ಹರಪನಹಳ್ಳಿ :
ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಗೂಡ್ಸ್ ವಾಹನದಲ್ಲಿದ್ದ ದಾಖಲೆ ರಹಿತ ರೂ.1.09,370 ಹಣವನ್ನು ಚಿಗಟೇರಿ ಪೋಲೀಸ್ ಠಾಣೆಯ ಕಣ್ಗಾವಲು ತಂಡದವರು ಜಫ್ತು ಮಾಡಿಕೊಂಡಿದ್ದಾರೆ.
ಮಾ.24ರ ಬೆಳಗ್ಗೆ 8.20ರ ಸಮಯದಲ್ಲಿ ಪಾವನಪುರ ಗ್ರಾಮದ ಪಿ.ಹನುಮಂತಪ್ಪ ಎಂಬುವವರು ದಾಖಲೆ ರಹಿತ ಹಣ ಹೊಂದಿದ್ದರು. ವಿಚಾರಿಸಿದಾಗ ದಾಖಲೆ ಇಲ್ಲದಿರುವುದು ಕಂಡುಬಂದಿದೆ. ಬೊಲೆರೋ ವಾಹನ ಕೆಎ-17, ಡಿ.4192 ಸಂಖ್ಯೆಯ ವಾಹನದಲ್ಲಿದ್ದ ಹಣ ಜಫ್ತು ಟಿ.ನಾಗೇಶ್ ವಶಕ್ಕೆ ಪಡೆದುಕೊಂಡು,ಹರಪನಹಳ್ಳಿ ಉಪಖಜಾನೆಯಲ್ಲಿ ಠೇವಣಿ ಇಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
