ಬಳ್ಳಾರಿ
ಬಳ್ಳಾರಿ ಜಿಪಂ ಅಧ್ಯಕ್ಷ ಸ್ಥಾನವನ್ನು ಕಳೆದ ಎರಡೂವರೆ ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹೈಕಮಾಂಡ್ ನಮಗೆ ಪೂರ್ಣ ಐದು ವರ್ಷಗಳ ಕಾಲ ಅವಧಿಗೆ ತಾವೇ ಅಧ್ಯಕ್ಷರು ಅಂತ ಹೇಳಿದೆ. ಆದರೇ ಕೆಲವರು ತಮ್ಮ ಹಿತಾಸಕ್ತಿಗೊಸ್ಕರ ನಾನಾ ಆಟವಾಡುತ್ತಿದ್ದು, ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧವಿರುವುದಾಗಿ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ತಿಳಿಸಿದ್ದಾರೆ.
ತಮ್ಮನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈಗ ನಾನು ಅಧ್ಯಕ್ಷರಾಗಿ ಎರಡೂವರೆ ವರ್ಷಗಳಾಗಿದೆ. ಬೇರೆಯವರಿಗೆ ನೀಡಬೇಕು ಅಂತ ಕೆಲವರು ನಾನಾ ಆಟವಾಡುತ್ತಿದ್ದಾರೆ ಎಂದು ಅವರ ಹೆಸರುಗಳ್ನು ಪ್ರಸ್ತಾಪಿಸುತ್ತಾ ಅತೃಪ್ತಿಯನ್ನು ಹೊರಹಾಕಿದ ಅವರು, ಸ್ಥಳೀಯ ನಾಯಕತ್ವ ಸೇರಿದಂತೆ ಹೈಕಮಾಂಡ್ ಕೂಡ ನನ್ನ ಬೆಂಬಲಕ್ಕಿದೆ ಎಂದರು.
ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸುವ ವೇದಿಕೆಯಾಗಿರುವ ಜಿಪಂ ಸಾಮಾನ್ಯ ಸಭೆಗೆ ತಾವು ಬರದೇ ಬರುವವರಿಗೂ ಏನೇನೋ ಹೇಳಿ ಬರದಂತೆ ಮಾಡುವುದರ ಮೂಲಕ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸುವ ಮತ್ತು ಬಳ್ಳಾರಿ ಅಭಿವೃದ್ಧಿಗೆ ಕೈ ಜೋಡಿಸುವುದಕ್ಕೆ ಹಿಂದಡಿ ಹಿಡುತ್ತಿದ್ದಾರೆ ಎಂದು ಹೇಳಿದರು.ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಮಾತನಾಡಿದರು. ಈ ಸಂದರ್ಭದಲ್ಲಿ ಕೆಲ ಜಿಪಂ ಸದಸ್ಯರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ