ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಸಮೂಹಕ್ಕೆ ಸಂಪೂರ್ಣ ರಕ್ಷಣೆ

ಚಳ್ಳಕೆರೆ

        ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯಾಧ್ಯಕ್ಷ, ಯುವ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ಮಹಿಳೆಯರ ಮೀಸಲಾತಿಯನ್ನು ಶೇ.33ಕ್ಕೂ ಹೆಚ್ಚು ಮಾಡುವ ವಿಶ್ವಾಸವನ್ನು ಶಾಸಕ ಟಿ.ರಘುಮೂರ್ತಿ ವ್ಯಕ್ತ ಪಡಿಸಿದರು.

          ಅವರು, ಶುಕ್ರವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಮಹಿಳೆಯರ ಶಕ್ತಿ ದೇಶದ ಶಕ್ತಿ ಎಂಬ ಆಂದೋಲನಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ರಾಷ್ಟ್ರದಲ್ಲಿ ರೂಪಿತವಾದ ಬಹುತೇಕ ಕಾನೂನುಗಳು ಮಹಿಳೆಯರ ಸಂರಕ್ಷಣೆಗಾಗಿ ಮಹಿಳೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ರೂಪಿತವಾಗಿದ್ದರೂ ಸಹ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರವೂ ಸಹ ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ.

            ಮಹಿಳೆ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ಮಹಿಳಾ ಸಂಘಟನೆಗಳು ಸಂಘಟನಾತ್ಮಕವಾಗಿ ಹೋರಾಟ ನಡೆಸಬೇಕು. ಜಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರ ರಾಣಿ ಚನ್ನಮ್ಮ, ಒನವಕೆ ಓಬ್ವವನಂತಹ ಈ ನಾಡಿನಲ್ಲಿ ಮಹಿಳೆಯ ದೌರ್ಜನ್ಯ ನೋವು ತರುವ ವಿಷಯವಾಗಿದೆ. ಮಹಿಳೆಯರು ಹೆಚ್ಚು ಜಾಗೃತರಾಗಿ ದೈರ್ಯದಿಂದ ಮುನುಗ್ಗಬೇಕು. ಕ್ಷೇತ್ರದ ಶಾಸಕನಾಗಿ ನಾನು ಸಹ ಮಹಿಳೆಗೆ ಎಲ್ಲಾ ರೀತಿಯ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದರು.

            ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಕಾಂಗ್ರೆಸ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಬಿ.ಯೋಗೇಶ್‍ಬಾಬು, ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರ ಪಡೆಯುವ ಉದ್ದೇಶದಿಂದ ಮಹಿಳೆಯರನ್ನು ಜಾಗೃತಿಗೊಳಿಸುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ದೆಯ ತನಕ ಕಾಮುಕ ಕೀಚಕರು ಮಹಿಳಾ ಸಮೂಹವನ್ನು ಕಾಡುತ್ತಿದ್ದು, ಇವರಿಗೆ ಬುದ್ದಿ ಕಲಿಸಲು ಇಡೀ ಮಹಿಳಾ ಸಮೂಹ ಜಾಗೃತವಾಗಬೇಕಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಲು ಯುವ ಕಾಂಗ್ರೆಸ್ ಘಟಕ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

          ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬ್ಯಾದರ್ಲಿ ಮಾತನಾಡಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಯುವ ಕಾಂಗ್ರೆಸ್ ಘಟಕ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಹೊಸ ಆತ್ಮವಿಶ್ವಾಸ ತುಂಬಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಯುವತಿಯರು, ಮಹಿಳಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಂತಹ ಕಾರ್ಯಕ್ರಮದಲ್ಲಿ ಸಕ್ರಯವಾಗಿ ಭಾಗವಹಿಸಿ ಮಹಿಳಾ ಸಮೂಹಕ್ಕೆ ರಕ್ಷಣೆ ನೀಡುವ ಕುರಿತು ಚಿಂತನೆ ನಡೆಸಬೇಕಿದೆ. ಯುವ ಕಾಂಗ್ರೆಸ್ ಘಟಕ ರಾಜ್ಯದ ಯಾವುದೇ ಮಹಿಳೆಯ ಮೇಲೂ ದರ್ಪ ದೌರ್ಜನ್ಯ ಹಾಗೂ ಲೈಂಗಿಕ ಆಕ್ರಮಣ ನಡೆಯದಂತೆ ಜಾಗೃತೆ ವಹಿಸಲಿದೆ ಎಂದರು.

           ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಶಿವಕುಮಾರ್, ಪ್ರೊ.ಚೈತನ್ಯರೆಡ್ಡಿ, ಕೃಷ್ಣಂನಾಯ್ಕ, ರಾಕೇಹಳ್ಳಿ ಉಲ್ಲಾಸ, ಶ್ರೀನಿವಾಸ್ ಬಂಗ್ಲೆ, ಸುನಿಲ್‍ಕುಮಾರ್ ಬಿದರಿ, ಮಮತ, ಮಧುಪಾಲೇಗೌಡ, ಮಾಲೀಪಾಟೀಲ್, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಪ್ರಕಾಶ್, ಮಲ್ಲಿಕಾರ್ಜುನ್, ಸುಮಕ್ಕ, ಕವಿತಾ, ಸುವiಭರಮಣ, ಸುಜಾತ, ರಾಘವೇಂದ್ರ, ವಿರೂಪಾಕ್ಷ, ಜೈತುಂಬಿ ಮುಂತಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಸಿ.ಎಂ.ಶಿವಕುಮಾರಸ್ವಾಮಿ ವಹಿಸಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಸಮೂಹಕ್ಕೆ ಸಂಪೂರ್ಣ ರಕ್ಷಣೆ ಹಾಗೂ ಹೆಚ್ಚಿನ ಮೀಸಲಾತಿ-ಶಾಸಕ ರಘುಮೂರ್ತಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link