ಜೇನುಹುಳು ಇಲ್ಲದಿದ್ದರೆ ಮಾನವನ ಅಂತ್ಯವಾಗುತ್ತದೆ..!!

ದಾವಣಗೆರೆ

    ನಾಲ್ಕು ವರ್ಷಗಳ ಕಾಲ ಜೇನುಹುಳುಗಳ ಅಸ್ತಿತ್ವ ಈ ಜಗತ್ತಿಲ್ಲ ಇಲ್ಲವೆಂದರೆ ಮನುಷ್ಯ ಅಂತ್ಯನಾಗುತ್ತಾನೆಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟಿನ್ ಹೆಳಿದ್ದಾರೆ ಎಂದು ಜೇನು ಕೃಷಿ ತಜ್ಞರಾದ ಮಧುಕೇಶ್ವರ ಜನಕ ಹೆಗಡೆ ತಿಳಿಸಿದರು.

      ಜಿಲ್ಲಾ ತೋಟಗಾರಿಕೆ ವತಿಯಿಂದ ಇಂದು ಗಾಜಿನ ಮನೆ ಆವರಣದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿಯಲ್ಲಿ ಜೇನು ಕೃಷಿ ಹಾಗೂ ಮಾವು ಬೆಳೆ ಬಲವರ್ಧನೆ ಕಾರ್ಯಕ್ರಮದಡಿ ಆಯೋಜಿಸಲಾಗಿದ್ದ ತಾಂತ್ರಿಕ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಜೇನು ಕೃಷಿ ರೈತರಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ತಂದು ಕೊಡುವಂತಹ ಕೃಷಿಯಾಗಿದೆ ಎಂದರು.

    ಜೇನು ಸಾಕಣೆಯಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ಜೇನು ಹುಳುವಿನ ಸಂತತಿ ಕಡಿಮೆಯಾಗಿರುವುದರಿಂದ ಕಾಡಿನ ಸಸ್ಯಗಳಲ್ಲಿ ಪರಾಗ ಸ್ಪರ್ಶ ಕ್ರಿಯೆಯಾಗದೆ ಬೀಜಗಳ ಉತ್ಪಾದನೆ ಕಡಿಮೆಯಾಗಿದೆ. ಜೇನು ಹುಳುಗಳು 2600 ಹೂಗಳಿಂದ ಮಧುವನ್ನು ತಂದು 280 ಬಾರಿ ಕಡೆದು ಗೂಡಿನೊಳಗೆ ತುಪ್ಪವನ್ನು ಮಾಡುತ್ತವೆ ಎಂದರು.

      ಜೇನು ಹುಳು ಸಾಕಣೆಯಿಂದ ರೈತೆರಿಗೆ ಅಧಿಕ ಲಾಭವಿದ್ದು, ಜೇನಿನ ಪರಾಗಕ್ಕೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ರೂ.20 ಸಾವಿರದಷ್ಟು ಬೆಲೆಯಿದೆ. ಜೇನಿನ ಪರಾಗವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಬಳಕೆಯಾಗುತ್ತಿದ್ದು, ಮುಖದಲ್ಲಿನ ಕಲೆ, ಮೊಡವೆಗಳ ನಿವಾರಣೆ ಜೊತೆಗೆ ಮುಖದ ಕಾಂತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

      ಜೇನುಹುಳು ಸಾಕಣಿಕಾ ಡಬ್ಬಿಗಳನ್ನು ಬೇರೆ ಬೇರೆ ಹೂಗಳಿರುವ ಜಾಗದಲ್ಲಿಟ್ಟು ಬೇರೆ ಬೇರೆ ಹೂಗಳ ಜೇನುತುಪ್ಪವನ್ನು ಉತ್ಪಾದಿಸಬಹುದು. ಜೇನುಹುಳುಗಳ ಚುಚ್ಚುವಿಕೆಯು ಲಾಭದಾಯಕವಾಗಿದ್ದು, ಜೇನುಹುಳುಗಳ ಚುಚ್ಚುವಿಕೆಯಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರೈತರು ಜೇನುಹುಳು ಸಾಕಣೆ ಪೆಟ್ಟಿಗೆಗಳನ್ನು ಹೆಚ್ಚಿಸಿಕೊಂಡು ಜೇನುಹುಳು ಸಂತತಿಯನ್ನು ಬೆಳೆಸಬೇಕು. ಒಂದು ರಾಣಿ ಹುಳು ಇದ್ದರೆ ಒಂದು ಜೇನು ಕುಟುಂಬ ತಯಾರಿಸಬಹುದು ಎಂದರು.

     ತೋಟಗಾರಿಕೆ ಉಪನಿರ್ದೇಶಕರಾದ ಲಕ್ಷ್ಮೀಕಾಂತ್ ಬೊಮ್ಮನ್ನರ್ ಮಾತನಾಡಿ, ರೈತರು ಮತ್ತು ರೈತ ಮಹಿಳೆಯರು ಜೇನು ಉತ್ಪಾದನೆ ಮಾಡಬಹುದು. ಸರ್ಕಾರ ಜೇನು ಕೃಷಿಗೆ ಅತ್ಯಂತ ವಿಶೇಷ ಕಾಳಜಿ ವಹಿಸುತ್ತಿದೆ. ತೊಟಗಾರಿಕೆ ಇಲಾಖೆಯಿಂದ ರೂ.4500 ಗಳಿಗೆ ಜೇನುಹುಳು ಸಮೇತ ಸ್ಟ್ಯಾಂಡ್ ಮತ್ತು ಪೆಟ್ಟಿಗೆಗಳನ್ನು ನೀಡಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರು ಒಂದು ಉದ್ಯೋಗವಾಗಿ ಜೇನು ಕೃಷಿ ಮಾಡಬಹುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಎಂ.ಜಿ ಬಸವನಗೌಡ, ರೈತರು ಹಾಗೂ ರೈತ ಮಹಿಳೆಯರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap