ಜಮ್ಮು-ಕಾಶ್ಮೀರದ ಬಟೋಟೆಯಲ್ಲಿ ಗ್ರೆನೇಡ್ ದಾಳಿ

ನವದೆಹಲಿ:

    ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನ ಬಟೋಟೆ ಪ್ರದೇಶದಲ್ಲಿ ಭಾರತೀಯ ಸೇನಾ ಬೆಂಗಾವಲಿನ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ.   ಸ್ಥಳಕ್ಕೆ ಬಂದ ರಂಬನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಶರ್ಮಾ, ಚಕ್ವಾ ಕ್ಯಾಂಪ್‌ನಲ್ಲಿ ಭಯೋತ್ಪಾದಕರು ಸೇನೆಯ ಆರ್‌ಒಪಿ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ದಾಳಿಯಲ್ಲಿ ಯಾವುದೇ ಸಾವು ಆಗಿಲ್ಲ. ಆದರೆ, ಸೇನೆ, ಪೊಲೀಸ್ ಮತ್ತು ಇತರ ಭದ್ರತಾ ಸಂಸ್ಥೆಗಳು ಈ ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.   ಬೆಳಿಗ್ಗೆ 7: 30 ರ ಸುಮಾರಿಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) 244 ರಲ್ಲಿ ಬಟೋಟೆ ಎಂಬಲ್ಲಿ ಸಿವಿಲ್ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರು. ನಂತರ, ಸೈನ್ಯ ಮತ್ತು ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link