ಪಟ್ಟಣ ಪಂಚಾಯತಿಯಲ್ಲಿ ಗೆಲುವ ವಿಶ್ವಾಸವಿದೆ:ಗವಿಯಪ್ಪ

ಹೊಸಪೇಟೆ:

   ಪ್ರಧಾನಿ ನರೇಂದ್ರ ಮೋದಿರವರ ಕಾರ್ಯಕ್ರಮಗಳಿಂದ ಕಮಲಾಪುರ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಗವಿಯಪ್ಪ ತಿಳಿಸಿದರು. 

    ಕಮಲಾಪುರ ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು, 20 ವಾಡ್ 9ಗಳಿಗೆ 140 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಪ್ರತಿ ವಾಡ್ 9ಗಳಲ್ಲಿಯೂ ಆರೇಳು ಆಕಾಂಕ್ಷಿಗಳು ಅರ್ಜಿ ಹಾಕಿದ್ದರು ಎಂದರು.ಕಮಲಾಪುರ ಹಾಗೂ ಹೊಸಪೇಟೆ ಭಾಗದ ಮುಖಂಡರನ್ನು ಸೇರಿಸಿ ನಡೆಸಿದ ಸಮೀಕ್ಷೆ ಹಿನ್ನೆಲೆಯಲ್ಲಿ 20 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

     20 ವಾಡ್9ಗಳಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿದೆ. 9 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಒಟ್ಟಾರೆ 20 ಉತ್ತಮ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿದೆ. ಕೆಲಸ ಮಾಡುವ ಉತ್ಸಾಹ ಇರುವವರಿಗೆ ಟಿಕೆಟ್ ನೀಡಲಾಗಿದೆ. ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇಬ್ಬರಿಗೆ ಅಲ್ಪಸಂಖ್ಯಾತರಿಗೂ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ ಯಾವುದೆ ಬೇಧವಿಲ್ಲ. ಎಲ್ಲರಿಗೂ ಆದ್ಯತೆ ನೀಡಲಾಗಿದೆ. 15 ವಾಡ್9ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

     ಹೊಸಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಯಾವುದೇ ಘೋಷದಡಿ ಅಥವಾ ಜಾತಿ ಹೆಸರಿನಡಿ ಚುನಾವಣೆ ನಡೆಸಿಲ್ಲ. ಕ್ಷೇತ್ರದಲ್ಲಿ ಸಾಮರಸ್ಯ ವಾತಾವರಣ ಇದೆ ಎಂದರು.ರಾಜಕಾರಣದಲ್ಲಿ ಎಲ್ಲ ಕಾಲಕ್ಕೂ ಒಳೆಯತನ ಕೆಲಸಮಾಡಲ್ಲ. ಕಾರ್ಯಕರ್ತರೊಂದಿಗೆ ಗಟ್ಟಿಯಾಗಿ ಇರುವೆ. ಅವರ ಕಷ್ಟ ಸುಖದಲ್ಲಿ ಭಾಗೀಯಾಗಿರುವೆ ಎಂದು ಹೇಳಿದರು.

    ಕ್ಷೇತ್ರದಲ್ಲಿ ಒಂದು ಮುಖಂಡತ್ವದ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೆವೆ. ಎಲ್ಲರಿಗೂ ಅವಕಾಶ ದೊರೆಯಬೇಕು. ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಬಾರದು. ಎಲ್ಲರಿಗೂ ಜನರ ಸೇವೆಗೆ ದೊರೆಯಬೇಕು. ಅಧಿಕಾರ ಯಾವುದೆ ಒಂದು ಕುಟುಂಬ , ಜಾತಿಗೆ ಸೀಮಿತವಾಗಬಾರದು ಎಂದು ತಿಳಿಸಿದರು.

     ಕುಡಿವ ನೀರು ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಕಮಲಾಪುರ ಕೆರೆ ಅಭಿವಯ ಪಡೆಸಲು ಯೋಜನೆ ಇದೆ. ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ತಳವಾರಘಟ್ಟದಿಂದ ಕುಡಿವ ನೀರಿನ ಪೈಪ್ ಲೈನ್ ಮತ್ತು ಬಸ್ ನಿಲ್ದಾಣ ನಿರ್ಮಾಣ ಮತ್ತು ಪುರಸಭೆಗೆ ಮೇಲ್ದರ್ಜೆಗೆ ಏರಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದೇವೇಂದ್ರಪ್ಪ ಅವರಿಂದ ಪ್ರಚಾರಕ್ಕೆ ಚಾಲನೆ ನೀಡಲಗುವುದು. ಕೊನೆಯ ದಿನದಲ್ಲಿ ಶಾಸಕ ಶ್ರೀರಾಮುಲು ಅವರ ನೇತೃತ್ವದಲ್ಲಿ ದೊಡ್ಡ ರ್ಯಾಲಿ ನಡೆಸಲಾಗುವುದು ಎಂದರು.

      ಪಕ್ಷವೂ ವಿಶ್ವಾಸಕ್ಕೆ ತೆಗೆದುಕೊಂಡಿದೆ. ನಾನು ಪಕ್ಷ ನಿಡಿದ ಜವಾಬ್ದಾರಿಯನ್ನು ನಿಭಾಯಿಸುವೆ. ಪಕ್ಷವನ್ನು ಮತ್ತಷ್ಟು ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.

      ಪಕ್ಷದ ತಾಲೂಕು ಅಧ್ಯಕ್ಷ ಅನಂತ ಪದ್ಮನಾಭ ಮಾತನಾಡಿ, ಕಮಲಾಪುರ ಕೆರೆ ಹೂಳೆತ್ತುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗು ವುದು. ಕೆರೆ ಪುನರುಜ್ಜೀವನ ನಡೆಸಲಾಗುವುದು. ಪಕ್ಷ ಮಾಜಿ ಶಾಸಕ ಗವಿಯಪ್ಪ ಅವರಿಗೆ ಜವಾಬ್ದಾರಿ ನೀಡಿದೆ. ಎಲ್ಲರೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸಮಾಡಲಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಮುಖಂಡರಾದ ಜಯತೀರ್ಥ, ಫಯಾಜ್, ಗುಂಡಿ ರಾಘವೇಂದ್ರ, ನಾಗಯ್ಯ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap