ್ಷದ ಹಿರಿಯ ಮುಖಂಡರು ಎಂದೆನ್ನೇಸಿಕೊಂಡವರು ಈ ಬಗ್ಗೆ ಗಂಭೀರವಾಗಿ ಗಮನಹರಿಸಿದೆ ನಾನು ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ಬಳಿಕ ಸ್ಥಳೀಯನಲ್ಲ ಎಂದು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ ಎಂದರು.
ಹೊಸಪೇಟೆ ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನರು, ಮುಖಂಡರೊಂದಿಗೆ ಉತ್ತಮ ಒಡನಾಟಹೊಂದಿರುವೆ. ನನಗೆ ಇದು ಹೊಸ ಸ್ಥಳವಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು 10-15 ದಿನದೊಳಗೆ ಪದಾಧಿಕಾರಿಗಳ ನೇಮಕವನ್ನುಮಾಡುವೆ. ಹಳ್ಳಿ ಹಳ್ಳಿಗೆ ತೆರಳಿ ಸಿಎಂ ಕುಮಾರಸ್ವಾಮಿ ಅವರ ಜನಪರ ಕಾರ್ಯಕ್ರಮಗಳ ಬಗ್ಗೆ ಪ್ರಚಾರಮಾಡುವುದರ ಜೊತೆಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸಿಎಂ ಕುಮಾರ ಸ್ವಾಮಿ ಅವರ ಗ್ರಾಮವಾಸ್ತವ್ಯವನ್ನು ಹೊಸಪೇಟೆ ತಾಲೂಕಿನಲ್ಲಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಅತ್ತಾಯ್ ರಸೂಲ್‍ಸಾಬ್, ಹೋಬಳಿ ಘಟಕದ ಅಧ್ಯಕ್ಷ ಹುಲುಗಪ್ಪ, ಕಮಲಾಪುರದ ಮೆಹಬೂಬ್ ಬಾಷಾ, ಅಯ್ಯಾಳಿ ಮೂರ್ತಿ, ಸುಜಾತಾ, ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕಪ್ಲಿ, ದೇವರೆಡ್ಡಿ ಮುಂತಾದವರು ಇದ್ದರು.